ಹೊಸಪೇಟೆ :
ಇದೇ ಮೇ.29ಕ್ಕೆ ನಡೆಯಲಿರುವ ಕಮಲಾಪುರ ಪ.ಪಂ.ಚುನಾವಣೆಗೆ ಕಮಲಾಪುರ ಪಟ್ಟಣದಲ್ಲಿ ಬುಧವಾರ ಕಾಂಗ್ರೆಸ್‍ನಿಂದ 10 ಜನ ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಿದರು.
ಕಮಲಾಪುರ ಪಟ್ಟಣದ ಶಾಸಕ ಆನಂದಸಿಂಗ್ ಒಡೆತನದ ರಜಪೂತ ಕೋಟೆಯಿಂದ ಸಹಸ್ರಾರು ಸಂಖ್ಯೆಯಲ್ಲಿ ಪಕ್ಷದ ಕಾರ್ಯಕರ್ತರು ಮೆರವಣಿಗೆ ಮೂಲಕ ಪಟ್ಟಣ ಪಂಚಾಯಿತಿಗೆ ತೆರಳಿ ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಿದರು.
ಈ ವೇಳೆ ಮಾತನಾಡಿದ ಮಾಜಿ ಶಾಸಕ ರತನ್‍ಸಿಂಗ್, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಅನೇಕ ಜನಪರ ಹಾಗು ಅಭಿವೃದ್ದಿಪರ ಕಾರ್ಯಕ್ರಮಗಳನ್ನು ನೀಡಿದ್ದು, ಜನ ಕಾಂಗ್ರೆಸ್ ಪಕ್ಷವನ್ನು ಕೈ ಹಿಡಿಯಲಿದ್ದಾರೆ. ಕಮಲಾಪುರ ಪ.ಪಂ.ಯು ಕಾಂಗ್ರೆಸ್‍ನ ಭದ್ರಕೋಟೆಯಾಗಿದ್ದು, ಈ ಬಾರಿಯೂ ಕಾಂಗ್ರೆಸ್ ಪಕ್ಷವೇ ಜಯಭೇರಿ ಬಾರಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂಧರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಮಾಜಿ ಹೇಮಣ್ಣ, ಮುಖಂಡರಾದ ಸಮೀವುಲ್ಲಾ, ಎಂ.ರಫೀಕ್, ಅಂಗಡಿ ನಾಗರಾಜ, ಮುಕ್ತೀಯಾರ್ ಪಾಷಾ, ಓಬಯ್ಯ, ಡಿ.ಬಿ.ಆರ್.ಮಳಲಿ, ತಮ್ಮನಳ್ಳೆಪ್ಪ, ನಿಂಬಗಲ್ ರಾಮಕೃಷ್ಣ, ಜೀವರತ್ನ, ಎನ್.ವೆಂಕಟೇಶ್, óಷಣ್ಮುಖ, ಫಿರೋಜ್, ಗೌಸ್, ನವೀನ್ ಸೇರಿದಂತೆ ಇತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