ಹರಪನಹಳ್ಳಿ:
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಪದಾಧಿಕಾರಿಗಳ ಚುನಾವಣೆಯಲ್ಲಿ 17 ಜನ ಅವಿರೋಧ ಆಯ್ಕೆಯಾಗಿದ್ದರೆ, ಉಳಿದ 17ಜನರಿಗೆ ಮತದಾನದ ಮೂಲಕ ಆಯ್ಕೆ ಮಾಡಲಾಯಿತು.
ಪಟ್ಟಣದ ಸರಕಾರಿ ಬಾಲಕೀಯರ ಪ್ರಾಥಮಿಕ ಶಾಲೆ ಹಾಗೂ ಬಾಲಕೀಯರ ಪ್ರೌಢಶಾಲೆಯಲ್ಲಿ ಮತದಾನದ ಕೇಂದ್ರಗಳನ್ನು ಸ್ಥಾಪಿಸಿ ಆ ಮೂಲಕ ಮತದಾನ ಪ್ರಕ್ರಿಯೆ ನಡೆದು ಸಂಜೆ ಮತಪತ್ರಗಳ ಎಣಿಕೆ ಕಾರ್ಯ ಜರುಗಿತು.
ಪ್ರಾಥಮಿಕ ಶಿಕ್ಷಕರ ಕ್ಷೇತ್ರದಿಂದ ಒಟ್ಟು 10 ಜನರು ಸ್ಪರ್ದಿಸಿದ್ದು, ಬಸವರಾಜ ಸಂಗಪ್ಪನವರ್, ರಾಘವೇಂದ್ರ ಎಸ್.ರಾಮಪ್ಪ, ಸಿದ್ದಲಿಂಗನಗೌಡ, ಗಂಗಧರ ಆಯ್ಕೆಯಾಗಿದ್ದರೆ, ಪ್ರೌಢಶಾಲಾ ವಿಭಾಗದಲ್ಲಿ ಮನೋಹರ್.ಎನ್.ಜಿ, ಸೂರ್ಯನಾಯ್ಕ.ಬಿ., ಕಾಲೇಜಿನಿಂದ ಡಾ.ಭೀಮಪ್ಪ ಎಂ., ಆರೋಗ್ಯ ಇಲಾಖೆಯಿಂದ ವೈ ಚನ್ನವ್ವ ಸೋಮನಕಟ್ಟಿ, ರುದ್ರಚಾರಿ ಬಿ, ಬಾಲಚಂದ್ರ ಎಂ, ವೆಂಕಟೇಶ್ ಬಾಗಲಾರ್, ನ್ಯಾಯಾಂಗ ಇಲಾಖೆಯಿಂದ ಎಸ್.ಆರ್.ನಟರಾಜ, ತಾಪಂ ನಿಂದ ಬುಳ್ಳಪ್ಪ, ಸಂಗಪ್ಪ ಹೆಚ್, ಲೆಕ್ಕಪತ್ರ ಇಲಾಖೆಯಿಂದ ಎಸ್.ಮಂಜುನಾಥ ಗೆಲುವು ಪಡೆದುಕೊಂಡಿದ್ದಾರೆ.
ಅವಿರೋಧ ಆಯ್ಕೆ :
ಒಟ್ಟು ಹದಿನೇಳು ಸ್ಥಾನಗಳಿಗೆ ಕೃಷಿ ಇಲಾಖೆಯ ಕೆ.ಮಂಜುನಾಥ, ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯ ಡಾ.ಶಿವಕುಮಾರ ಜ್ಯೋತಿ, ಕಂದಾಯ ಇಲಾಖೆಯ ಸುಧೀರನಾಯ್ಕ ಹಾಗೂ ಶಿವಪ್ರಕಾಶ್ ಜಿ., ಲೋಕಪಯೋಗಿ ಮತ್ತು ಪಿಎಂಜೆಎಸ್‍ವೈ ಇಲಾಖೆಯ ಕುಬೇಂದ್ರನಾಯ್ಕ, ತಾಂತ್ರಿಕ ಶಿಕ್ಷಣ ಇಲಾಖೆ ಅಶೋಕ ಸಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಕೆ ಚಂದ್ರಪ್ಪ ಬಿ.ಹೆಚ್., ಸಮಾಜ ಕಲ್ಯಾಣ ಇಲಾಖೆಯ ದೇವೆಂದ್ರಪ್ಪ, ಅರಣ್ಯ ಇಲಾಖೆಯ ಶಿವಕುಮಾರ ಹೆಚ್, ಅಬಕಾರಿ ಇಲಾಖೆ ಕುಮಾರ ಎಂ., ತೋಟಗಾರಿಕೆ ಪವನನಾಯ್ಕ ಕೆ., ಖಜಾನೆ ಸುಮಾ ಎ., ಸರ್ವೇ ಇಲಾಖೆ ಕೃಷ್ಣಪ್ಪ ಹೆಚ್.ಎನ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ರಾಘವೇಂದ್ರ ಸಿ, ಸಹಕಾರ ಇಲಾಖೆ ಎಂ.ಜಿ.ಬಸವರಾಜ, ರೇಷ್ಮೆ ಇಲಾಖೆ ಕೆ.ನಾಗರಾಜ, ನೊಂದಣಿ ಗ್ರಂಥಾಲಯ, ಎಪಿಎಂಸಿ ಆನಂದ ಕೇದಾರಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಚುನಾವಣಾಧಿಕಾರಿಗಳಾಗಿ ಈಶ್ವರಪ್ಪ ಹಾಗೂ ಸಹಾಯಕ ಚುನಾವಣಾಧಿಕಾರಿ ಉದಯಶಂಕರ್ ಸೇರಿದಂತೆ ವಿವಿಧ ಇಲಾಖೆಯ ಸಿಬ್ಬಂದಿಗಳು ಚುನಾವಣಾ ಕರ್ತವ್ಯದಲ್ಲಿ ತೊಡಗಿಕೊಂಡಿದ್ದರು.