ಜನ ಸಂಪರ್ಕ ಸಭೆ

ಹರಿಹರ:

    ಶಾಸಕ ಎಸ್ ರಾಮಪ್ಪನವರು ನಗರಸಭೆಯ ಸಭಾಂಗಣದಲ್ಲಿ ಏರ್ಪಡಿಸಿದ್ದ ಸಾರ್ವಜನಿಕ ಕುಂದು ಕೊರತೆಗಳ ಸಭೆಯನ್ನು ,ನಗರಸಭೆಯ ಸದಸ್ಯರುಗಳಾದ ಡಿ.ಜಿ. ರಘುನಾಥ್ ಮತ್ತು ಸಿಗ್ಬತ್ ಉಲ್ಲಾ ಅವರು ತಮ್ಮ ಸದಸ್ಯರ ಸಭೆಯನ್ನಾಗಿ ಪರಿವರ್ತಿಸಿಕೊಂಡ ಘಟನೆ ನಡೆಯಿತು.

     ಜನಸಂಪರ್ಕ ಸಭೆಯಲ್ಲಿ ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಶಾಸಕರಿಗೆ ಮನವರಿಕೆ ಮಾಡಿಕೊಡಲು ಅವಕಾಶ ನೀಡದೆ, ಕೇವಲ ತಮ್ಮದೇ ಆದ ವೈಯಕ್ತಿಕ ಸಮಸ್ಯೆಯ ಬಗ್ಗೆ ಪುಂಖಾನುಪುಂಖವಾಗಿ ಡಿಜಿ ರಘುನಾಥ್ ಅವರು ಸಭೆಯಲ್ಲಿ ಮಾತನಾಡಿ, ಸಭೆಯಲ್ಲಿದ್ದ ಸಾರ್ವಜನಿಕರು ಹಾಗೂ ಅಧಿಕಾರಿಗಳಿಗೆ ಬೇಸರ ತರಿಸಿದರು.

    ಆಗ ನಾನೇನು ಕಡಿಮೆ ಎನ್ನುವಂತೆ ಸಿಗ್ಬತ್ ಉಲ್ಲಾ ಸಹ ಬೇರೆ ಯಾವುದೇ ಸಾರ್ವಜನಿಕರಿಗೆ ಅವಕಾಶ ನೀಡದೆ,ತಮ್ಮದೇ ಮತ್ತು ವಾರ್ಡಿನ ಸಮಸ್ಯೆಗಳ ಬಗ್ಗೆ ಸುಮಾರು ಸಮಯವನ್ನು ವ್ಯರ್ಥಗೊಳಿಸಿದರು.

    ಇವರಿಬ್ಬರ ವರ್ತನೆಯಿಂದ ಬೇಸತ್ತ ಸದಸ್ಯರುಗಳಾದ ಕೆ.ಮರಿದೇವ ಮತ್ತು ಶ್ರೀಮತಿ ನಗೀನಾ ಸುಭಾನ್ ಸಾಬ್ ಅವರು ತೀವ್ರ ವಿರೋಧ ವ್ಯಕ್ತಪಡಿಸಿ, ನಾವು ಸದಸ್ಯರಾಗಿದ್ದು ನಮ್ಮದೇ ಸಭೆಯಲ್ಲಿ ಚರ್ಚಿಸೋಣ ಎಂದು ಪರಿಪರಿಯಾಗಿ ಕೇಳಿಕೊಂಡರು.
ಆದರೆ ಅವರ ಮಾತಿಗೆ ಬೆಲೆ ದೊರೆಯದಿದ್ದಾಗ ನಗೀನಾ ಸುಭಾನ್ ಅವರು ಸಭೆಯಿಂದ ಹೊರ ನಡೆದ ಘಟನೆ ಸಹ ನಡೆಯಿತು.

