ಮಾಸ್ಕೊ![]()
ಅಫಘಾನಿಸ್ತಾನದ ಸಂಯುಕ್ತ ಪಡೆ ಕಳೆದ 48 ಗಂಟೆಗಳಿಂದ ಬದ್ಗೀಸ್ ಪ್ರಾಂತ್ಯದಲ್ಲಿ ನಡೆಸಿರುವ ಉಗ್ರ ಶೋಧ ಕಾರ್ಯಾಚರಣೆಯಲ್ಲಿ ಸುಮಾರು 100 ತಾಲಿಬಾನಿ ಉಗ್ರರನ್ನು ಹತ್ಯೆಗೈದಿದೆ, ಬಾಲ ಮೊರ್ಗ ಜಿಲ್ಲೆಯಲ್ಲಿ ಕಳೆದ ವಾರ ಉಗ್ರರು ದಾಳಿ ನಡೆಸಿದ ಬೆನ್ನಲ್ಲೇ ಸೇನೆ ಈ ಕಾರ್ಯಾಚರಣೆಗೆ ಚಾಲನೆ ನೀಡಿತ್ತು ಎಂದು ಅಫಘಾನ್ ರಕ್ಷಣಾ ಸಚಿವಾಲಯ ಹೇಳಿದೆ
ಏ 4 ರಂದು ತಾಲಿಬಾನ್ ಉಗ್ರರು, ಜನಜಂಗುಳಿ ಇರುವ ಬಾಲಮೊರ್ಗ ಜಿಲ್ಲೆಯಲ್ಲಿ ದಾಳಿ ನಡೆಸಿದ್ದರು. ನಾಗರಿಕರ ಸಾವುನೋವುಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಉಗ್ರರನ್ನು ಅಡಗುದಾಣಗಳಿಂದ ತಾತ್ಕಾಲಿಕವಾಗಿ ಹಿಮ್ಮೆಟ್ಟಿಸಲು ಅಫಘಾನ್ ಭದ್ರತಾ ಪಡೆ ಮುಂದಾಗಿತ್ತು.
‘ಕಳೆದ 48 ಗಂಟೆಗಳಲ್ಲಿ ಅಫಘಾನ್ ಸಂಯುಕ್ತ ಪಡೆ ಬದ್ಗೀಸ್‌ನಲ್ಲಿ ದ್ವಿತೀಯ ಹಂತದ ಕಾರ್ಯಾಚರಣೆ ಆರಂಭಿಸಿದ್ದು, 99 ಉಗ್ರರನ್ನು ಹತ್ಯೆ ಮಾಡಿದೆ. 35 ಉಗ್ರರು ಗಾಯಗೊಂಡಿದ್ದಾರೆ. ವಾಹನಗಳು, ಬಾರೀ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
ದಾಳಿ ವೇಳೆ 8 ಸೈನಿಕರು ಮತ್ತು 4 ಪೊಲೀಸ್ ಅಧಿಕಾರಿಗಳು ಮೃತಪಟ್ಟಿದ್ದಾರೆ. 34 ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಸಚಿವಾಲಯ ಹೇಳಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








