ಮಿಡಿಗೇಶಿ ಹಾಲು ಮತ ಮಹಾಸಭಾ (ರಿ) ಸಂಘ ಅಸ್ಥಿತ್ವಕ್ಕೆ

ಮಿಡಿಗೇಶಿ

       ರಾಜ್ಯ ಮಟ್ಟದಲ್ಲಿ ಹಾಲುಮತ ಮಹಾಸಭಾ ವತಿಯಿಂದ ಮಿಡಿಗೇಶಿ ಹೋಬಳಿ ಮಟ್ಟದಲ್ಲಿ ಸಂಘಟನೆಯನ್ನು ಬಲಗೊಳಿಸಿ, ಮಠಗಳನ್ನು ಸಬಲೀಕರಣಗೊಳಿಸಿ ಜಾಗೃತಿಗೊಳಿಸಿಲಾಗುತ್ತದೆ. ಅದರಂತೆ ಅ. 07 ರ ಭಾನುವಾರದಂದು ಬೆಳಗ್ಗೆ ಮಿಡಿಗೇಶಿಯ ಕನಕಯುವಕ ಸಂಘದ ಸಮುದಾಯದ ಭವನದಲ್ಲಿ ಹಾಲುಮತ ಮಹಾಸಭಾ ಜಿಲ್ಲಾ ಅಧ್ಯಕ್ಷ ಗರುಡಪ್ಪ ನವರ ಅಧ್ಯಕ್ಷತೆಯಲ್ಲಿ ಸಭೆ ಸೇರಿ ಚರ್ಚೆ ನಡೆಸಲಾಯಿತು.

       ಸದರಿ ಹಾಲುಮತ ಮಹಾಸಭಾ ಅಧ್ಯಕ್ಷರಾಗಿ ಶ್ರೀಶ್ರೀಶ್ರೀ ನಿರಂಜನಾಪುರಿ ಮಹಾಸ್ವಾಮಿಗಳವರೇ ಅಧ್ಯಕ್ಷರಾಗಿರುತ್ತಾರೆ. ಸ್ವಾಮಿಜೀಯವರ ಹೇಳಿಕೆಯ ಪ್ರಕಾರ ಕುರುಬ ಸಮಾಜದವರು ಒಂದು ದಿನದಲ್ಲಿ ಒಂದು ರೂಪಾಯಿ ಪ್ರತಿಯೊಬ್ಬ ಜನಾಂಗದವರು ಸಮುದಾಯಕ್ಕಾಗಿ ಕ್ರೋಡೀಕರಿಸುವಂತೆ ಸಮುದಾಯದ ಕೆಲಸ ಕಾರ್ಯಗಳಲ್ಲಿ ಭಾಗಿಯಾಗುವಂತೆ, ಮುಂಬರುವ ಕನಕ ಒಡ್ಡೋಲಗ ಮಾಡುವಂತೆ, ಸಮುದಾಯದ ಮಠವು ಪಕ್ಷಾತೀತವಾಗಿ ಬೆಳವಣಿಗೆಯಾಗಬೇಕು ಎಂದು ತಿಳಿಸಿದರು.

       ಶಿಕ್ಷಕ ಎಂ ಮಹೇಶ್‍ರವರು ಮಾತನಾಡಿದರು. ಮಿಡಿಗೇಶಿ ಹೋಬಳಿಯ ಹಾಲುಮತ ಮಹಾಸಭಾ ಸಂಘದ ಅಧ್ಯಕ್ಷರಾಗಿ ಆನಂದರನ್ನು ಆಯ್ಕೆ ಮಾಡಲಾಗಿದೆ. ಪ್ರಧಾನ ಕಾರ್ಯದರ್ಶಿಯಾಗಿ ಚಿನ್ನೇನಹಳ್ಳಿ ನಾಗರಾಜು ಅಲಿಯಾಸ್ ನಾಗೇಂದ್ರ ಗೌರಾವಾಧ್ಯಕ್ಷರಾಗಿ, ಬ್ರಹ್ಮದೇವರಹಳ್ಳಿ ರಘುಪತಿ, ನೀಲಿಹಳ್ಳಿ ಮೀನಪ್ಪ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುತ್ತಾರೆ.

        ಇದೇ ಸಂದರ್ಭದಲ್ಲಿ ಕನಕ ಯುವ ಸಂಘದ ಅಧ್ಯಕ್ಷ ಚಂದ್ರಶೇಖರಯ್ಯ, ಕಾರ್ಯದರ್ಶಿ ಎಂ.ಮಹೇಶ್, ಗೌರವಾಧ್ಯಕ್ಷ ಶಾಂತರಾಮ್, ಸಂಘದ ಮಾಜಿ ಅಧ್ಯಕ್ಷರಾದ ಅಂಜನಪ್ಪ, ರಾಮಾಂಜಿನೇಯ, ಪ್ರಧಾನ ಕಾರ್ಯದರ್ಶಿ ರಾಜೇಂದ್ರ, ಮೈಲಣ್ಣ, ಮಂಜುನಾಥ್, ನಾಗಭೂಷಣ್ , ಗೊಂಚಗಾರ್ ಮಂಜುನಾಥ್, ಮಾಜಿ ಗ್ರಾ.ಪಂ.ಅಧ್ಯಕ್ಷ ನಾಗರಾಜಪ್ಪ, ಗಿರೀಶ್, ಕೃಷ್ಣ, ಮಾಳಪ್ಪ, ಮೈಲಾರಪ್ಪ ಸೇರಿದಂತೆ ಸುಮಾರು ಐವತ್ತು ಜನ ಸಮುದಾಯದವರು ಪಾಲ್ಗೊಂಡಿದ್ದರು.

 

Recent Articles

spot_img

Related Stories

Share via
Copy link
Powered by Social Snap