ನುಡಿ ಜಾತ್ರೆಗೆ 10-15ಕೋಟಿ ಅನುದಾನ ನಿರೀಕ್ಷೆ..!

ಬೆಂಗಳೂರು

     ಕಲ್ಯಾಣ ಕರ್ನಾಟಕದ ಕಲುಬುರಗಿಯಲ್ಲಿ ಫೆ. 5 ರಿಂದ 7 ರವರೆಗೆ ಕನ್ನಡ ನುಡಿಜಾತ್ರೆ ಅಖಿಲ ಭಾರತ 85ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದ್ದು, ಸಮ್ಮೇಳನದ ಯಶಸ್ವಿ ಆಗಲು 10 ರಿಂದ 12 ಕೋಟಿ ಅನುದಾನವನ್ನು ನಿರೀಕ್ಷಿಸಲಾಗಿದೆ.ಸಾಹಿತ್ಯ ಸಮ್ಮೇಳನ ನಡೆಯುವ ಕಲಬುರಗಿ ಕರ್ನಾಟಕ ವಿಶ್ವ ವಿದ್ಯಾಲಯ ಆವರಣಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ ಬಳಿಕ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆಬ್ರುವರಿ ಎರಡನೇ ವಾರದಿಂದ ಶಾಲಾ ಪರೀಕ್ಷೆಗಳು ಆರಂಭವಾಗ ಲಿರುವುದರಿಂದ ಫೆಬ್ರುವರಿ ಮೊದಲ ವಾರವೇ ಮುಗಿಸಲು ನಿರ್ಧರಿಸಿದ್ದೇವೆ. ಡಿಸೆಂಬರ್‍ನಲ್ಲಿ ಕಸಾಪ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸಮ್ಮೇಳನಾಧ್ಯಕ್ಷರನ್ನು ಆಯ್ಕೆ ಮಾಡಲಾಗುವುದು ಎಂದರು.

      ಗುಲಬರ್ಗಾ ವಿ.ವಿ.ಯ ಮುಖ್ಯ ಕ್ರೀಡಾಂಗಣದಲ್ಲಿ ಮುಖ್ಯ ವೇದಿಕೆ ನಿರ್ಮಾಣವಾಗಲಿದೆ. ವಿ.ವಿ.ಯ ಡಾ.ಬಿ.ಆರ್.ಅಂಬೇಡ್ಕರ್ ಸಭಾಂಗಣ ಹಾಗೂ ಆಡಳಿತ ಕಚೇರಿ ಇರುವ ಕಾರ್ಯಸೌಧದ ಮಹಾತ್ಮ ಗಾಂಧಿ ಸಭಾಂಗಣದಲ್ಲಿ ಎರಡು ಸಮಾನಾಂತರ ಗೋಷ್ಠಿಗಳನ್ನು ನಡೆಸಲಾಗುವುದು. ಪ್ರತಿನಿಧಿಗಳು ಜನವರಿ ಮೊದಲ ವಾರದವರೆಗೆ ಹೆಸರು ನೋಂದಾಯಿಸಿಕೊಳ್ಳಬಹುದು ಎಂದು ಹೇಳಿದರು.

    ಸಮ್ಮೇಳನಕ್ಕೆ 10ರಿಂದ 12 ಕೋಟಿ ವೆಚ್ಚವಾಗಲಿದೆ. ಕಲಬುರ್ಗಿಯ ಸಂಘ ಸಂಸ್ಥೆಗಳು, ದಾನಿಗಳು ಊಟದ ವ್ಯವಸ್ಥೆಯನ್ನು ವಹಿಸಿಕೊಳ್ಳಲು ಮುಂದೆ ಬಂದರೆ 1 ರಿಂದ 1.5 ಕೋಟಿ ಕಡಿಮೆಯಾಗಬಹುದು. ಸುಮಾರು 75 ಸಾವಿರದಿಂದ 80 ಸಾವಿರ ಜನರು ಏಕಕಾಲಕ್ಕೆ ಊಟ ಮಾಡಲು ಅನುಕೂಲವಾಗುವಂತೆ 150 ಊಟದ ಕೌಂಟರ್‍ಗಳನ್ನು ತೆರೆಯಲಾಗುವುದು. 750 ಪುಸ್ತಕ ಹಾಗೂ ವಾಣಿಜ್ಯ ಮಳಿಗೆಗಳನ್ನು ವೇದಿಕೆ ಬಳಿ ನಿರ್ಮಿಸಲಾಗುವುದು ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap