ಅಪಘಾತದಲ್ಲಿ ಗಾಯಗೊಂಡ ವೃದ್ಧನನ್ನು ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದ ಯುವಕ

ಹಾನಗಲ್ಲ :

      ಬೈಕ್ ಅಪಘಾತದಲ್ಲಿ ಗಾಯಗೊಂಡಿದ್ದ 65 ವರ್ಷ ಯಜಮಾನನನ್ನು ತನ್ನ ಕಾರಿನಲ್ಲಿ ಕರೆದುಕೊಂಡು ಅಕ್ಕಿಆಲೂರ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆದ ಸ್ಥಳಿ ಯುವಕ ಗೀರಿಶ.

      ಶುಕ್ರವಾರ ತಾಲೂಕಿನ ಅಕ್ಕಿಆಲೂರಿನ ತುಳಜಾಭವಾನಿ ದೇವಸ್ಥಾನ ಹತ್ತಿರ ಇರುವ ಡೊಳ್ಳೇಶ್ವರ ಕ್ರಾಸ್ ಬಳಿ ಮದ್ಯಾಹ್ನ ಘಟನೆ ಸಂಭವಿಸಿದ್ದು, ಮಹಮ್ಮದ ಜಲೀಲ್ ಅಬ್ದುಲ್‍ಖಾದರಸಾಬ್ ಸವಣೂರ (65) ಗಾಯಗೊಂಡ ಬೈಕ್ ಸವಾರ, ತಾಲೂಕಿನ ಬಾಳೂರ ಗ್ರಾಮದವನಾಗಿದ್ದಾನೆ.

ಘಟನೆ ವಿವರ :

     ಶಿರಸಿ ಕಡೆಯಿಂದ ವೇಗವಾಗಿ ಬರುತ್ತಿದ್ದ ಕಾರಿಗೆ ಅಕ್ಕಿಆಲೂರ ಕಡೆಯಿಂದ ಡೊಳ್ಳೇಶ್ವರಕ್ಕೆ ಹೊರಟಿದ್ದ ಮಹ್ಮದ್‍ಜಲೀಲ ಸವಣೂರವರ ಬೈಕಿಗೆ ಗುದ್ದಿದ ಪರಿಣಾಮ ಬೈಕ್ ಸವಾರ ಕಾಲಿಗೆ ಹಾಗೂ ತಲೆಗೆ ತೀವ್ರ ಪೆಟ್ಟಾಗಿ ನರಳಾಡುವ ಸಂಧರ್ಭದಲ್ಲಿ ಅದೆ ಮಾರ್ಗವಾಗಿ ಬರುತ್ತಿದ್ದ ಸ್ಥಳಿಯ ಯುವಕ ಗಿರೀಶ ಕರಿದ್ಯಾವಣ್ಣವರ ತಮ್ಮ ಕಾರಿನಲ್ಲಿ ಗಾಯಾಳನ್ನು ಅಕ್ಕಿಆಲೂರ ಆಸ್ಪತ್ರೆಗೆ ಪ್ರಥಮ ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆದಿದ್ದಾರೆ. ನಂತರ ಗಾಯಳು ಮಹಮ್ಮದ್ ಜಲೀಲರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಕೀಮ್ಸ್ ಆಸ್ಪತ್ರೆಗೆ ಕರೆದೊಯ್ಯಲಾಯಿತು ಎನ್ನಲಾಗಿದೆ. ಈ ಘಟನೆ ಹಾನಗಲ್ಲ ಪೊಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link