ತಿಪಟೂರು :
ನಗರಸಭಾ ಚುನಾವಣೆಗೆ ಏಕೋ ಅಭ್ಯರ್ಥಿಗಳಿಗೆ ಇನ್ನು ಬಿಸಿ ಏರಿದಂತೆ ಕಾಣುತ್ತಿಲ್ಲವೂ ಆಥವಾ ಕೊನೆಯವರೆಗೂ ಕಾಯ್ದು ನೋಡುವ ರಣತಂತ್ರವೋ ಎಂದು ಸಾರ್ವಜನಿಕರಿಗೆ ತಿಳಿಯದಾಗಿದೆ.
ನಾಮಪತ್ರ ಸಲ್ಲಿಕೆ ಇನ್ನೇನು 2 ದಿನ ಬಾಕಿಯಿದ್ದರು ಇಂದು ಮಂಗಳವಾರವೆಂದು ನಾಮಪತ್ರಸಲ್ಲಿಸಲು ಕೆಲವೇ ಜನ ನಾಮಪತ್ರಸಲ್ಲಿಸಿದರು, ವಾರ್ಡ್ ನಂ 1ರಲ್ಲಿ ಬಿ.ಜೆ.ಪಿ ಯ ಸಂಧ್ಯಾ.ವಿ ವಾರ್ಡ್ ನಂ 4ರಲ್ಲಿ ಸಮಾಜವಾದಿ ಪಕ್ಷದಿಂದ ಎಸ್.ಸಿ.ನಾಗರಾಜು, ವಾರ್ಡ್ ನಂ 5ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ತಿಮ್ಮಯ್ಯ, ವಾರ್ಡ್ ನಂ 12ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಬಿ.ಟಿ.ಕುಮಾರ್, ವಾರ್ಡ್ ನಂ 22ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸಯ್ಯದ್ ಷೇಕ್, ವಾರ್ಡ್ ನಂ 23ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಮಹಮದ್ ಗೌಸ್ ಮತ್ತು ಮಹಮ್ಮದ್ ಇಸ್ಮಾಯಿಲ್, ವಾರ್ಡ್ ನಂ 25ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸೈಯದ್ ಪೈರೋಜ್ ಮತ್ತು ಅಬ್ದುಲ್ ಖಾದರ್, ವಾರ್ಡ್ ನಂ 26ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ನಯಾಜ್ ಖಾನ್, ಮತ್ತು ಕೊನೆಯದಾಗಿ ವಾರ್ಡ್ ನಂ 31 ರಲ್ಲಿ ಜೆ.ಡಿ.ಎಸ್ ಪಕ್ಷದಿಂದ ರಂಗಸ್ವಾಮಿ ಒಟ್ಟು 12 ನಾಮಪತ್ರಗಳು ಸ್ವೀಕೃತಿಯಾಗಿವೆ ಎಂದು ತಿಳಿದು ಬಂದಿದ್ದು ನಾಳೆ ಮತ್ತು ನಾಡಿದ್ದು ಸುಮಾರು 200 ರಿಂದ 250 ಅಭ್ಯರ್ಥಿಗಳು ನಾಮಪತ್ರಸಲ್ಲಿಕೆಯಾಗಬಹುದೆಂದು ಅಂದಾಜಿಸಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