ಶಿಗ್ಗಾವಿ :
ಪಟ್ಟಣದ ಸವಣೂರ ಸರ್ಕಲ್‍ನ ಹತ್ತಿರವಿರುವ ಪುರಸಭೆ ಮಳಿಗೆಯಲ್ಲಿ ವಿದ್ಯುತ್ ಶಾಕ್ ಸರಕ್ಯೂಟ್ ಆಗಿ 7 ಕಂಪ್ಯೂಟರ್, ಪ್ರಿಂಟರ್ಸ್, ಸ್ಕ್ಯಾನರ್, ಸಿಸಿ ಟಿವಿ ಸೇರಿದಂತೆ ಸುಮಾರು 2 ಲಕ್ಷ 50 ಸಾವಿರ ರೂಪಾಯಿಗಳಷ್ಟು ತಾಂತ್ರಿಕ ಸಾಮಾನುಗಳು ಸುಟ್ಟು ಕರಕಲಾದ ಘಟನೆ ಬುಧವಾರ ರಾತ್ರಿ 2 ಘಂಟೆಯ ಸುಮಾರಿಗೆ ನಡೆದಿದೆ.
ಚೇತನಗೌಡ ವಿರುಪಾಕ್ಷಗೌಡ ಪಾಟೀಲ ಅವರಿಗೆ ಸೇರಿದ ಸ್ಕ್ಯಾ-ಟೆಕ್ ಕಂಪ್ಯೂಟರ್ಸ್ ಎಂಬ ಅಂಗಡಿಯಾಗಿದ್ದು ಪುರಸಭೆ ಮಳಿಗೆಯನ್ನು ಬಾಡಿಗೆ ಪಡೆದು ವ್ಯಾಪಾರ ನಡೆಸುತ್ತಿದ್ದರು ಎನ್ನಲಾಗಿದ್ದು ಸಮಯಕ್ಕೆ ಸರಿಯಾಗಿ ಅಗ್ನಿಶಾಮಕ ಠಾಣೆಯವರು ಬಂದು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ, ಈ ಕುರಿತು ಶಿಗ್ಗಾವಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