ಬಳ್ಳಾರಿ.
ಇಂದುನಗರದ ಐಎಂಎ ಹಾಲ್‍ನಲ್ಲಿಎಸ್.ಯು.ಸಿ.ಐ (ಕಮ್ಯುನಿಸ್ಟ್) ಪಕ್ಷದ72ನೇ ಸಂಸ್ಥಾಪನಾ ದಿನ ಆಚರಿಸಲಾತು. ಎಸ್.ಯು.ಸಿ.ಐ (ಕಮ್ಯುನಿಸ್ಟ್) ಪಕ್ಷದರಾಜ್ಯ ಕಾರ್ಯದರ್ಶಿಗಳಾದ ಕಾ.ಕ.ಉಮಾಅವರು ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದರು.
ಅವರು ಮಾತನಾಡುತ್ತಾ “ಇಂದು ಕೇವಲ ಶೇ 1% ಭಾರತೀಯರುದೇಶದ 73%ಸಂಪತ್ತಿನಒಡೆಯರಾಗಿದ್ದಾರೆ! ನಮ್ಮದೇಶದಅಧಿಕಾರವನ್ನು ಈ ದೇಶದ ಬೆರಳೆಣಿಕೆಯ ಬಂಡವಾಳಶಾಹಿಗಳು ಮತ್ತುಅವರ ನಿಷ್ಠಾವಂತ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ, ಇತರೆ ಪಕ್ಷಗಳು ಹಾಗೂ ಅಧಿಕಾರಿಗಳು ಮಾತ್ರ ಅನುಭವಿಸುತ್ತಿದ್ದಾರೆ ಎಂಬುದಕ್ಕೆ ಇನ್ನೇನು ಸಾಕ್ಷಿ ಬೇಕು” ಎಂದರು.
ಮುಂದುವರೆಯುತ್ತಾ, “ಸ್ವಾತಂತ್ರ ಸಂಗ್ರಾಮದಲ್ಲಿಕ್ರಾಂತಿಕಾರಿ ಹೋರಾಟಗಾರರಾಗಿದ್ದ, ಈ ಯುಗದ ಮಹಾನ್ ಮಾಕ್ರ್ಸವಾದಿ ಚಿಂತಕರಾದ ಕಾ|| ಶಿವದಾಸ್ ಘೋಷ್‍ರವರು, ಅಂದುಗಾಂಧೀಜಿಯವರ ನೇತೃತ್ವದಕಾಂಗ್ರೆಸ್ ನಾಯಕತ್ವವು, ಈ ದೇಶದ ಬಂಡವಾಳಶಾಹಿಗಳಿಗೆ ಅಧಿಕಾರ ಹಸ್ತಾಂತರ ಮಾಡಲುಉತ್ಸುಕವಾಗಿದೆಎಂದು ಮನಗಂಡರು. ಈ ಸ್ವಾತಂತ್ರ್ಯವು ಸಾಮಾನ್ಯಜನರ ಸಮಸ್ಯೆಗಳನ್ನು ಪರಿಹಿಸುವ ದಿಕ್ಕಿನಲ್ಲಿಲ್ಲವೆಂದು ಅರಿತರು.
ಹಾಗೆಯೇ, ಬರೀ ಬ್ರಿಟಿಷರ ವಿರುದ್ಧ ಹೋರಾಟ ಮಾಡುವುದಲ್ಲದೇ ಕಾರ್ಮಿಕರನ್ನು ಮತ್ತುರೈತರನ್ನು ಸಂಘಟಿಸಿ ಸಮಾಜವಾದಿ ಕ್ರಾಂತಿಯನ್ನು ನೆರವೇರಿಸಬೇಕು. ಇಲ್ಲದಿದ್ದರೆ, ನಮ್ಮ ಸ್ವಾತಂತ್ರ ‘ಅರೆ ಬೆಂದ’ ಸ್ವಾತಂತ್ರವಾಗುತ್ತದೆಎಂದು ಅಂದಿನ ಸಿಪಿಐ ಪಕ್ಷದ ನಾಯಕರಿಗೂಕೂಡ ಎಚ್ಚರಿಸಿದ್ದರು. ಅಂದಿನ ನಾಮಾಂಕಿತಕಮ್ಯೂನಿಸ್ಟ್ ಪಕ್ಷದ ನಾಯಕರು ಸಹ ಅವರಎಚ್ಚರಿಕೆಯನ್ನುಅಸಡ್ಡೆಯಿಂದ ತಿರಸ್ಕರಿಸಿದರು” ಎಂದು ವಿಷಾದ ವ್ಯಕ್ತಪಡಿಸಿದರು.
