ಹಗರಿಬೊಮ್ಮನಹಳ್ಳಿ ಹುಡುಗನ “ಒಂಬತ್ತನೇ ಅದ್ಭುತ” ಚಿತ್ರ ಬಿಡುಗಡೆ

ಹಗರಿಬೊಮ್ಮನಹಳ್ಳಿ:

       ಪ್ರತಿಭೆ ಎಂಬುದು ಗುಡಿಸಲಿನಲ್ಲಿ ಹುಟ್ಟಿ ಅರಮನೆಯಲ್ಲಿ ಬೆಳಗುತ್ತದೆ ಎಂದು ಇಂಗ್ಲೀಷ್ ಲೇಖಕನೊಬ್ಬ ಹೇಳುತ್ತಾನೆ. ಇದಕ್ಕೆ ಪುರಾವೆ ಎಂಬಂತೆ ನಮ್ಮ ಕಣ್ಣೆದುರೇ ಹಲವಾರು ನಿದರ್ಶನಗಳಿವೆ. ಇನ್ನು ಚತ್ರ ರಂಗವೆಂಬ ಮಾಯಾನಗರಿಯಲ್ಲಿ ಇಂತಹ ಅದ್ಬುತಗಳು ಆಗಿಂದಾಗ್ಗೆ ನಡೆಯುತ್ತಲೇ ಇರತ್ತವೆ.

      ಎಲ್ಲೋ ಸಣ್ಣ ಪುಟ್ಟ ಪದ್ಯಗಳನ್ನು ಗೀಚುತ್ತಿದ್ದ ಉಪೇಂದ್ರ ರಿಯಲ್ ಸ್ಟಾರ್ ಆಗುತ್ತಾರೆ. ಟಿವಿ ಸೀರಿಯಲ್‍ನಿಂದ ಬಂದ ಗಣೇಶ್, ಯಶ್ ನಂತಹ ನಟರು ಈಗ ನಾಡಿನಾಧ್ಯಂತ ಮನೆಮಾತಾಗಿದ್ದಾರೆ. ಅದೆಲ್ಲಾ ಏಕೆ ನಟನೆಯ ಗಂಧ ಗಾಳಿ ಇಲ್ಲದ ಸಿಕ್ಸ್ ಪ್ಯಾಕ್ ನ ಈ ಕಾಲದಲ್ಲೂ ಯಾವುದೋ ಹಳ್ಳಿಯ ಮೂಲೆಯಿಂದ ವಯಸ್ಸಲ್ಲದ ವಯಸ್ಸಿನಲ್ಲಿ ದಿಡೀರನೆ ಹೊರ ಹೊಮ್ಮಿದ ಗಡ್ಡಪ್ಪ, ಸೆಂಚುರಿ ಗೌಡರಂತಹ ಹಿರಯ ಪ್ರತಿಭೆಗಳು ಸಹ ಕನ್ನಡ ಚಿತ್ರರಂಗಗಳಲ್ಲಿ ಹೆಸರು ಮಾಡಿದ್ದಾರೆ.

       ವರ್ಷಕ್ಕೆ ಏನಿಲ್ಲವೆಂದರೂ ಕನ್ನಡ ಚಿತ್ರರಂಗದಲ್ಲಿ 20 ರಿಂದ 30 ಹೊಸಬರ ಸಿನಿಮಾಗಳು ಚಿತ್ರಮಂದಿರಗಳಿಗೆ ಬಂದಿದ್ದೂ ತಡವಿಲ್ಲ ಹೋದದ್ದೂ ತಡವಿಲ್ಲವೆಂಬಂತೆ ಬಂದು ಹೋಗುತ್ತವೆ. ಇಂತಹ ಸ್ಪರ್ಧಾತ್ಮಕ ಯುಗದಲ್ಲಿ ಸಂತೋಷ್ ಕುಮಾರ್ ಬೆಟಗೇರಿ ಎಂಬ ಹಗರಿಬೊಮ್ಮನಹಳ್ಳಿಯ ಹುಡುಗ ಕೇವಲ ತನ್ನ ಪ್ರತಿಭೆಯಿಂದಲೇ ಚಿತ್ರರಂಗದಲ್ಲಿ ಐದಾರು ವರ್ಷದಿಂದ ದೊಡ್ಡ ದೊಡ್ಡ ಬ್ಯಾನರ್‍ನಡಿಯಲ್ಲಿ ಸಹ ನಿರ್ದೇಶನ ಹಾಗೂ ಇನ್ನಿತರ ಸಿನಿಮಾ ಮೇಕಿಂಗ್ ಕೆಲಸಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಈಗ ತನ್ನ ಕನಸಿನ ಕೂಸಾದ “ಒಂಬತ್ತನೇ ಅದ್ಬುತ” ಎಂಬ ಹೊಸ ಜಾನರ್‍ನ ಚಿತ್ರವನ್ನು ಮಾಡಿದ್ದಾನೆ.