     ಸಭೆಯಲ್ಲಿ ಮುಖ್ಯವಾಗಿ ನಗರಸಭೆಯಿಂದ ನೀಡಲಾಗುವ ಖಾತಾಗಳ ಉತಾರ (ಇsಣಡಿಚಿಛಿಣ) ಸಮಸ್ಯೆಯ ಬಗ್ಗೆಯೇ ಅನೇಕ ಸಾರ್ವಜನಿಕರು ಮತ್ತು ಸದಸ್ಯರುಗಳು ಪ್ರಸ್ತಾಪಿಸಿದರು.ಖಾತಾ ಉತಾರವನ್ನು ಪಡೆಯಲು ಅರ್ಜಿ ಸಲ್ಲಿಸಿದಾಗ,ಅರ್ಜಿಗೆ ಅನೇಕ ಅಧಿಕಾರಿಗಳ ಸಹಿ ಮತ್ತು ಷರಾ ಹಾಕಿಸುವುದು ಹಾಗೂ ಅನೇಕ ದಾಖಲೆಗಳನ್ನು ಕೇಳುವುದು ನಿಲ್ಲಿಸಬೇಕೆಂದು ಬಹುತೇಕ ಸಾರ್ವಜನಿಕರು ಒತ್ತಾಯಿಸಿದರು.

    ಇದಕ್ಕೆ ಪ್ರತಿಯಾಗಿ ಉತ್ತರಿಸಿದ ಪೌರಾಯುಕ್ತರಾದ ಶ್ರೀಮತಿ ಎಸ್ ಲಕ್ಷ್ಮಿಯವರು ಇದು ನಾವು ಮಾಡಿರುವ ನಿಯಮಾವಳಿಗಳು ಅಲ್ಲ ಸರ್ಕಾರದ ಮಟ್ಟದಲ್ಲಿ ಆಗಿರುವ ನಿಯಮಾವಳಿಗಳ ಗಿದ್ದು ನಾವೇನೂ ಮಾಡಲು ಬರುವಂತಿಲ್ಲ, ಎಂದು ಸಭೆಗೆ ಮತ್ತು ಶಾಸಕರಿಗೆ ಮನವರಿಕೆ ಮಾಡಲು ಪ್ರಯತ್ನಿಸಿದರು.

    ಈ ವೇಳೆ ಪೌರಾಯುಕ್ತ ಸಹಾಯಕ್ಕೆ ಬಂದ ಸದಸ್ಯರಾದ ಶಂಕರ್ ಖಟಾವಕರ್ ಅವರು ಮಾತನಾಡಿ ಈಗ ಆಗುತ್ತಿರುವ ತೊಂದರೆಗೆ ಮೂಲ ಕಾರಣ ದೂರದವರಿಂದ ಕೇಳಲಾಗುವ ದಾಖಲೆಗಳು ಮತ್ತು ಅತಿ ಹೆಚ್ಚಿನ ಶುಲ್ಕವಾಗಿ ದ್ದು ಇದನ್ನು ಶಾಸಕರು ಸರ್ಕಾರ ಮಟ್ಟದಲ್ಲಿ ಮತ್ತು ದೂಡಾ ಅಧಿಕಾರಿ ಗಳೊಂದಿಗೆ ಚರ್ಚಿಸಲು ಮನವಿ ಮಾಡಿದರು.

    ಆಗ ಶಾಸಕ ಎಸ್. ರಾಮಪ್ಪನವರು ತಕ್ಷಣ ದೂರ ಅಧಿಕಾರಿಗಳೊಂದಿಗೆ ಸ್ಥಳದಲ್ಲಿಯೇ ಮೊಬೈಲ್ ಮೂಲಕ ಮಾತನಾಡಿ, ಈ ವಾರದೊಳಗೆ ಸಭೆ ನಡೆಸಿ ಚರ್ಚಿಸಿ ಇದಕ್ಕೆ ಒಂದು ದಾರಿ ಮಾಡಿಕೊಡುತ್ತೇನೆ ಎಂದು ಭರವಸೆ ವ್ಯಕ್ತಪಡಿಸಿದರು.

