ನಾಳೆ ತೀರ್ಮಾನವಾಆಗಲಿದೆ 165 ಜನರ ರಾಜಕೀಯ ಭವಿಷ್ಯ..!

ಬೆಂಗಳೂರು

   ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆಜಿದ್ದಾಜಿದ್ದಿನಕುರುಕ್ಷೇತ್ರವಾಗಿರುವರಾಜ್ಯದ 15ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ನಾಳೆ ಮತದಾನ ನಡೆಯಲಿದ್ದು, ರಾಜಕೀಯ ಪಕ್ಷಗಳ ಘಟಾನುಘಟಿ ನಾಯಕರು ಸೇರಿದಂತೆ 165 ಅಭ್ಯರ್ಥಿಗಳ ಭವಿಷ್ಯವನ್ನು ಮತದಾರರು ತೀರ್ಮಾನಿಸಲಿದ್ದಾರೆ.

    ಆಯಾ ವಿಧಾನಸಭಾಕ್ಷೇತ್ರದ ಮತಗಟ್ಟೆಗಳಲ್ಲಿ ನಾಳೆ ಬೆಳಗ್ಗೆ 7ರಿಂದ ಸಂಜೆ 6 ಗಂಟೆವರೆಗೆ ಮತದಾನ ನಡೆಯಲಿದೆ. ಮುಕ್ತ ಮತ್ತು ನ್ಯಾಯಸಮ್ಮತ ಮತದಾನಕ್ಕೆಎಲ್ಲ ರೀತಿಯ ಅಗತ್ಯ ಕ್ರಮಗಳನ್ನು ಚುನಾವಣಾಆಯೋಗಕೈಗೊಂಡಿದೆ.

     ಮತದಾನದ ಸಂದರ್ಭದಲ್ಲಿಯಾವುದೇ ರೀತಿಯ ಅಹಿತಕರಘಟನೆ ನಡೆಯದಂತೆ ಮುನ್ನೆಚ್ಚರಿಕೆಕ್ರಮ ಕೈಗೊಳ್ಳಲಾಗಿದೆ. ಮತದಾನ ನಡೆಯುವ ಕ್ಷೇತ್ರಗಳಲ್ಲಿ ಅರೆಸೇನಾ ಪಡೆ, ಸ್ಥಳೀಯ ಪೆÇಲೀಸರು, ಕ್ಷಿಪ್ರ ಕಾರ್ಯಪಡೆ ಸೇರಿದಂತೆ ವಿವಿಧ ಶ್ರೇಣಿಯ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

      ರಾಜ್ಯದ 15 ಕ್ಷೇತ್ರಗಳಲ್ಲಿ ಒಟ್ಟು 165 ಅಭ್ಯರ್ಥಿಗಳು ಕಣದಲ್ಲಿದ್ದು, ಇದರಲ್ಲಿ 156 ಪುರುಷರು, 9 ಮಹಿಳೆಯರು ಸ್ಪರ್ಧಿಸಿದ್ದಾರೆ. ಕಾಂಗ್ರೆಸ್, ಬಿಜೆಪಿಯಿಂದಎಲ್ಲಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಸ್ಪರ್ಧಿಸಿದ್ದರೆ ಜೆಡಿಎಸ್‍ನಿಂದ 12, ಬಿಎಸ್‍ಪಿಯಿಂದಇಬ್ಬರು, ಎನ್‍ಸಿಪಿಯಿಂದಒಬ್ಬರು, ನೋಂದಾಯಿತ ಪಕ್ಷಗಳಿಂದ 45, ಸ್ವತಂತ್ರವಾಗಿ 75 ಅಭ್ಯರ್ಥಿಗಳು ಚುನಾವಣಾಕಣದಲ್ಲಿದ್ದಾರೆ.

