ಬಳ್ಳಾರಿ :
ಜಿಲ್ಲಾ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಗಣಕಯಂತ್ರ ನೌಕರ ಗೌತಮ್ ಎಸಿಬಿ ಅಧಿಕಾರಿಗಳು ಬೀಸಿದ ಬಲೆ ಜಿಲ್ಲಾ ಅಲ್ಪಸಂಖ್ಯಾತ ಇಲಾಖೆಯ ಕಛೇರಿಯಲ್ಲಿ ಬಿದ್ದಿದ್ದಾನೆ.
ಬಳ್ಳಾರಿ ನಗರದ ಸೋನಿಯಾಗಾಂಧಿ ಬಿಎಡ್ ಕಾಲೇಜಿನ ವಿದ್ಯಾರ್ಥಿನೀ ಅಂಬ್ರೀನ ಬಾನು ಎಂಬ ವಿದ್ಯಾರ್ಥಿನಿಯ ಸಹಾಯ ಧನ (ಸ್ಕಾಲರ್ ಶಿಫ್) ಮಂಜೂರಿಗೆ 1000 ರೂ. ಲಂಚದ ಬೇಡಿಕೆ ಇಟ್ಟಿದ್ದ ಗಣಕಯಂತ್ರ ನೌಕರ ಗೌತಮ್ ಕೊನೆಗೆ 600 ರೂ.ಗಳಿಗೆ ಒಪ್ಪಿದ್ದಾನೆ.
ಅದರಂತೆ ವಿದ್ಯಾರ್ಥಿನಿ ಸಂಜೆ 5:00 ಗಂಟೆಗೆ ಜಿಲ್ಲಾ ಅಲ್ಪಸಂಖ್ಯಾತರ ಕಛೇರಿಯಲ್ಲಿ 600 ರೂ ಹಣ ಕೊಡುವಾಗ ಗೌತಮ್ ಎಂಬ ವ್ಯಕ್ತಿಯು ಎಸಿಬಿ ಅಧಿಕಾರಿಗಳು ಬೀಸಿದ ಬಲೆಗೆ ಬಿದ್ದಿದ್ದಾನೆ
ಬಳ್ಳಾರಿ ವಲಯ ಎಸಿಬಿ ಎಸ್.ಪಿ. ಜ್ಯೋತಿ ವೈಜನಾಥ ಮಾರ್ಗದರ್ಶನದಲ್ಲಿ ಡಿ.ವೈ.ಎಸ್.ಪಿ.ಚಂದ್ರಕಾಂತ ಪೂಜಾರಿ ನೇತೃತ್ವದಲ್ಲಿ ಇನ್ಸ್ ಪೆಕ್ಟರ್ ಪ್ರಭುಲಿಂಗಯ್ಯ ಎಸ್.ಹೀರೆಮಠ ಹಾಗೂ ಸಿಬ್ಬಂದಿ ವರ್ಗದವರು ನಡೆಸಿದ ಮಿಂಚಿನ ದಾಳಿಗೆ ಗೌತಮ್ ಸಿಕ್ಕಿ ಬಿದ್ದು ನ್ಯಾಯಾಲಯದ ವಶಕ್ಕೆ ಒಪ್ಪಿಸಿದರು.