       ಚಿತ್ರರಂಗದಲ್ಲಿ ಯಾವುದೇ ಗಾಡ್‍ಫಾರದ್ ಇಲ್ಲದೆ ಬೆಳೆಯುವುದು ಕಷ್ಟ ಎಂದು ಗೊತ್ತಿದ್ದರೂ ತನ್ನಲ್ಲಿರುವ ಪ್ರತಿಭೆಯನ್ನೇ ನೆಚ್ಚಿಕೊಂಡು ಹೊಸ ಐಡಿಯಾಲಜಿ ಮುಖಾಂತರ ಈ ಚಿತ್ರವನ್ನು ತೆರೆಗೆ ತಂದಿದ್ದಾನೆ.

       ಒಂಬತ್ತನೇ ಅದ್ಬುತ ಚಿತ್ರವು ಟೈಟಲ್‍ನಿಂದಲೇ ಜನರ ಗಮನ ತನ್ನತ್ತ ಸೆಳೆಯುತ್ತಿದ್ದು ಯುಟೂಬ್‍ನಲ್ಲಿ ರಿಲೀಸ್ ಆಗಿರುವ ಟೀಸರ್ ಮತ್ತು ಟ್ರೈಲರ್‍ಗಳು ಈಗಾಗಲೇ ಲಕ್ಷಾಂತರ ವೀವ್‍ಗಳನ್ನು ಪಡೆದಿವೆ. ಕಥೆ, ಚಿತ್ರಕಥೆ, ನಿರ್ದೇಶನ ಹಾಗೂ ನಿರ್ಮಾಣದ ಜೊತೆಗೆ ತಾನೇ ನಾಯಕನಟನಾಗಿ ನಟಿಸುವ ಮೂಲಕ ಸಂತೋಷ್‍ಕುಮಾರ್ ಬೆಟಗೇರಿ ಎಂಬ ಯುವಕ ಚಿತ್ರರಂಗದಲ್ಲಿ ಒಂದು ಅದ್ಬುತವನ್ನೇ ಸೃಷ್ಠಿಸಲು ಹೊರಟಿದ್ದಾನೆ. ಮೊದಲಬಾರಿಗೆ ಇಷ್ಟೆಲ್ಲಾ ವಿಭಾಗಗಳಲ್ಲೂ ತನ್ನನ್ನು ತಾನು ತೊಡಗಿಸಿಕೊಳ್ಳುವ ಈತನ ಭಂಡ ದೈರ್ಯಕ್ಕೆ ಹ್ಯಾಟ್ಸ್‍ಅಪ್ ಹೇಳಲೇಬೇಕು. ತನ್ನ ನಂಬಿಕೆಯನ್ನೇ ಪಣವಾಗಿಟ್ಟು ಇಂತಹ ಹುಂಬ ಸಾಹಸಕ್ಕೆ ಕೈ ಹಾಕಿರುವ ಯುವಕನಿಗೆ ಚಿತ್ರರಂಗದಲ್ಲಿ ಒಳ್ಳೆಯ ನೆಲೆಸಿಗುವಂತಾಗಲಿ.

      ಇನ್ನು ಈ ಒಂಬತ್ತನೇ ಅದ್ಬುತ ಚಿತ್ರದಲ್ಲಿ ಕಾಮಿಡಿ, ಲವ್, ಸಸ್ಪೆನ್ಸ್, ಥ್ರಿಲ್ಲರ್ ಹಾಗೂ ಸಮಾಜಕ್ಕೊಂದು ಉತ್ತಮ ಮೆಸೇಜ್‍ಸಹ ಇದೆ ಎಂಬುದು ನಿರ್ದೇಶಕರ ಮಾತು. ಸೆಂಚುರಿ ಗೌಡರಂತಹ ಹಿರಿಯ ನಟರಿಂದ ಹಿಡಿದು ಹಲವಾರು ಹೊಸಬರಿಂದ ನಿರ್ಮಾಣವಾಗಿರುವ ಈ ಚಿತ್ರ ತನ್ನದೇ ಹೊಸತನದ ನಿರೂಪಣೆಯಿಂದ ಎಲ್ಲರ ಗಮನ ಸೆಳೆಯುತ್ತಿದೆ. ಮಂಡ್ಯಾ, ಉತ್ತರ ಕರ್ನಾಟಕದಲ್ಲಿ ಈ ಚಿತ್ರವನ್ನು ಚಿತ್ರಿಸಲಾಗಿದ್ದು 3 ತರಹದ ಭಾಷೆಯ ಸೊಗಡು ಈ ಚಿತ್ರದಲ್ಲಿ ಕಾಣಬಹುದಿದೆ.