      ಶಿವಾಜಿನಗರದಲ್ಲಿ ಅತಿ ಹೆಚ್ಚು 19, ಹೊಸಕೋಟೆಯಲ್ಲಿ 17, ಹುಣಸೂರಿನಲ್ಲಿ 10, ಅಥಣಿ 08, ಕಾಗವಾಡ 09, ಗೋಕಾಕ್ 11, ಯಲ್ಲಾಪುರ 07, ಹಿರೇಕೆರೂರು 09, ರಾಣೆಬೆನ್ನೂರು 09, ವಿಜಯನಗರ 13, ಚಿಕ್ಕಬಳ್ಳಾಪುರ 09, ಕೆ.ಆರ್.ಪುರ 13, ಯಶವಂತಪುರ 12, ಮಹಾಲಕ್ಷ್ಮಿಲೇಔಟ್ 12, ಕೆ.ಆರ್.ಪೇಟೆ 7 ಸೇರಿದಂತೆ 165 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

     ಕಾಂಗ್ರೆಸ್ ಮತ್ತು ಬಿಜೆಪಿ 15 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದರೆ ಜೆಡಿಎಸ್ 12 ಕ್ಷೇತ್ರಗಳಲ್ಲಿ ಮಾತ್ರ ಸ್ಪರ್ಧೆ ಮಾಡಿದೆ. ಹೊಸಕೋಟೆ ಹಾಗೂ ಹಿರೇಕೆರೂರಿನಲ್ಲಿ ಪಕ್ಷೇತರ ಅಭ್ಯರ್ಥಿಗಳಿಗೆ ಜೆಡಿಎಸ್ ಬೆಂಬಲ ನೀಡಿದ್ದರೆ, ಅಥಣಿಯಲ್ಲಿ ಕೊನೆ ಕ್ಷಣದಲ್ಲಿ ಪಕ್ಷದಅಭ್ಯರ್ಥಿ ನಾಮಪತ್ರ ಹಿಂಪಡೆದಿದ್ದರಿಂದಇಲ್ಲಿಜೆಡಿಎಸ್ ಸ್ಪರ್ಧೆ ಮಾಡಿಲ್ಲ.

     ಉಪಚುನಾವಣೆಯಲ್ಲಿ 37,82,681 ಮತದಾರರು ಮತ ಚಲಾಯಿಸುವ ಹಕ್ಕು ಪಡೆದಿದ್ದಾರೆ. ಈ ಪೈಕಿ 19,25,529 ಪುರುಷ ಮತದಾರರು, 18,52,027 ಮಹಿಳಾ ಮತದಾರರು, ಇತರೆ 414 ಮತದಾರರಿದ್ದಾರೆ. 4,711 ಸೇವಾ ಮತದಾರರು ಹಾಗೂ 79,714 ಹೊಸ ಮತದಾರರು ಈ ಬಾರಿ ಮತ ಚಲಾಯಿಸುವ ಹಕ್ಕು ಪಡೆದಿದ್ದಾರೆ.

    15 ಕ್ಷೇತ್ರಗಳಲ್ಲಿ 4,185 ಮತಗಟ್ಟೆಗಳನ್ನು ಆಯೋಗ ಸ್ಥಾಪನೆ ಮಾಡಿದೆ. 39 ಸಖಿ ಮತಗಟ್ಟೆ, 13 ವಿಶೇಷ ಚೇತನರಮತಗಟ್ಟೆ, 03ಎಥ್ನಿಕ್ ಮತಗಟ್ಟೆಗಳೆಂದು ಆಯೋಗ ಘೋಷಿಸಿದೆ.884 ಕ್ರಿಟಿಕಲ್ ಮತಗಟ್ಟೆಗಳಿದ್ದು, 206 ಮತಗಟ್ಟೆಯಲ್ಲಿ ವೆಬ್‍ಕಾಸ್ಟಿಂಗ್ , 259 ಮತಗಟ್ಟೆಗಳಲ್ಲಿ ವಿಡಿಯೋಚಿತ್ರೀಕರಣ, 805 ಮೈಕ್ರೋಅಬ್ಸರ್ವರ್‍ಇದ್ದಾರೆ.

     900 ವೀಕ್ಷಕರನ್ನು ನಿಯೋಜನೆ ಮಾಡಲಾಗಿದ್ದು, 19,299 ಮತಗಟ್ಟೆ ಅಧಿಕಾರಿಗಳು 42,509 ಸಿಬ್ಬಂದಿಯನ್ನು ಕರ್ತವ್ಯಕ್ಕೆಆಯೋಗ ನಿಯೋಜಿಸಿದೆ. ಭದ್ರತೆಗಾಗಿ 11,241 ರಾಜ್ಯ ಪೆÇಲೀಸರು, 2511 ಸಿಎಪಿಎಫ್ ಸಿಬ್ಬಂದಿಯನ್ನು ಬಳಸಿಕೊಳ್ಳಲಾಗಿದೆ.

