ರಟ್ಟಿಹಳ್ಲಿ: 100 ಮೀ ರಾಷ್ಟ್ರಧ್ವಜದ ಮೆರವಣಿಗೆ

ರಟ್ಟೀಹಳ್ಳಿ :

    ತಾಲ್ಲೂಕಿನ ಮಾಸೂರು ಗ್ರಾಮದಲ್ಲಿರುವ ಶ್ರಿ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯ ವತಿಯಿಂದ 71 ನೇ ಗಣರಾಜ್ಯೋತ್ಸವದ ಪ್ರಯುಕ್ತ 100 ಮೀ ರಾಷ್ಟ್ರಧ್ವಜದ ಮೆರವಣಿಗೆ ನಡೆಯಿತು.

    ಧ್ವಜಾರೋಹಣವನ್ನು ಸಂಸ್ಥೆಯ ಅಧ್ಯಕ್ಷ ಮಂಜುನಾಥ ತಳವಾರ ನೆರವೇರಿಸಿದರು. 100ಮೀ ರಾಷ್ಟ್ರಧ್ವಜದ ಮೆರವಣಿಗೆಗೆ ಸಂಸ್ಥೆಯ ಆಡಳಿತಾದಿಕಾರಿ ರಾಷ್ಟ್ರಪ್ರಶಸ್ತಿ ವಿಜೇತ ಶಿಕ್ಷಕ ಹ ಮು ತಳವಾರ ಚಾಲನೆ ನೀಡಿ ಮಾತನಾಡಿದರು. ನಂತರ ಮಾತನಾಡಿದ ಅವರು ಸಂವಿಧಾನದತ್ತ ಆಶಯ ಸರ್ವರಿಗೂ ತಲುಪಿಸುವ ಮೂಲಕ ಸದೃಡ ದೇಶ ಕಟ್ಟಲು ಎಲ್ಲರೂ ಶ್ರಮಿಸಬೇಕಿದೆ ಎಂದರು. ಡಾ.ಬಿ ಆರ್ ಅಂಬೇಡ್ಕರ್ ರಚಿಸಿರುವ ಸಂವಿಧಾನ ಒಂದು ಸುಂದರ ಹೂತೋಟವಿದ್ದಂತೆ ಸರ್ವ ಜನಾಂಗದ ಹೂತೋಟದಲ್ಲಿನ ಪುಷ್ಪಗಳು ಜನರು ಎಂದು ತಿಳಿದುಕೊಂಡು ಸೌಹಾರ್ದತೆಯಿಂದ ಬಾಳಬೇಕೆಂದು ಹೇಳಿದರು.

    ಮೆರವಣಿಗೆಯು ಮಾಸೂರಿನ ಪ್ರಮುಖ ಬೀದಿಗಳಲ್ಲಿ ಹೊಸಬಸ್ಟ್ಯಾಂಡ್ ಮಾರ್ಗವಾಗಿ-ಹಳೇ ಬಸ್ಟ್ಯಾಂಡ್-ದುರ್ಗಾದೇವಿ ನಗರ–ಅಗಸಿಬಾಗಿಲ-ತಿಪ್ಪಾಯಿಕೊಪ್ಪದ ಮೂಲಕ ಸಂಚರಿಸಿ ಸುಮಾರು 3 ಕಿಮೀ ವರೆಗೂ ರಾಷ್ಟ್ರಧ್ವಜದ ಮೆರವಣಿಗೆ ನಡೆಯಿತು.

     ಈ ಸಂದರ್ಭದಲ್ಲಿ ಪ್ರಾಚಾರ್ಯ ಚಂದ್ರಶೇಖರ ಪಿ, ಮುಖ್ಯೋಪಾದ್ಯಾಯರಾದ ಗಣೇಶ ಕೆ, ನಂದಿನಿ ಹೆಚ್ ಜಿ, ಪ್ರತಿಕಾ ಶೆಟ್ಟಿ ಹಾಗೂ ಅಶೋಕ ಟಿ , ಟಿ ಕೆ ನಾಮದೇವ, ಯಲ್ಲೇಶ್ ಹೆಚ್, ಮಂಜುನಾಥ ವಾಯ್, ಭರಮಗೌಡ ಹೆಚ್,ಚೇತನ್ ಸಿ, ನಿರ್ಮಲಾ, ಮತ್ತು ಪ್ರಾಥಮಿಕ, ಪ್ರೌಢಶಾಲಾ ಮತ್ತು ಸಂಯುಕ್ತ ಪದವಿ ಪೂರ್ವ ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link