      ತೆಗ್ಗಿನಕೇರಿ ನಿವಾಸಿಗಳು ತಮ್ಮ ವಾರ್ಡಿನಲ್ಲಿ ಕಳೆದ ನಾಲ್ಕು ತಿಂಗಳಿನಿಂದ ಕುಡಿಯುವ ನೀರು ಬರುತ್ತಿಲ್ಲ ಮತ್ತು ಅಲ್ಲಿರುವ ಕೊಳವೆ ಬಾವಿ ಸಹ ದುರಸ್ತಿಯಲ್ಲಿದೆ ಎಂದು ಶಾಸಕರ ಗಮನಕ್ಕೆ ತಂದಾಗ, ಇದಕ್ಕೆ ತೀವ್ರವಾಗಿ ಪ್ರತಿಕ್ರಿಯಿಸಿದ ಶಾಸಕರು ಕುಡಿಯುವ ನೀರಿನ ಸಮಸ್ಯೆ ಅತಿ ಅವಶ್ಯ ಸೇವೆಗಳಲ್ಲಿ ಒಂದಾಗಿದ್ದು ,ಅಲ್ಲಿನ ಸಮಸ್ಯೆಯನ್ನು ತಕ್ಷಣ ಸರಿಪಡಿಸುವಂತೆ ಅಧಿಕಾರಿಗಳಿಗೆ ಸ್ಥಳದಲ್ಲಿಯೇ ಆದೇಶಿಸಿದರು.ನೀರಿನ ನಲ್ಲಿಯ ರಿಪೇರಿ ಕಾರ್ಯ ಮುಗಿಯುವವರೆಗೂ,ಈಗಲೇ ಕೊಳವೆ ಬಾವಿಯನ್ನು ರಿಪೇರಿ ಮಾಡಬೇಕೆಂದು ಸಂಬಂಧಿಸಿದ ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿದರು.

        ಸಭೆಯಲ್ಲಿ ಹೌಸಿಂಗ್ ಬೋರ್ಡ್ ಕಾಲೋನಿ, ಕೇಶವನಗರ ,ವಿದ್ಯಾನಗರ ,ಆಶ್ರಯ ಕಾಲೊನಿ ಹಾಗೂ ಇನ್ನೂ ಅನೇಕ ವಾರ್ಡಿನ ನಿವಾಸಿಗಳು ತಮ್ಮ ವಾರ್ಡಿನ ಸಮಸ್ಯೆಗಳನ್ನು ಶಾಸಕರ ಗಮನಕ್ಕೆ ತಂದರು.

     ಸಭೆಯಲ್ಲಿ ಸಾರ್ವಜನಿಕರ ಪರವಾಗಿ ದೂಡಾ ಮಾಜಿ ಸದಸ್ಯ ಜೀ.ವಿ.ವೀರೇಶ ,ಮಾಲತೇಶ್ ಭಂಡಾರಿ, ಎಚ್ ಸುಧಾಕರ್, ಅಮರಾವತಿ ರೇವಣಸಿದ್ದಪ್ಪ ,ಕೊತ್ವಾಲ್ ಹನುಮಂತಪ್ಪ ,ಮಾಕನೂರು ಹನುಮಂತಪ್ಪ ಮುಂತಾದವರು ಮಾತನಾಡಿದರು.

     ಈ ಸಂದರ್ಭದಲ್ಲಿ ನಗರಸಭಾ ಅಧ್ಯಕ್ಷರಾದ ಶ್ರೀಮತಿ ಸುಜಾತಾ ಡಿ ರೇವಣಸಿದ್ದಪ್ಪ, ಸಿಬ್ಬಂದಿಗಳಾದ ಮಂಜುನಾಥ್, ರವಿಪ್ರಕಾಶ್, ಕೋಡಿ ಭೀಮರಾಯ, ಸಂತೋಷ್ ನಾಯ್ಕ, ನೌಶಾದ್, ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು

                ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap