ನವ ಜೋಡಿಗಳು ಹಾಗೂ ಬಂಧುಗಳಿಂದ ಮತದಾನ ಪ್ರತಿಜ್ಞೆ ಸ್ವೀಕಾರ

ಹಾವೇರಿ

       ಅಕ್ಷತೆ ಅಲಂಕಾರ, ಸಿಹಿಭೋಜನ, ಗಟ್ಟಿಮೇಳದ ಸಂಭ್ರಮದ ನಡುವೆ ಸಾಮಾಜಿಕ ಜಾಗೃತಿ ಮೆರೆದ ವಧು-ವರರು ಹಾಗೂ ಬಂಧು-ಬಳಗ ಸ್ವೀಪ್ ಸಮಿತಿ ಅಧಿಕಾರಿಗಳ ಕರೆಗೆ ಓಗೊಟ್ಟು ಮತದಾನ ಪ್ರತಿಜ್ಞೆ ಸ್ವೀಕರಿಸಿದ ಅಪರೂಪದ ಪ್ರಸಂಗ ಬ್ಯಾಡಗಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಭಾನುವಾರು ಜರುಗಿದೆ.

       ಬ್ಯಾಡಗಿ ತಾಲೂಕಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರ ಪೂಜಾರಿ ನೇತೃತ್ವದ ಮತದಾರರ ವ್ಯವಸ್ಥಿತ ಶಿಕ್ಷಣ ಹಾಗೂ ಪಾಲ್ಗೊಳ್ಳುವಿಕೆ ತಾಲೂಕಾ ಮಟ್ಟದ ಸಮಿತಿ ಭಾನುವಾರು ಆಯೋಜಿತವಾಗಿದ್ದ ಕದರಮಂಡಲಗಿ, ಖುರ್ದಕೋಡಿಹಳ್ಳಿ ಹಾಗೂ ಹಿರೇಅಣಜಿ ಗ್ರಾಮಗಳಲ್ಲಿ ಜರುಗಿದ ಮದುವೆ ಸಮಾರಂಭಗಳಲ್ಲಿ ಭಾಗವಹಿಸಿದ್ದ ಅಪಾರ ಸಂಖ್ಯೆ ಬಂಧುಗಳಿಗೆ ನವ ವಿವಾಹಿತರಿಗೆ ಮತದಾನದ ಜಾಗೃತಿ ಮೂಡಿಸಿದರು.

      ಮದುವೆಯಷ್ಟೇ ಪವಿತ್ರವಾದ ಮತದಾನದಲ್ಲಿ ಭಾಗವಹಿಸಿ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗೆಲ್ಲಿಸಿ ಎಂದು ಮನವಿ ಮಾಡಿಕೊಂಡರು. ಕರಪತ್ರಗಳನ್ನು ವಿತರಿಸಿ ಮತದಾನದ ಪ್ರತಿಜ್ಞಾ ವಿಧಿ ಬೋಧಿಸಿದರು. ಬ್ಯಾಡಗಿ ತಾಲೂಕಿನ ಕದರಮಂಡಲಗಿಯ ಶ್ರೀಕಾಂತೇಶ್ವರ ದೇವಾಲಯದಲ್ಲಿ ಜರುಗಿದ ಹಾನೂರು-ಹಿರೇಬುದಿಹಾಳ-ಅರಬಗೊಂಡ ಗ್ರಾಮದವರಾದ ವಧು-ವರರಾದ ಹರೀಶಕುಮಾರ-ವನೀತಾ, ಸುನೀಲ-ವೇದಾ, ಅನೀಲ-ಸುಧಾ ಜೋಡಿಗಳು ಖುರ್ದಕೋಡಿಹಳ್ಳಿ ವರನ ಸ್ವಗೃಹದಲ್ಲಿ ಜರುಗಿದ ಲಿಂಗರಾಜ-ವಿದ್ಯಾ ಜೋಡಿ ಮತ್ತು ಹಿರೇಅಣಜಿ ಗ್ರಾಮದ ವರನ ಸ್ವಗೃಹದಲ್ಲಿ ನಡೆದ ಹಣಮನಗೌಡ-ಕವಿತಾ ಜೋಡಿಗಳ ಮದುವೆ ಸಮಾರಂಭದಲ್ಲಿ ನವಜೋಡಿಗಳು ಭಾಗವಹಿಸಿ ಮತದಾನ ಪ್ರತಿಜ್ಞೆ ಸ್ವೀಕರಿಸಿದರು.

       ಬೀಗರು ಬಂಧುಗಳು ಗಟ್ಟಿಮೇಳದ ಸಂಭ್ರಮ, ಸಿಹಿತಿನಿಸುಗಳ ಮಧ್ಯೆಯು ನವದಂಪತಿಗಳು ಮತದಾನ ಜಾಗೃತಿ ಕಾರ್ಯಕ್ರಮಕ್ಕೆ ಅವಕಾಶ ಕಲ್ಪಿಸಿ ಸಾರ್ವತ್ರಿಕ ಮೆಚ್ಚುಗೆಗೆ ಪಾತ್ರರಾದರು.ಮತದಾನ ಪ್ರತಿಜ್ಞೆ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿಗಳಾದ ಪರಶುರಾಮ ಅಗಸನಳ್ಳಿ, ನೀಲಪ್ಪ ಕಜ್ಜರಿ ಭಾಗವಹಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link