ಬೆಂಗಳೂರು
ರಾಜ್ಯದಲ್ಲಿಯೇ ಅತ್ಯಧಿಕ ಹೆಚ್ಚು ಡೆಂಗ್ಯು ಕಾಯಿಲೆ ಪ್ರಕರಣಗಳು ನಗರದಲ್ಲಿ ದಾಖಲಾಗಿವೆ. 2019ರ ಸಾಲಿನಲ್ಲಿ ರಾಜ್ಯದಲ್ಲಿ 10,524 ಪ್ರಕರಣಗಳು ದಾಖಲಾಗಿದ್ದರೆ, ಅದರಲ್ಲಿ ಶೇ. 61 ರಷ್ಟು ಅಂದರೆ, 6,515 ಪ್ರಕರಣಗಳು ಬೆಂಗಳೂರಿನಲ್ಲಿ ವರದಿಯಾಗಿವೆ.
ಈ ತಿಂಗಳ ಮೊದಲ ವಾರದಲ್ಲೇ ನಗರದ ಬಿಬಿಎಂಪಿ ವ್ಯಾಪ್ತಿಯಲ್ಲಿಯೇ 322 ಡೆಂಗ್ಯು ಪ್ರಕರಣಗಳು ದಾಖಲಾಗಿವೆ. ಈವರೆವಿಗೆ ರಾಜ್ಯದಲ್ಲಿ ಡೆಂಗ್ಯು ಕಾಯಿಲೆಗೆ ಮೃತಪಟ್ಟವರ ಸಂಖ್ಯೆ ಆರಕ್ಕೆ ಏರಿದೆ. ಕಳೆದ ವರ್ಷ ಈ ಸಂಖ್ಯೆ ನಾಲ್ಕು ಆಗಿತ್ತು. ಹಾಗೆಯೇ ಕಳೆದ ವರ್ಷ ರಾಜ್ಯದಲ್ಲಿ ದಾಖಲಾದ ಡೆಂಗ್ಯು ಜ್ವರದ ಪ್ರಕರಣಗಳು ಈ ವರ್ಷಕ್ಕಿಂತ ಕಡಿಮೆಯಾಗಿದ್ದವು. ಆ ವರ್ಷ ದಾಖಲಾಗಿದ್ದ ಪ್ರಕರಣಗಳ ಸಂಖ್ಯೆ 4,427.ಗಳಷ್ಟಾಗಿದೆ.
ರಾಜ್ಯವನ್ನು ಬಿಟ್ಟರೆ, ಹೆಚ್ಚು ಡೆಂಗ್ಯು ಪ್ರಕರಣಗಳು ವರದಿಯಾದ ಜಿಲ್ಲೆಯೆಂದರೆ, ದಕ್ಷಿಣ ಕನ್ನಡ. ಅಲ್ಲಿ ದಾಖಲಾಗಿರುವ ಪ್ರಕರಣಗಳ ಸಂಖ್ಯೆ 948.
ಸ್ಥಿತಿ ಹೀಗಿದ್ದರೂ, ಡೆಂಗ್ಯು ಜ್ವರ ಹತೋಟಿಯಲ್ಲಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳುತ್ತ ಬಂದಿದ್ದಾರೆ. ಪ್ರತಿ ವಾರ್ಡ್‍ನಲ್ಲಿಯೂ ಡೆಂಗ್ಯು ಜ್ವರಕ್ಕೆ ಕಾರಣವಾಗುವ ಸೊಳ್ಳೆಗಳ ನಿಯಂತ್ರಣ ಮತ್ತು ನಿರ್ಮೂಲನೆಗೆ ಸೂಕ್ತ ಕ್ರಮ ಕೈಗೊಳ್ಳುತ್ತಿರುವುದರಿಂದ ವಾರದಿಂದ ವಾರಕ್ಕೆ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಅಂಕಿಅಂಶಗಳನ್ನು ನೀಡುತ್ತಿದ್ದಾರೆ.
ಡೆಂಗ್ಯು ಜ್ವರ ದೇಶದ ದಕ್ಷಿಣ ರಾಜ್ಯಗಳಾದ ಕರ್ನಾಟಕ, ತಮಿಳುನಾಡು, ತೆಲಂಗಾಣ, ಕೇರಳ ರಾಜ್ಯಗಳನ್ನು ಹೆಚ್ಚು ಆವರಿಸಿದೆ. ದೆಹಲಿಯಲ್ಲಿಯೂ ಸದ್ಯದ ಸ್ಥಿತಿಯಲ್ಲಿ ರಾಷ್ಟ್ರದ ರಾಜಧಾನಿ ದೆಹಲಿಯೂ ಡೆಂಗ್ಯು ಪೀಡಿತವಾಗಿದೆ ಎಂದು ಮೂಲಗಳು ತಿಳಿಸಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








