ಹಾವೇರಿ :
ನಗರಕ್ಕೆ ೨೪ ಗಂಟೆ ನೀರು ಕಲ್ಪಿಸಲು ಜನಪ್ರತಿನಿಧಿಗಳು ಮುಂದಾಗಿದ್ದು. ಹಾಲಿ ಶಾಸಕ ನೆಹರೂ ಓಲೇಕಾರ ತರಾತುರಿಯಲ್ಲಿ ಎರಡು ಮೂರು ತಿಂಗಳ ಹಿಂದೆ ನಗರದ ಅಶ್ವಿನಿನಗರ , ಶಿವಾಜಿ ನಗರದಲ್ಲಿ ಚಾಲನೆ ನೀಡಿದರು. ಇದರಿಂದ ನಗರದ ಜನರು ಸಹ ೨೪ ಗಂಟೆ ನಿರಂತರ ನೀರು ಸಿಗುತ್ತದೆ ಎಂದು ಖುಷಿಯಲ್ಲಿದ್ದರು . ೨೪ ಗಂಟೆ ನೀರು ಬಂದಿದ್ದು ಮಾತ್ರ ಕೇವಲ ಮೂರು ದಿನ .ಇದೀಗ ವಾರಕ್ಕೆ ಒಂದು ಬಾರಿ ಮಾತ್ರ ನೀರು ಸಿಗುವಂತಾಗಿದೆ.
ನಗರಸಭೆ ಪ್ರತಿ ಮನೆ ಮನೆಗೂ ಪ್ರತಿ ನಲ್ಲಿಗೂ ಮೀಟರ್ ಅಳವಡಿಸಿತ್ತು. ಆದರೆ ಯಾವುದೇ ಪ್ರಯೋಜನ ಆಗಿಲ್ಲ.ಇನ್ನೂ ನಗರಕ್ಕೆ ಕುಡಿಯುವ ನೀರಿನ ಸಲುವಾಗಿ ತುಂಗಭದ್ರಾ ನದಿಯಿಂದ ನಗರಕ್ಕೆ ಸರಬರಾಜು ಮಾಡಿ ನೀರು ಬಿಡಲು ಮುಂದಾಗಿದ್ದ ಶಾಸಕರು. ಈಗ ಅಧಿಕಾರಿಗಳು ಮತ್ತು ಗುತ್ತಿಗೆದಾರರ ನಿರ್ಲಕ್ಷ್ಯ ಎಂದು ಹೇಳುವಂತಾಗಿದೆ.
ಮಳೆಗಾಲ ಸಮಯದಲ್ಲಿ ನಗರದ ಜನರು ವಾರಕ್ಕೆ ಒಂದು ಬಾರಿ ನೀರನ್ನು ಹಿಡಿಯುವಂತಾಗಿದೆ.ಬೇಸಿಗೆಯಲ್ಲಿ ಯಾವ ರೀತಿ ನೀರಿಗೆ ಹಾಹಾಕಾರ ಆಗಬಹುದು ಎಂಬ ಸಮಸ್ಯೆ ನಗರ ಜನತೆಗೆ ಎದುರಾಗಿದೆ.ಜನರ ನೀರಿನ ಬೇಡಿಕೆಯನ್ನು ಇಡೇರಿಸಲು ಜನಪ್ರತಿನಿಧಿಗಳು ಹಾಗೂ ಸಂಬಂಧಿಸಿದ ಅಧಿಕಾರಿಗಳು ಎಚ್ಚೆತ್ತು ಜನರ ನೀರಿನ ಸಮಸ್ಯೆ ಪರಿಹರಿಸುತ್ತಾರೋ ಕಾದು ನೋಡಬೇಕಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