ಸ್ಕೌಟ್-ಗೈಡ್ಸ್‍ನಿಂದ ಸೇವಾಮನೋಭಾವಕ್ಕೆ ಸಹಕಾರಿ

ಚಿತ್ರದುರ್ಗ:

      ಮಾನಸಿಕ ಹಾಗೂ ದೈಹಿಕವಾಗಿ ಬೆಳವಣಿಗೆಯಾಗಲು ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ವಿದ್ಯಾರ್ಥಿಗಳಿಗೆ ಸಹಕಾರಿಯಾಗಲಿದೆ ಎಂದು ಜಿಲ್ಲಾ ಗೈಡ್ಸ್ ಆಯುಕ್ತೆ ಸುನಿತಾ ಮಲ್ಲಿಕಾರ್ಜುನ್ ಹೇಳಿದರು.

       ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್-ಕರ್ನಾಟಕ ಸ್ಥಳೀಯ ಸಂಸ್ಥೆಯಿಂದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಬುಧವಾರ ಏರ್ಪಡಿಸಲಾಗಿದ್ದ ರೇಂಜರ್ಸ್ ಘಟಕ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

        ರೇಂಜರ್ಸ್‍ನಿಂದ ಕಾಲೇಜಿನ ಪಠ್ಯಪುಸ್ತಕಗಳಿಂದ ಕಲಿಯುವುದಕ್ಕಿಂತಲೂ ಹೆಚ್ಚಾಗಿ ಪ್ರಕೃತಿಯ ನಡುವೆ ಕಲಿಯುವುದು ಸಾಕಷ್ಟಿದೆ. ಇದರಲ್ಲಿ ಕಡ್ಡಾಯವಾಗಿ ವಿದ್ಯಾರ್ಥಿನಿಯರು ಭಾಗವಹಿಸುವುದರಿಂದ ಶಿಸ್ತು, ದೇಶಭಕ್ತಿ, ಸಂಸ್ಕøತಿ-ಸಂಸ್ಕಾರ, ಗುರು-ಹಿರಿಯರು ತಂದೆ ತಾಯಿಗಳನ್ನು ಗೌರವಿಸುವುದರ ಜೊತೆಗೆ ಪರೋಪಕಾರಿ ಹಾಗೂ ಸೇವಾಮನೋಭಾವ ಬೆಳೆಯುತ್ತದೆ ಎಂದು ತಿಳಿಸಿದರು

       ಸ್ಕೌಟ್ಸ್ ಮತ್ತು ಗೈಡ್ಸ್‍ನಿಂದ ಉನ್ನತ ಶಿಕ್ಷಣದಲ್ಲಿ ಮೀಸಲಾತಿ, ರೈಲ್ವೆ ಉದ್ಯೋಗದಲ್ಲಿಯೂ ಮೀಸಲಾತಿ ಅವಕಾಶ ದೊರಕುತ್ತದೆ. ಸ್ವಾವಲಂಭಿಗಳಾಗಿ ಬದುಕಲು ಸಹಕಾರಿಯಾಗುತ್ತದೆ ಎಂದು ಹೇಳಿದ ಸುನಿತಾಮಲ್ಲಿಕಾರ್ಜುನ್‍ರವರು ಈ ಕಟ್ಟಡಕ್ಕೆ ಏನೇನು ಸೌಲಭ್ಯ ಬೇಕೋ ಅದಕ್ಕೆ ಕೈಲಾದಷ್ಟು ಸಹಾಯ ಮಾಡುತ್ತೇನೆಂದು ಭರವಸೆ ನೀಡಿದರು.

      ಸ್ಕೌಟ್ಸ್ ಅಂಡ್ ಗೈಡ್ಸ್ ಸ್ಥಳೀಯ ಸಂಸ್ಥೆ ಕಾರ್ಯದರ್ಶಿ ಪಿ.ವೈ.ದೇವರಾಜ್‍ಪ್ರಸಾದ್ ಮಾತನಾಡುತ್ತ ರೇಂಜರ್ಸ್ ಎಂದರೆ ಶಿಸ್ತಿನ ಸಿಪಾಯಿಗಳಿದ್ದಂತೆ. ಅನ್ಯರಿಗೆ ನೆರವಾಗುವ ಸೇವಾಮನೋಭಾವ ಮೂಡಲಿದೆ. ಭವ್ಯ ಭಾರತ ನಿರ್ಮಿಸುವ ನೀವುಗಳು ನಮ್ಮ ದೇಶ ಎತ್ತ ಸಾಗುತ್ತಿದೆ. ದೇಶವನ್ನಾಳುವ ನಾಯಕರು ಏನು ಮಾಡುತ್ತಿದ್ದಾರೆ ಎಂಬುದರ ಕಡೆ ಗಂಭೀರವಾಗಿ ಚಿಂತಿಸಬೇಕಾಗಿದೆ ಎಂದು ಹೇಳಿದರು.

