ಹಾನಗಲ್ಲ :
ದೇಶಕ್ಕಾಗಿ ಸಮರ್ಥ ನಾಯಕತ್ವ ನೀಡಿದ ಶ್ಯಾಮ್‍ಪ್ರಸಾದ್ ಮುಖರ್ಜಿಯವರ ದ್ಯೇಯ ನಿಷ್ಠೆ ಕಾರ್ಯಕ್ಕೆ ಫಲ ಸಿಕ್ಕಿದ್ದು, ಈಗ ದೇಶದಲ್ಲಿ ಭಾರತೀಯ ಜನತಾ ಪಕ್ಷದ ಸರಕಾರ ಇಡೀ ದೇಶದ ಶಕ್ತಿಯಾಗಿ ಆಡಳಿತ ನಡೆಸುತ್ತಿದೆ. ಎಂದು ಶಾಸಕ ಸಿ.ಎಮ್.ಉದಾಸಿ ನುಡಿದರು.
ಹಾನಗಲ್ಲಿನಲ್ಲಿ ಶ್ಯಾಮ್‍ಪ್ರಸಾದ್ ಮುಖರ್ಜಿಯವರ 66ನೇ ಬಲಿದಾನದ ಸ್ಮರಣೋತ್ಸವದ ಕಾರ್ಯಕ್ರಮದಲ್ಲಿ ಅವರ ಭಾವ ಚಿತ್ರಕ್ಕೆ ಪುಷ್ಟನಮನ ಸಲ್ಲಿಸಿ ಮಾತನಾಡಿದ ಅವರು, ಬದುಕನ್ನು ದೇಶಕ್ಕಾಗಿ ಮುಡಿಪಿಟ್ಟು ಸೇವೆ ಸಲ್ಲಿಸಿದ ಶ್ಯಾಮ್ ಪ್ರಸಾದ್ ಮುಖರ್ಜಿಯವರ ಆದರ್ಶ ಸಮಾಜ ಕಟ್ಟುವ ಹಾಗೂ ದೇಶಕ್ಕಾಗಿ ಒಳ್ಳೆಯ ಆಡಳಿತ ನೀಡುವ ಕನಸು ಹೊಂದಿದ್ದರು. ಈಗ ಅವರ ಕನಸು ನನಸಾಗಿದೆ ಭಾರತೀಯ ಜನತಾ ಪಕ್ಷ ಅವರ ಆದರ್ಶಗಳನ್ನು ಅನುಸರಿಸಿಕೊಂಡು ಬೆಳೆದು ಈಗ ಇಡೀ ದೇಶದಲ್ಲಿ ಅತ್ಯತ್ತಮ ಆಡಳಿತಕ್ಕೆ ಹೆಸರಾಗಿದೆ.
ಅವರ ತ್ಯಾಗದ ಬಲಿದಾನದ ಜೀವನ ಇಂದಿಗೂ ಇಡೀ ಜನಮಾನಸದಲ್ಲಿ ಹಚ್ಚ ಹಸಿರಾಗಿದೆ. ಎಂದ ಅವರು, ದೇಶ ಮೊದಲು ಎಂಬ ಸಿದ್ದಾಂತದ ಮೇರೆಗೆ ದೇಶಕಟ್ಟುವ ಕೆಲಸದಲ್ಲಿ ರಾಜಕಾರಣ ಇರಬೇಕೆ ಹೊರತು, ಅಧಿಕಾರದಲ್ಲಿರುವ ರಾಜಕಾರಣದಲ್ಲಿ ಅಲ್ಲ. ರಾಜಕಾರಣ ದಲ್ಲಿ ಸೊಲಲಿ, ಗೆಲ್ಲಲಿ ಭಾರತ ಮೊದಲು ಎಂಬ ನಿಷ್ಠುರರಾಗಿರಬೇಕು ಎಂದರು.
ಮಾಜಿ ಪುರಸಭೆ ಅದ್ಯಕ್ಷ ಕಲ್ಯಾಣ ಕುಮಾರ ಶೆಟ್ಟರ ಮಾತನಾಡಿ, ಶ್ಯಾಮ್ ಪ್ರಸಾದ್ ಮುಖರ್ಜಿಯವರು ಭಾರತೀಯ ಜನಸಂಘದಲ್ಲಿ ಗುರುತಿಸಿಕೊಂಡು ಅನೇಕ ಹೋರಾಟ ಮಾಡಿದಂತಹ ನೇರ ನಿಷ್ಟುರವಾದಿಯಾಗಿದ್ದರು, ದೇಶಾದ್ಯಂತ ಅಖಂಡ ಭಾರತದ ಬಗ್ಗೆ ಬದ್ರತೆಯನ್ನು ಇಟ್ಟುಕೊಂಡಂತಹ ಮಹಾನ್ ವ್ಯಕ್ತಿಯಾಗಿದ್ದರು ಎಂದರು.
ತಾಲೂಕ ಬಿಜೆಪಿ ಅದ್ಯಕ್ಷ ನಿಂಗರಾಜ ಗೊಬ್ಬೇರ ಮಾತನಾಡಿ, ಏಕ್ ಭಾರತ ಶ್ರೇಷ್ಠ ಭಾರತ್ ಎಂಬ ಸಂದೇಶವನ್ನು ಸಾರಿದ ಏಕೈಕ ವ್ಯಕಿ ಎಂದರೆ ಶ್ಯಾಮ್‍ಪ್ರಸಾದ್ ಮುಖರ್ಜಿಯವರು. ಅಖಂಡ ಭಾರತಕ್ಕಾಗಿ ತನ್ನ ಪ್ರಾಣವನ್ನೆ ಮುಡಿಪಾಗಿಟ್ಟು ದೇಶ ಮೊದಲು ಎಂಬ ಬದ್ದತೆಯಿಂದ ಜಾಗೃತಿಯನ್ನು ಮೂಡಿಸಿದಂತಹ ನೇರ ನುಡಿಯ ವ್ಯಕಿತ್ವ ಹಾಗೂ ಅವರು ಹಾಕಿಕೊಟ್ಟ ಸಂದೇಶ ಮಾರ್ಗದರ್ಶನ ಅವಿಸ್ಮರಣೀಯ ಎಂದರು.
ಈ ಸಂಧರ್ಭದಲ್ಲಿ ರಾಜು ಗೌಳಿ, ಪರುಸಭಾ ಸದಸ್ಯರಾದ ಹಸೀನಾ ಬಿ ನಾಯ್ಕ್, ಜಮೀರ ಅಹ್ಮದ್ ದರ್ಗಾ, ಕೋಟೆಪ್ಪ ಚಿಕ್ಕಣ್ಣನವರ, ಜಿ.ಎಸ್.ದೇಶಪಾಂಡೆ, ಸಿದ್ದನಗೌಡ ಪಾಟೀಲ, ಗಣೇಶ ಮೂಡ್ಲಿ, ಸಂತೋಷ ಟೆಕೋಜಿ, ಸಂತೋಷ ಭಜಂತ್ರಿ, ಲಕ್ಷ್ಮವ್ವ ಕಳೆಕೋಟಿ, ಚೈತ್ರಾ ಕಂಬಾಳಿಮಠ, ಈರಣ್ಣಾ ಗೌಳಿ, ಮುಂತಾದವರಿದ್ದರು.