      ಬಸ್, ಕಾರು, ಜೀಪು ಸೇರಿದಂತೆ 846 ವಾಹನಗಳನ್ನು ಚುನಾವಣಾ ಕಾರ್ಯಕ್ಕಾಗಿ ಬಳಸಿಕೊಳ್ಳಲಾಗಿದೆ . ಚುನಾವಣಾ ಆಯೋಗ ನೀಡಿರುವ ಮತದಾರರಗುರುತಿನಚೀಟಿಇಲ್ಲದ ಮತದಾರರ ಪಟ್ಟಿಯಲ್ಲಿ ಹೆಸರಿರುವ ಮತದಾರರು ಪಾಸ್‍ಪೋರ್ಟ್, ಡ್ರೈವಿಂಗ್ ಲೈಸೆನ್ಸ್, ಪಾನ್‍ಕಾರ್ಡ್, ನರೇಗಾಜಾಬ್‍ಕಾರ್ಡ್, ಆಧಾರ್‍ಕಾರ್ಡ್ ಸೇರಿದಂತೆ ಭಾವಚಿತ್ರವಿರುವಇತರೆ 11 ಗುರುತಿನ ಚೀಟಿಗಳನ್ನು ಹಾಜರುಪಡಿಸಿ ಮತ ಚಲಾಯಿಸಬಹುದಾಗಿದೆ.

ಮತಗಟ್ಟೆಗೆ ತೆರಳಿದ ಸಿಬ್ಬಂದಿ:

    ಆಯಾ ವಿಧಾನಸಭಾ ಕ್ಷೇತ್ರಗಳ ಮಸ್ಟರಿಂಗ್ ಕೇಂದ್ರಗಳಲ್ಲಿ ಸಮಾವೇಶಗೊಂಡಿದ್ದಚುನಾವಣಾ ಸಿಬ್ಬಂದಿ ಮತಯಂತ್ರ ಸೇರಿದಂತೆ ಮತದಾನಕ್ಕೆಅಗತ್ಯವಿರುವ ಪರಿಕರಗಳೊಂದಿಗೆ ಮತಗಟ್ಟೆಅಧಿಕಾರಿ ಹಾಗೂ ಇತರೆ ಸಿಬ್ಬಂದಿ ನಿಗದಿಪಡಿಸಿದ ಮತಗಟ್ಟೆಗಳಿಗೆ ಇಂದು ತೆರಳಿದರು.

ಕಟ್ಟುನಿಟ್ಟಿನಕ್ರಮ:

     ಯಾವುದೇ ರೀತಿಯ ಅಹಿತಕರಘಟನೆ ನಡೆಯದಂತೆ ಚುನಾವಣಾಆಯೋಗಎಲ್ಲ ರೀತಿಯ ಬಿಗಿ ಕ್ರಮಗಳನ್ನು ಕೈಗೊಂಡಿದೆ. ಮತದಾರರಿಗೆ ಆಮಿಷವೊಡ್ಡುವುದಾಗಲಿ ಇಲ್ಲವೇ ಬೆದರಿಕೆ ಹಾಕುವುದು ಕಂಡುಬಂದಲ್ಲಿ ಅಂಥವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಜರುಗಿಸಲಾಗುವುದುಎಂದು ಎಚ್ಚರಿಸಿದೆ.ಮುಕ್ತ ಮತ್ತು ನ್ಯಾಯಸಮ್ಮತ ಮತದಾನ ನಡೆಯಲು ಕೆಲವು ಸೂಕ್ಷ್ಮ ಮತ್ತುಅತಿಸೂಕ್ಷ್ಮ ಕ್ಷೇತ್ರಗಳಲ್ಲಿ ಅರಸೇನಾ ಪಡೆಯಿಂದ ಪಥಸಂಚಲನ ನಡೆಸಲಾಗಿದೆ.ಇನ್ನು ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಮತದಾನವಾಗುವಂತೆ ಚುನಾವಣಾ ಆಯೋಗ ಸರ್ಕಾರೇತರ ಸಂಸ್ಥೆಗಳು (ಎನ್‍ಜಿಒ) ,ಸಂಘಸಂಸ್ಥೆಗಳು ಸೇರಿದಂತೆ ಮತ್ತಿತರ ಮೂಲಕ ಮತದಾನ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿತ್ತು.

