ಕಾಬೂಲ್
ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ನಲ್ಲಿ ಸಂಭವಿಸಿದ ಕಾರ್ ಬಾಂಬ್ ಸ್ಫೋಟದಲ್ಲಿ 14 ಮಂದಿ ಮೃತಪಟ್ಟಿದ್ದು 145 ಜನರಿಗೆ ಗಾಯಗಳಾಗಿವೆ.ಒಳಾಡಳಿತ ಸಚಿವಾಲಯದ ಮೂಲಗಳನ್ನುಲ್ಲೇಖಿಸಿ ಸ್ಥಳೀಯ ಮಾಧ್ಯಮ ಈ ಕುರಿತು ವರದಿ ಮಾಡಿದೆ.
ಪೊಲೀಸ್ ಕೇಂದ್ರ ಕಚೇರಿ ಬಳಿ ನಡೆದ ಸ್ಫೋಟದಲ್ಲಿ ಕನಿಷ್ಠ 18 ಜನರು ಮೃತಪಟ್ಟಿದ್ದು 100 ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ ಎಂದು ಈ ಮೊದಲೇ ವರದಿಯಾಗಿತ್ತು.ತಾಲಿಬಾನ್ ಈ ದಾಳಿಯ ಹೊಣೆ ಹೊತ್ತುಕೊಂಡಿದೆ. ಸೆಪ್ಟೆಂಬರ್ ಅಂತ್ಯದಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಗೆ ಅಡ್ಡಿಪಡಿಸಲು ಈ ದಾಳಿ ನಡೆದಿದೆ ಎಂದು ಅಫ್ಘನ್ ಮುಖ್ಯಸ್ಥ ಅಬ್ದುಲ್ಲಾ ಅಬ್ದುಲ್ಲಾ ಹೇಳಿದ್ದಾರೆ.