      125 ವರ್ಷಗಳ ಇತಿಹಾಸವಿರುವ ಸ್ಕೌಟ್ಸ್ ಅಂಡ್ ಗೈಡ್ಸ್‍ಗೆ ತನ್ನದೆ ಆದ ಮಹತ್ವವಿದೆ. ರಾಜ್ಯದಲ್ಲಿ ಐದು ಲಕ್ಷ ವಿದ್ಯಾರ್ಥಿಗಳಿದ್ದಾರೆ. 25 ಸಾವಿರ ಶಿಕ್ಷಕ/ಶಿಕ್ಷಕಿಯರು ಯಾವುದೇ ಪ್ರತಿಫಲವಿಲ್ಲದೆ ಸೇವಾಮನೋಭಾವನೆಯಿಂದ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಯುವ ಜನಾಂಗವನ್ನು ಬಡಿದೆಬ್ಬಿಸಿ ದೇಶಸೇವೆಗೆ ಸನ್ನದ್ದರನ್ನಾಗಿ ಮಾಡುವುದೇ ನಮ್ಮ ಸಂಸ್ಥೆಯ ಉದ್ದೇಶ ಎಂದರು.

     ಧರ್ಮಾಭಿಮಾನ, ಜಾತಿ ಅಭಿಮಾನ ದೇಶದೆಲ್ಲೆಡೆ ತುಂಬಿ ತುಳುಕಾಡುತ್ತಿದೆ. ಆದರೆ ದೇಶಾಭಿಮಾನಿಗಳನ್ನು ಹುಡುಕಾಡಬೇಕಾದಂತ ಪರಿಸ್ಥಿತಿ ನಿರ್ಮಾಣವಾಗಿದೆ. ದೇಶಕ್ಕೆ ವಂಚನೆ ಮಾಡುವವರ ವಿರುದ್ದ ನೀವುಗಳು ಸದಾ ಜಾಗೃತರಾಗಿರಿ ಎಂದು ವಿದ್ಯಾರ್ಥಿನಿಯರನ್ನು ಎಚ್ಚರಿಸಿದ ಪಿ.ವೈ.ದೇವರಾಜ್‍ಪ್ರಸಾದ್ ದೇಶ, ಭಾಷೆ, ನೆಲ, ಜಲ, ಸಂಸ್ಕøತಿ, ಸಂಪತ್ತನ್ನು ಉಳಿಸಬೇಕಾದರೆ ಸ್ಕೌಟ್ಸ್ ಅಂಡ್ ಗೈಡ್ಸ್ ಸಂಸ್ಥೆಯ ಚಟುವಟಿಕೆಯಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.

      ಆರು ವರ್ಷದ ಮಕ್ಕಳಿಂದ ಹಿಡಿದು 25 ವರ್ಷದ ಮಕ್ಕಳಿಗೆ ಶಿಕ್ಷಣ ಕೊಡುವ ವ್ಯವಸ್ಥೆ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯಲ್ಲಿದೆ. ವಾರಕ್ಕೆ ಒಂದು ಗಂಟೆಯಾದರೂ ಬಿಡುವಿನ ವೇಳೆಯಲ್ಲಿ ಸಂಸ್ಥೆಯ ಕೆಲಸದಲ್ಲಿ ತೊಡಗಿಕೊಳ್ಳಿ. ಇದರಿಂದ ಭೌದ್ದಿಕ ಹಾಗೂ ಮಾನಸಿಕವಾಗಿ ಶಕ್ತಿಶಾಲಿಗಳಾಗುತ್ತೀರ ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವನೆಯನ್ನು ರೂಢಿಸಿ ವಿವಿಧತೆಯಲ್ಲಿ ಏಕತೆ ಎನ್ನುವ ಸಂದೇಶವನ್ನು ನೀಡುವುದು ನಮ್ಮ ಮುಖ್ಯ ಗುರಿ ಎಂದು ಸಂಸ್ಥೆಯ ಉದ್ದೇಶವನ್ನು ವಿವರಿಸಿದರು.

      ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ಸಹ ಕಾರ್ಯದರ್ಶಿ ಡಾ.ರಹಮತ್‍ವುಲ್ಲಾ, ಕಾಲೇಜಿನ ಪ್ರೌಭಾರೆ ಪ್ರಾಂಶುಪಾಲರಾದ ಮಂಜುನಾಥ್, ಉಪನ್ಯಾಸಕರುಗಳಾದ ಚನ್ನಕೇಶವ, ಬಸವರಾಜ್, ಸಿದ್ದಪ್ಪ, ಶಕುಂತಲ, ಯಶಸ್ವಿನಿ ವೇದಿಕೆಯಲ್ಲಿದ್ದರು.ಉನನ್ಯಾಸಕ ಚನ್ನಕೇಶವ ಸ್ವಾಗತಿಸಿದರು. ಪ್ರಾಧ್ಯಾಪಕಿ ಆರ್.ಲೀಲಾವತಿ ನಿರೂಪಿಸಿದರು.

 

Recent Articles

spot_img

Related Stories

Share via
Copy link
Powered by Social Snap