ಸಿದ್ದಗಂಗಾ ಮಠಕ್ಕೆ 11,111 ಕೆಜಿ ಅಕ್ಕಿ ಸಮರ್ಪಣೆ

ದಾವಣಗೆರೆ :

       ತುಮಕೂರಿನ ಸಿದ್ಧಗಂಗಾ ಮಠದಲ್ಲಿ ನಡೆಯುವ ಶಿವೈಕ್ಯ ಶ್ರೀಶಿವಕುಮಾರ ಸ್ವಾಮೀಜಿ ಅವರ 11ನೇ ದಿನದ ಪುಣ್ಯಸ್ಮರಣೆ ಕಾರ್ಯಕ್ರಮದ ದಾಸೋಹಕ್ಕೆ ನಗರದ ಸಿದ್ಧಗಂಗಾ ವಿದ್ಯಾಸಂಸ್ಥೆಯಿಂದ 449 ಅಕ್ಕಿ ಪ್ಯಾಕೇಟ್‍ಗಳನ್ನು ಲಾರಿಯ ಮೂಲಕ ಕಳುಹಿಸಿ ಕೊಡಲಾಯಿತು.

        ಸಿದ್ಧಗಂಗಾ ವಿದ್ಯಾಸಂಸ್ಥೆಯ ಆಡಳಿತ ಮಂಡಳಿ, ವಿದ್ಯಾರ್ಥಿಗಳು, ಪಾಲಕರು, ಹಿರಿಯ ವಿದ್ಯಾರ್ಥಿಗಳು, ಭಕ್ತರು ಸೇರಿ 449 ಪ್ಯಾಕೇಟ್ ಅಕ್ಕಿ ಸಂಗ್ರಹಿಸಿ ಒಟ್ಟು 11,111 ಕೆಜಿ ಅಕ್ಕಿಯನ್ನು ಪೂಜೆಗೊಂಡ ವಾಹನದ ಮೂಲಕ ಶ್ರೀಮಠಕ್ಕೆ ಕಳುಹಿಸಿಕೊಡಲಾಯಿತು.
ತ್ರಿವಿಧ ದಾಸೋಹ ಮೂರ್ತಿಯ ಪುಣ್ಯಸ್ಮರಣೆಗೆ ಶ್ರೀಮಠಕ್ಕೆ ಆಗಮಿಸಲಿರುವ ಲಕ್ಷಾಂತರ ಭಕ್ತರ ನಿರಂತರ ದಾಸೋಹ ಸೇವೆಗೆ ದಾವಣಗೆರೆ ಸದ್ಭಕ್ತರ ಕಿರು ಸೇವೆ ಇದಾಗಿದ್ದು, ವಿದ್ಯಾಸಂಸ್ಥೆಯ ಹೇಮಂತ್, ಜಯಂತ್ ಹಿರಿಯ ವಿದ್ಯಾರ್ಥಿಗಳಾದ ಅಜ್ಜಪ್ಪ, ಸಿದ್ಧೇಶ್, ರಾಮ ಮನೋಹರ, ಹರ್ಷ ಇವರ ಸೇವೆ ಶ್ಲಾಘನೀಯ. ಪಾಲಕರು 1 ಪ್ಯಾಕೆಟ್ ಅಕ್ಕಿಯಿಂದ ಅವರ ಶಕ್ತ್ಯಾನುಸಾರ 40 ಪ್ಯಾಕೆಟ್ ಅಕ್ಕಿವರೆಗೆ ಸಮರ್ಪಿಸುವ ಮೂಲಕ ತಮ್ಮ ಭಕ್ತಿ ಮೆರೆದಿದ್ದಾರೆ.

          ತರಕಾರಿ ಮಾರುಕಟ್ಟೆಯಿಂದ ಸ್ವಯಂ ಪ್ರೇರಣೆಯಿಂದ ಪ್ರಭಾಕರ್ ಮತ್ತು ಸುರೇಶ್ ಸಹೋದರರು ಶ್ರೀಮಠಕ್ಕೆ ತರಕಾರಿ ಬುಟ್ಟಿಗಳನ್ನು ತಂದೊಪ್ಪಿಸಿದರು. ಶ್ರದ್ಧಾಭಕ್ತಿಯ ಈ ಕಾರ್ಯಕ್ಕೆ ಶಾಲೆಯ ಮಕ್ಕಳು, ಶಿಕ್ಷಕರು ಮತ್ತು ಪಾಲಕರು ಹಾಜರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link