ಹೊಸಪೇಟೆ :
ತಾಲೂಕಿನ ಕಮಲಾಪುರ ಪ.ಪಂ.ಗೆ ಚುನಾವಣೆಗೆ ಸ್ಪರ್ಧಿಸಲು ಭಾರಿ ಪೈಪೋಟಿ ಏರ್ಪಟ್ಟಿದ್ದು, ಕಾಂಗ್ರೆಸ್‍ನಲ್ಲಿ ಸುಮಾರು 100 ಜನ ಆಕಾಂಕ್ಷಿಗಳು ಸ್ಪರ್ಧಿಸಲು ಉತ್ಸುಕರಾಗಿದ್ದಾರೆ ಎಂದು ಕಾಂಗ್ರೆಸ್ ಜಿಲ್ಲಾ ಗ್ರಾಮೀಣ ಸಮಿತಿ ಅಧ್ಯಕ್ಷ ಬಿ.ವಿ.ಶಿವಯೋಗಿ ತಿಳಿಸಿದರು.
ಇಲ್ಲಿನ ಪಟೇಲನಗರದ ಶಾಸಕ ಆನಂದಸಿಂಗ್ ಕಚೇರಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪ.ಪಂ.ಚುನಾವಣೆ ಪೂರ್ವಭಾವಿ ಸಭೆಯಲ್ಲಿ ಈ ಕುರಿತು ಮಾತನಾಡಿದ ಅವರು, 100 ಜನ ಆಕ್ಷಾಂಕ್ಷಿಗಳಿದ್ದರೂ 20 ಜನರಿಗೆ ಮಾತ್ರ ಟಿಕೆಟ್ ನೀಡಲು ಸಾಧ್ಯವಾಗುತ್ತದೆ. ಪಕ್ಷಕ್ಕಾಗಿ ನಿಷ್ಠೆಯಿಂದ ದುಡಿದವರು, ಜಾತಿ ಸಮೀಕರಣ, ಹಿರಿತನ, ಗೆಲ್ಲುವ ಸಾಮಾಥ್ರ್ಯ ಇರುವವರನ್ನು ಗಣನೆಗೆ ತೆಗೆದುಕೊಂಡು ಟಿಕೆಟ್ ನೀಡಲಾಗುತ್ತದೆ.
ಟಿಕೆಟ್ ಸಿಗದವರು ಬೇಸರ ಪಡದೇ ಚುನಾವಣೆಯಲ್ಲಿ ನಿಷ್ಠೆಯಿಂದ ಕೆಲಸ ಮಾಡಬೇಕು ಎಂದರು.ವಿಧಾನಸಭೆ, ಲೋಕಸಭೆಯಲ್ಲಿ ಪಕ್ಷ ಗೆದ್ದಿದೆ. ಅದರಂತೆ ಸಾರ್ವತ್ರಿಕ ಚುನಾವಣೆ, ಪ.ಪಂ.ಚುನಾವಣೆಯಲ್ಲೂ ಸಹ ಪಕ್ಷ ಗೆಲ್ಲಲಿದೆ. ಅದಕ್ಕಾಗಿ ಕಾರ್ಯಕರ್ತರು ಉತ್ಸಾಹದಿಂದ ಕೆಲಸ ಮಾಡಬೇಕು ಎಂದು ಹೇಳಿದರು.
ಮಾಜಿ ಶಾಸಕ ರತನ್‍ಸಿಂಗ್ ಮಾತನಾಡಿ, ಸಮ್ಮಿಶ್ರ ಸರ್ಕಾರದ ಅಭಿವೃದ್ದಿ ಕೆಲಸಗಳು ಕಾಂಗ್ರೆಸ್ ಪಕ್ಷವನ್ನು ಕೈ ಹಿಡಿಯಲಿವೆ. ಕಮಲಾಪುರ ಪ.ಪಂ.ಮೊದಲಿನಿಂದಲೂ ಕಾಂಗ್ರೆಸ್ ಭದ್ರಕೋಟೆಯಾಗಿದ್ದು, ಈ ಬಾರಿಯೂ ಪಕ್ಷದ ಅಭ್ಯರ್ಥಿಗಳು ಣರ್ಜರಿ ಗೆಲುವು ಸಾಧಿಸಲಿದ್ದಾರೆ ಎಂದರು.
ಮಾಜಿ ಶಾಸಕ ಗುಜ್ಜಲ ಜಯಲಕ್ಷ್ಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಟಿಂಕರ್ ರಫೀಕ್, ಅಮಾಜಿ ಹೇಮಣ್ಣ, ಮುಖಂಡರಾದ ಸಂದೀಪಸಿಂಗ್, ಎಚ್‍ಎನ್‍ಎಫ್ ಇಮಾಮ್ ನಿಯಾಜಿ, ವೆಂಕಟರಮಣ, ದಾದಾಪೀರ್, ಗೌಸ್, ರೌಫ್, ನಿಂಬಗಲ್ ರಾಮಕೃಷ್ಣ, ರಾಮಾಂಜಿನಿ, ಮಧುರ ಚೆನ್ನಶಾಸ್ತ್ರಿ ಸೇರಿದಂತೆ ಇತರರು ಇದ್ದರು.