ಹಾವೇರಿ:
ಜಿಲ್ಲಾ ಕಾರ್ಯಾಗೃಹಕ್ಕೆ ಅಬಕಾರಿ ಇಲಾಖೆಯಿಂದ 100 ಲೀಟರ್ ಸ್ಯಾನಿಟೈಸರ್ ವಿತರಣೆ ಮಾಡಲಾಯಿತು .ಗುರುವಾರ ಜಿಲ್ಲಾ ಅಬಕಾರಿ ಇಲಾಖೆಯ ಕಚೇರಿಯಲ್ಲಿ ಜಿಲ್ಲಾ ಅಬಕಾರಿ ಇಲಾಖೆ ಉಪ ಆಯುಕ್ತರಾಗಿರುವ ಮಹಾದೇವಿ ಬಾಯಿ ಕಾರ್ಯಾಗೃಹ ಸಿಬ್ಬಂದಿಗೆ ಸ್ಯಾನಿಟೈಸರ್ ಕ್ಯಾನ್ ಹಸ್ತಾಂತರಿಸಲಾಯಿತು.
ಕೊರೊನ್ ಸಮಯದಲ್ಲಿ ಜೈಲು ಕೈದಗಳು ಸಹ, ಮಾಸ್ಕ್ ತಯಾರಿಸಿ ನೀಡುತ್ತಿದ್ದಾರೆ. ಅವರ ಆರೋಗ್ಯದ ಹಿತದೃಷ್ಟಿಯಿಂದ ಅಬಕಾರಿ ಆಯುಕ್ತರ ಆದೇಶದಂತೆ, ಹಾವೇರಿ ಜಿಲ್ಲೆಯ ಅಬಕಾರಿ ಇಲಾಖೆಯ ವತಿಯಿಂದ ಹಾವೇರಿ ಜಿಲ್ಲಾ ಕಾರಾಗೃಹಕ್ಕೆ 100 ಲೀಟರ್ ಸ್ಯಾನಿಟೈಸರ್ ನ್ನು ಹಸ್ತಾಂತರಿಸಲಾಯಿತು ಮಹಾದೇವಿ ಅವರು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