ಬೆಂಗಳೂರು
ಭಾರತದ ಚೊಚ್ಚಲ ಮಾನವಸಹಿತ ಬಾಹ್ಯಾಕಾಶ ಯಾನವಾದ ಗಗನಯಾನ್ ಸಿದ್ಧತೆಯ ಪ್ರಥಮ ಘಟ್ಟವಾದ ಗಗನಯಾನಿಗಳ ಆಯ್ಕೆಯ ಪ್ರಾಥಮಿಕ ಪರೀಕ್ಷೆ ನಡೆದು, 12 ಮಂದಿ ಪೈಲಟ್‍ಗಳು ಆಯ್ಕೆಯಾಗಿದ್ದಾರೆ. ಬೆಂಗಳೂರಿನ ಏರೋಸ್ಪೇಸ್ ಮೆಡಿಸಿನ್ ಇನ್ಸ್ಟಿಟ್ಯೂಟ್‍ನಲ್ಲಿ ಗಗನಯಾನಿಗಳ ಆಯ್ಕೆ ಕುರಿತಂತೆ, ನಡೆದ ಮೊದಲ ಹಂತದ ಪರೀಕ್ಷೆಯಲ್ಲಿ ವಾಯುಪಡೆಯ 12 ಮಂದಿ ಪೈಲಟ್‍ಗಳು ಆಯ್ಕೆಯಾಗಿದ್ದಾರೆ.
ಆದರೆ ಆಯ್ಕೆಯಾದವರ ಹೆಸರುಗಳನ್ನು ವಾಯುಪಡೆ ಬಹಿರಂಗಪಡಿಸಿಲ್ಲ. ಮೊದಲ ಹಂತದಲ್ಲಿ ಆಯ್ಕೆಯಾದ ಪೈಲಟ್‍ಗಳಿಗೆ ತೀವ್ರ ದೈಹಿಕ ವ್ಯಾಯಾಮ ಪರೀಕ್ಷೆಗಳು, ಪ್ರಯೋಗಾಲಯ ತಪಾಸಣೆಗಳು, ರೇಡಿಯಾಲಜಿ ಮತ್ತು ಕ್ಲಿನಿಕಲ್ ತಪಾಸಣೆಗಳು ಮತ್ತು ಅವರ ಮಾನಸಿಕತೆಯ ಕುರಿತಂತೆ, ಮೌಲ್ಯಮಾಪನ ನಡೆಸಲಾಗಿದೆ. 2022 ರಲ್ಲಿ ಈ ಮಹತ್ವದ ಬಾಹ್ಯಾಕಾಶ ಯಾನ ನಿಗದಿಪಡಿಸಲಾಗಿದೆ.
ಭಾರತೀಯ ವಾಯುಪಡೆಯ ಬಾಹ್ಯಾಕಾಶ, ವೈದ್ಯಕೀಯ ಸಂಸ್ಥೆ (ಐಎಎಂ)ನ ಪ್ರಥಮ ವರ್ಷಾಚರಣೆ ಸಂದರ್ಭದಲ್ಲಿ ಕಳೆದ ವರ್ಷ ಆಗಸ್ಟ್ 15 ರಂದು ಯೋಜನೆ ಕುರಿತಂತೆ, ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
