ಕುಸಿತದ ಮಾರನೇ ದಿನವೇ ಚೇತರಿಸಿಕೊಂಡ ಷೇರು ಮಾರುಕಟ್ಟೆ

ಮುಂಬೈ: 

  ನಿನ್ನೆಯಷ್ಟೇ ಭಾರಿ ಪ್ರಮಾಣದಲ್ಲಿ ಕುಸಿದಿದ್ದ ಭಾರತೀಯ ಷೇರುಮಾರುಕಟ್ಟೆ ಇಂದು ಮತ್ತೆ ಬೌನ್ಸ್ ಬ್ಯಾಕ್ ಆಗಿದ್ದು, ಕುಸಿತದ ಮಾರನೇ ದಿನವೇ ಚೇತರಿಸಿಕೊಂಡ ಚೇತೋಹಾರಿ ವಹಿವಾಟು ನಡೆಸಿದೆ  ನಿನ್ನೆ ಸೆನ್ಸೆಕ್ಸ್ 942 ಅಂಕಗಳು ಮತ್ತು ನಿಫ್ಟಿ 309 ಅಂಕ ಕುಸಿದಿತ್ತು. ಅಲ್ಲದೆ ಹೂಡಿಕೆದಾರರ ಸುಮಾರು 5 ಲಕ್ಷ ಕೋಟಿ ರೂ ನಷ್ಟವಾಗಿತ್ತು.

   ಈ ಬೆಳವಣಿಗೆ ಬೆನ್ನಲ್ಲೇ ಇದೀಗ ಭಾರತೀಯ ಷೇರುಮಾರುಕಟ್ಟೆ ಚೇತೋಹಾರಿ ವಹಿವಾಟು ನಡೆಸಿದ್ದು, ಇಂದು ದಿನದ ವಹಿವಾಟು ಅಂತ್ಯದ ವೇಳೆಗೆ ಸೆನ್ಸೆಕ್ಸ್ 694 ಅಂಕಗಳ ಏರಿಕೆ ಕಂಡಿದೆ. ಆ ಮೂಲಕ ಸೆನ್ಸೆಕ್ಸ್ 79,476.63 ಅಂಕಗಳಿಗೆ ಏರಿ ದಿನದ ವಹಿವಾಟು ಅಂತ್ಯಗೊಳಿಸಿದೆ. ಇಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ ನಲ್ಲಿ ಪಟ್ಟಿಮಾಡಲಾದ ಸಂಸ್ಥೆಗಳ ಪೈಕಿ ಜೆಎಸ್‌ಡಬ್ಲ್ಯು ಸ್ಟೀಲ್ ಸುಮಾರು 5 ಪ್ರತಿಶತದಷ್ಟು ಲಾಭಾಂಶ ಕಂಡಿದ್ದು, ಅಂತೆಯೇ ಟಾಟಾ ಸ್ಟೀಲ್ ಷೇರುಗಳು ಶೇ. 4 ರಷ್ಟು ಮೌಲ್ಯ ಏರಿಕೆ ಕಂಡಿವೆ ಜಿಗಿದಿದೆ.

   ಉಳಿದಂತೆ ಆಕ್ಸಿಸ್ ಬ್ಯಾಂಕ್, ಇಂಡಸ್‌ಇಂಡ್ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಕೋಟಕ್ ಮಹೀಂದ್ರಾ ಬ್ಯಾಂಕ್ ಮತ್ತು ಅಲ್ಟ್ರಾಟೆಕ್ ಸಿಮೆಂಟ್ ಸಂಸ್ಥೆಗಳು ಲಾಭಾಂಶ ಕಂಡಿದ್ದು, ಅಂತೆಯೇ ಅದಾನಿ ಪೋರ್ಟ್ಸ್, ಐಟಿಸಿ, ಭಾರ್ತಿ ಏರ್‌ಟೆಲ್ ಮತ್ತು ಏಷ್ಯನ್ ಪೇಂಟ್ಸ್ ಸಂಸ್ಥೆಗಳ ಷೇರುಗಳ ಮೌಲ್ಯದಲ್ಲಿ ಕುಸಿತ ಕಂಡುಬಂದಿದೆ.

   ನಿಫ್ಟಿಯಲ್ಲಿ ಬ್ಯಾಂಕ್, ಫೈನಾನ್ಶಿಯಲ್ ಸರ್ವೀಸಸ್, ಮೆಟಲ್, ಪಿಎಸ್‌ಯು ಬ್ಯಾಂಕ್ ಮತ್ತು ಪ್ರೈವೇಟ್ ಬ್ಯಾಂಕ್ ವಲಯದ ಷೇರುಗಳ ಮೌಲ್ಯದಲ್ಲಿ ಏರಿಕೆ ಕಂಡುಬಂದಿವೆ.

Recent Articles

spot_img

Related Stories

Share via
Copy link