ನಂತರ ಮಾತನಾಡುತ್ತಾ “ ಸಿಪಿಐ ಪಕ್ಷದತಪ್ಪುರಾಜಕೀಯದಾರಿ, ನಿಲುವುಗಳು ಹಾಗೂ ನಾಯಕರ ಹಾಗೂ ಕಾರ್ಯಕರ್ತರ ವೈಯಕ್ತಿಕಜೀವನ, ನಡೆ-ನುಡಿಗಳನ್ನು ಆಳವಾಗಿ ಅಭ್ಯಾಸ ಮಾಡಿದ ಕಾ.ಶಿವದಾಸ್ ಘೋಷ್‍ಅದೊಂದು ನೈಜಕಮ್ಯುನಿಷ್ಟ್ ಪಕ್ಷವಲ್ಲ ಬದಲಿಗೆ ಪೆಟ್ಟಿ-ಬೂಜ್ರ್ವ ಪಕ್ಷವೆಂದು ತೀರ್ಮಾನಿಸಿದರು. ಪ್ರತಿಕೂಲ ಪರಿಸ್ಥಿತಿಗಳಿಂದ ಎಳ್ಳಷ್ಟು ಎದೆಗುಂದದೆ ಕಾ|| ಶಿವದಾಸ್ ಘೋಷ್‍ರವರು ಭಾರತದ ದುಡಿಯುವ ಜನತೆಯನ್ನು ಬಂಡವಾಳಶಾಹಿ ಶೋಷಣೆಯಿಂದ ವಿಮುಕ್ತಿಗೊಳಿಸಲು ತಮ್ಮಜೊತೆಗಿದ್ದ ಕೆಲವೇ ಸಹಯೋಧರೊಂದಿಗೆ, ಲೆನಿನ್‍ವಾದಿ ಮಾದರಿಯಒಂದು ನೈಜಅಕೃತ್ರಿಮಕಮ್ಯೂನಿಸ್ಟ್ ಪಕ್ಷವನ್ನುಕಟ್ಟಲು ತೀರ್ಮಾನಿಸಿದರು. ಈ ಮೂಲಕ ನಮ್ಮದೇಶದ ನಿರ್ದಿಷ್ಟ ಪರಿಸ್ಥಿತಿಗೆ ಸರಿಹೊಂದುವಂತೆ ಮಾಕ್ರ್ಸ್‍ವಾದವನ್ನು ಅಳವಡಿಸಿ ಸಮಾಜವಾದಿ ಕ್ರಾಂತಿಯನ್ನು ನೆರವೇರಿಸಲು ಬುನಾದಿ ಹಾಕಿದರು.
ದರಂತೆಯೇ 1948ರ ಏಪ್ರಿಲ್ 24ರಂದು ನಮ್ಮ ಪಕ್ಷ ಸೋಷಲಿಸ್ಟ್‍ಯೂನಿಟಿ ಸೆಂಟರ್‍ಆಫ್‍ಇಂಡಿಯಾ (ಕಮ್ಯೂನಿಸ್ಟ್) ಪಶ್ಚಿಮ ಬಂಗಾಳದಲ್ಲಿ ಜನ್ಮತಾಳಿತು.ಇಂದು ಈ ಪಕ್ಷ ಬೃಹದಾಕಾರವಾಗಿ ಬೆಳೆದು ನಿಂತಿದೆ.ದೇಶದಇಪ್ಪತ್ತಕ್ಕೂ ಹೆಚ್ಚು ರಾಜ್ಯಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಸಾವಿರಾರುಜನರ ಸದಸ್ಯತ್ವ ಹೊಂದಿದೆ ಮತ್ತು ಲಕ್ಷಾಂತರ ಬೆಂಬಲಿಗರನ್ನು ಪಡೆದುಕೊಂಡಿದೆ. ಹೀಗಾಗಿ, ಪ್ರತಿ ವರ್ಷಏಪ್ರಿಲ್ 24ರಂದು, ಈ ದೇಶದಲ್ಲಿ ಸಮಾಜವಾದಿ ಕ್ರಾಂತಿಯ ಮೂಲಕ ಶೋಷಿತಜನತೆಯನ್ನು ಬಂಡವಾಳಶಾಹಿಗಳ ಶೋಷಣೆಯಿಂದ ಮುಕ್ತಗೊಳಿಸುವ ಸಂಕಲ್ಪತೊಡುವ ದಿನವಾಗಬೇಕಾಗಿದೆ.
ಸ್ಟಾಲಿನ್‍ರವರ ನಿಧನದ ನಂತರ ಕಾ|| ಶಿವದಾಸ್ ಘೋಷ್‍ರವರು ವಿವಿಧ ದೇಶಗಳ ಕಮ್ಯೂನಿಸ್ಟ್ ಪಕ್ಷಗಳಲ್ಲಿ ಕಂಡು ಬಂದಂತಹ ಪರಿಷ್ಕರಣಾವಾದವನ್ನುಅರ್ಥಮಾಡಿಕೊಂಡು ಈ ಪ್ರವೃತ್ತಿಯನ್ನು ಹೋರಾಡಲು ನಾಯಕರಿಗೂ ಮತ್ತು ಸಾಮಾನ್ಯ ಸದಸ್ಯರಿಗೂ ಸೂಕ್ತ ಮಾರ್ಗದರ್ಶನವನ್ನು ನೀಡಿದ್ದಾರೆ. ಪಕ್ಷದ ಸಂಸ್ಥಾಪನಾ ದಿನವನ್ನುಆಚರಿಸುವುದುಒಂದು ಸಂಪ್ರದಾಯವಲ್ಲ, ಬದಲಿಗೆ, ಶಿವದಾಸ್ ಘೋಷ್‍ರವರ ಚಿಂತನೆಗಳ ಆಧಾರದ ಮೇಲೆ ನಮ್ಮಲ್ಲಿರುವ ನ್ಯೂನತೆಗ¼ನ್ನು ಸರಿಪಡಿಸಿಕೊಂಡು, ಕ್ರಾಂತಿಕಾರಿ ಹೋರಾಟದಲ್ಲಿ ನಮ್ಮನ್ನು ನಾವು ಹೆಚ್ಚು ತೊಡಗಿಸಿಕೊಳ್ಳಲು ಸಂಕಲ್ಪತೊಡುವ ದಿನವಾಗಬೇಕು” ಎಂದರು.