      ಕೇವಲ ಒಂದು “ಶವ”ವನ್ನು ಇಟ್ಟುಕೊಂಡು ಅದರ ಸುತ್ತ ನಡೆಯುವ ಘಟನಾವಳಿಗಳನ್ನು ಚಿತ್ರರಸಿಕರ ಮನ ಮುಟ್ಟುವಂತೆ ಆಸ್ಯದ ಮೂಲಕ ಹೇಳುವ ಪ್ರಯತ್ನವನ್ನು ಮಾಡಲಾಗಿದ್ದು ಈ ಚಿತ್ರ ರೆಗ್ಯುಲರ್ ಪ್ಯಾಟ್ರನ್‍ಗಿಂತ ಬೇರೆಯದ್ದೇ ರೀತಿಯಲ್ಲಿ ನಿರೂಪಣೆ ಮಾಡಿದ್ದೇವೆ ಎಂದು ಸಂತೋಷ್‍ಕುಮಾರ್ ಹೇಳುತ್ತಾರೆ. ಚಿತ್ರದಲ್ಲಿ ರೂಪದರ್ಶಿ ನಯನಸಾಯಿ ಈ ಚಿತ್ರದ ನಾಯಕಿಯಾಗಿದ್ದಾರೆ, ಸುನಿಲ್ ಕೋಷಿ ಸಂಗೀತ ನಿರ್ದೇಶನವಿದ್ದು, ರಾಘವೇಂದ್ರ ಬಿ.ಕೋಲಾರ ಛಾಯಾಗ್ರಹಣದಲ್ಲಿ ಚಿತ್ರ ಅಚ್ಚುಕಟ್ಟಾಗಿ ಮೂಡಿಬಂದಿದೆ.

      ಚಿತ್ರಮಂದಿರಗಳತ್ತ ಜನರೇ ಬರದಿರದ ಈ ದಿನಮಾನಗಳಲ್ಲಿ ಹೊಸ ಯುವಕನೋರ್ವ ತುಂಬು ಉತ್ಸಾಹದಿಂದ ಹೊಸ ಐಡಿಯಾಲಾಜಿ ಇಟ್ಟುಕೊಂಡು ಮಾಡಿರುವ ಈ ಸಿನಿಮಾ ಮೇ 03 ರಂದು ರಾಜ್ಯಾಧ್ಯಂತ ಬಿಡುಗಡೆಯಾಗಲಿದ್ದು ಒಮ್ಮೆ ಬಿಡುವು ಮಾಡಿಕೊಂಡು ಹೋಗಿ ನೋಡಿ ಹೊಸಬರನ್ನು ಹಾರೈಸಿ. ಹೊಸಪ್ರತಿಭೆಗಳು ಚಿತ್ರರಂಗದಲ್ಲಿ ಬೆಳೆಯಲಿ.

      ಪಟ್ಟಣದ ಕೊಟ್ರೇಶ್ವರ ಚಿತ್ರಮಂದಿರ ಮಾಲಿಕ ಐ.ಟ.ಕೊಟ್ರೇಶ್ ಪತ್ರಿಕೆಯೊಂದಿಗೆ ಮಾತನಾಡಿ ನಮ್ಮೂರಿನ ಗ್ರಾಮೀಣ ಪ್ರತಿಭೆಯೊಂದು ಗಾಂಧಿನಗರದಲ್ಲಿ ತನ್ನ ಅಸ್ವಿತ್ವದ ಛಾಪು ಒತ್ತಲು ತಯಾರಾಗಿದ್ದು ಸಂತೋಷ್‍ಕುಮಾರ್ ಬೆಟಗೇರಿ ಎಂಬ ಯುವಕ ನಿರ್ಮಾಣ ಮಾಡಿರುವ ಒಂಬತ್ತನೇ ಅದ್ಭುತ ಚಿತ್ರದ ಹಕ್ಕುಗಳನ್ನು ಚಿತ್ರದುರ್ಗ ಹಾಗೂ ಬಳ್ಳಾರಿ ವಿತರಕರಿಗೆ ವಿತರಣೆಗಾಗಿ ಪರಿಚಯಿಸಿಕೊಡುವ ಮೂಲಕ ನಮ್ಮ ಚಿತ್ರಮಂದಿರದಲ್ಲು ಮೇ 03 ರಂದು ಈ ಸಿನಿಮಾ ರಿಲೀಸ್ ಆಗಲಿದೆ ಎಂದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link