ಮಾಲವಿ ಜಲಾಶಯಕ್ಕೆ 14ಅಡಿಯಷ್ಟು ನೀರು

ಹಗರಿಬೊಮ್ಮನಹಳ್ಳಿ:
      ತಾಲೂಕಿನಲ್ಲಿ ಶುಕ್ರವಾರ ಸುರಿದ ಮಹಾಮಳೆ ದಶಕಗಳ ದಾಖಲೆ ಬರೆದಿದೆ. ಅಂದರೆ, 10ವರ್ಷಗಳಲ್ಲಿಯೇ ಅತ್ಯಂತ ಮಹಾಮಳೆ ಇದಾಗಿದೆ ಎಂದು ತಾಲೂಕಿನ ರೈತಾಪಿ ವರ್ಗ ಬಣ್ಣಿಸುತ್ತಿದೆ.ಶುಕ್ರವಾರ ರಾತ್ರಿ 11.15ಕ್ಕೆ ಮಳೆ ಆರಂಭವಾಗಿ, ಮಧ್ಯರಾತ್ರಿ 12.15ರ ಸುಮಾರಿನಲ್ಲಿ 10 ನಿಮಿಷ ವಿಶ್ರಾಂತಿಯಾಗಿ ಮತ್ತೇ ಆರಂಭವಾದ ಮಳೆ ಸತತ 6ಗಂಟೆಗಳ ಕಾಲ ಅಂದರೆ, ಶನಿವಾರ ಬೆಳಗ್ಗೆ 6.10ರವರೆಗೂ ಒಂದೇ ಸಮನಾಗಿ ಸುರಿಯಿತು. ಇದು ತಾಲೂಕಿನಾಧ್ಯಂತ ಉತ್ತಮ ಮಳೆಯಾಗಿದೆ.
 
      ದಶಕಗಳಿಚೆಗೆ ಉತ್ತಮ ಮಳೆಯಾಗಿದ್ದು, ತಂಬ್ರಹಳ್ಳಿ ಭಾಗದಲ್ಲಿ 111.01 ಎಂ.ಎಂ.ನಷ್ಟು ಮಳೆಯಾಗಿದರೆ, ಹ.ಬೊ.ಹಳ್ಳಿಯಲ್ಲಿ 100.08ರಷ್ಟು, ಕೋಗಳಿ ಭಾಗದಲ್ಲಿ 58 ಎಂ.ಎಂ., ಮಾಲವಿ ಭಾಗದಲ್ಲಿ 84.4 ಎಂ.ಎಂ. ಹಂಪಸಾಗರ ವ್ಯಾಪ್ತಿಯಲ್ಲಿ 28.6 ಎಂ.ಎಂ.ನಷ್ಟು ಮಳೆಯಾಗಿರುವ ವರದಿಯಾಗಿದೆ.
 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ  

Recent Articles

spot_img

Related Stories

Share via
Copy link