ಕೊನೆ ಕ್ಷಣದ ಕಸರತ್ತು:

      ಬಹಿರಂಗ ಪ್ರಚಾರ ನಿನ್ನೆಯೇ ಮುಕ್ತಾಯವಾದ ಹಿನ್ನೆಲೆಯಲ್ಲಿ ಕಣದಲ್ಲಿರುವ ಅಭ್ಯರ್ಥಿಗಳು ಇಂದು ಮನೆ ಮನೆಗೆ ತೆರಳಿ ಮತ ಪ್ರಚಾರ ನಡೆಸಿದರು. ಸೀಮಿತ ಸಂಖ್ಯೆಯ ಬೆಂಬಲಿಗರೊಂದಿಗೆ ಆಯ್ದ ಗ್ರಾಮ, ಹೋಬಳಿ ಮಟ್ಟದಲ್ಲಿ ಮತದಾರರ ಮನವೊಲಿಕೆ ಮಾಡಿದರು.

      15 ಕ್ಷೇತ್ರಗಳ ಪೈಕಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ, ಬೆಳಗಾವಿ ಜಿಲ್ಲೆಯ ಗೋಕಾಕ್, ಬೆಂಗಳೂರಿನ ಯಶವಂತಪುರ, ಮಹಾಲಕ್ಷ್ಮಿಲೇಔಟ್, ಕೆ.ಆರ್.ಪುರಂ, ಚಿಕ್ಕಬಳ್ಳಾಪುರ, ಹುಣಸೂರು, ಹಿರೇಕೆರೂರು ಕ್ಷೇತ್ರಗಳು ಪ್ರತಿಷ್ಠೆಯ ಕಣಗಳಾಗಿವೆ.

    ಹೊಸಕೋಟೆಯಲ್ಲಿ ಮಾಜಿ ಸಚಿವ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ಮತ್ತು ಪಕ್ಷೇತರ ಅಭ್ಯರ್ಥಿ ಸಂಸದ ಬಿ.ಎನ್. ಬಚ್ಚೇಗೌಡ ಅವರ ಪುತ್ರ ಶರತ್ ಬಚ್ಚೇಗೌಡರ ನಡುವೆ ಜಿದ್ದಾಜಿದ್ದಿನ ಸ್ಪರ್ಧೆ ಏರ್ಪಟ್ಟಿರುವುದರಿಂದ ಕ್ಷೇತ್ರ ರಾಜ್ಯದ ಗಮನ ಸೆಳೆದಿದೆ.ಸಮ್ಮಿಶ್ರ ಸರ್ಕಾರದ ಪತನದ ರೂವಾರಿಎಂದೇ ಹೇಳಲಾಗುತ್ತಿರುವ ಗೋಕಾಕ್‍ನ ಸಾಹುಕಾರ ರಮೇಶ್ ಜಾರಕಿಹೊಳಿಗೆ ಈ ಬಾರಿ ಕ್ಷೇತ್ರದಲ್ಲಿ ಮೊದಲ ಬಾರಿ ತೀವ್ರ ಸ್ಪರ್ಧೆ ಎದುರಿಸುವಂತಾಗಿದೆ.

    ಹೀಗೆ ಬಹುತೇಕಎಲ್ಲ ಕ್ಷೇತ್ರಗಳಲ್ಲೂ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆತ್ರಿಕೋನ ಸ್ಪರ್ಧೆ ಏರ್ಪಟ್ಟಿರುವುದರಿಂದ ಫಲಿತಾಂಶ ಪ್ರಕಟವಾಗುವವರೆಗೂ ಕುತೂಹಲಕಾರಿಯಾಗಿ ಉಳಿಯಲಿದೆ.

 

Recent Articles

spot_img

Related Stories

Share via
Copy link
Powered by Social Snap