ತುಮಕೂರು: 181 ಜನರಿಗೆ ಸೋಂಕು: ಮತ್ತಿಬ್ಬರು ಸಾವು

ತುಮಕೂರು

    ಸೋಮವಾರ ಜಿಲ್ಲೆಯಲ್ಲಿ ಹೊಸದಾಗಿ 181 ಜನರಿಗೆ ಸೋಂಕು ತಗುಲಿದ ವರದಿಯಾಗಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 5956ಕ್ಕೆ ಏರಿಕೆಯಾಗಿದೆ. ಜೊತೆಗೆ ಸೋಂಕು ತಗುಲಿದ ಇಬ್ಬರು ಮೃತಪಟ್ಟಿದ್ದಾರೆ. ಇವರೊಂದಿಗೆ ಸೋಂಕಿನಿಂದ ಮೃತರಾದವರ ಸಂಖ್ಯೆ 159ಕ್ಕೆ ಏರಿಕೆಯಾಗಿದೆ. ಮೃತರಲ್ಲಿ ತುಮಕೂರು ತಾಲ್ಲೂಕಿನ 100 ಜನ ಸೇರಿದ್ದಾರೆ.

    ತುಮಕೂರು ತಾಲ್ಲೂಕು ಹೊನ್ನುಡಿಕೆಯ 42 ವರ್ಷದ ಗಂಡಸು ಹಾಗೂ ತಿಪಟೂರಿನ 66 ವರ್ಷದ ಗಂಡಸು ಸೋಂಕಿನಿಂದ ಮೃತಪಟ್ಟರೆ, ತಿಪಟೂರು ತಾಲ್ಲೂಕಿನ ನೊಣವಿನಕೆರೆಯ 65 ವರ್ಷದ ಮಹಿಳೆ ಅನ್ಯ ಕಾರಣದಿಂದ ಅಸುನೀಗಿದ್ದಾರೆ. ಇವರು ಅಸ್ತಮಾ ಹಾಗೂ ಕರುಳು ರೋಗದಿಂದ ಬಳಲುತ್ತಿದ್ದರು ಚಿಕಿತ್ಸೆ ಪಡೆಯುತ್ತಿದ್ದ ಇವರ ಗಂಟಲು ದ್ರವ ಪರೀಕ್ಷೆ ಮಾಡಿದಾಗ ಕೋವಿಡ್ ಸೋಂಕು ಇರುವುದು ಖಚಿತವಾಗಿತ್ತು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗೇಂದ್ರಪ್ಪ ಹೇಳಿದ್ದಾರೆ.

    ಕೊರೊನಾ ಸೋಂಕಿತರು ಚಿಕಿತ್ಸೆ ಪಡೆದು ಗುಣಮುಖರಾಗಿ ಸೋಮವಾರ 121 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಈವರೆಗೆ 4201 ಮಂದಿ ಗುಣಮುಖರಾದಂತಾಗಿದೆ. ಆದರೆ, ಜಿಲ್ಲೆಯಲ್ಲಿ 1590 ಸೋಂಕು ಸಕ್ರಿಯ ಪ್ರಕರಣಗಳಿವೆ. ಸೊಮವಾರ ವರದಿಯಾದ 181 ಪ್ರಕರಣಗಳಲ್ಲಿ ತುಮಕೂರು ತಾಲ್ಲೂಕಿನ 68 ಜನರಿಗೆ ಸೋಂಕು ಖಚಿತವಾಗಿದೆ. ಶಿರಾ ತಾಲ್ಲೂಕಿನಲ್ಲಿ 24, ಗುಬ್ಬಿ ತಾಲ್ಲೂಕಿನಲ್ಲಿ 23 ಜನರಿಗೆ, ಚಿಕ್ಕನಾಯಕನಹಳ್ಳಿ ತಾಲ್ಲೂಕಿನ 18, ಕುಣಿಗಲ್ ತಾಲ್ಲೂಕಿನ 11, ಕೊರಟಗೆರೆ ತಾಲ್ಲೂಕಿನ 10, ತಿಪಟೂರು ತಾಲ್ಲೂಕಿನ 9, ತುರುವೇಕೆರೆ ತಾಲ್ಲೂಕಿನಲ್ಲಿ 8, ಮಧುಗಿರಿ ತಾಲ್ಲೂಕಿನ 7, ಪಾವಗಡ ತಾಲ್ಲೂಕಿನ 4, ಜನರಿಗೆ ಕೊರೊನಾ ಸೋಂಕು ಖಚಿತವಾಗಿದೆ. ಇವರಲ್ಲಿ 97 ಪುರುಷರು, 84 ಮಹಿಳೆಯರು, 5 ಮಂದಿ ಮಕ್ಕಳು, 60 ವರ್ಷ ಮೇಲ್ಪಟ್ಟ 37 ಜನರಿದ್ದಾರೆ.

   ಇದೂವರೆಗೆ ಜಿಲ್ಲೆಯಲ್ಲಿ ವರದಿಯಾಗಿರುವ ಒಟ್ಟು 5956 ಸೋಂಕು ಪ್ರಕರಣಗಳಲ್ಲಿ ತುಮಕೂರು ತಾಲ್ಲೂಕಿನಲ್ಲಿ 2175, ಕುಣಿಗಲ್ ತಾ. 511, ಪಾವಗಡ ತಾ. 500, ತಿಪಟೂರು ತಾ. 470, ಗುಬ್ಬಿ ತಾ. 439, ಶಿರಾ ತಾ. 428, ಮಧುಗಿರಿ ತಾ. 400, ಚಿಕ್ಕನಾಯಕನಹಳ್ಳಿ ತಾ. 356, ತುರುವೇಕೆರೆ ತಾ. 354, ಕೊರಟಗೆರೆ ತಾ. 323 ಪ್ರಕರಣ ವರದಿಯಾಗಿವೆ.

    ಈವರೆಗೂ ಕೊರೊನಾ ಸೋಂಕು ತಗುಲಿದ 5956 ಜನರಲ್ಲಿ 159 ಜನ ಮೃತಪಟ್ಟಿದ್ದಾರೆ. ತುಮಕೂರು ತಾಲ್ಲೂಕಿನ 100, ಕುಣಿಗಲ್ ತಾಲ್ಲೂಕಿನಲ್ಲಿ 10, ಪಾವಗಡ ತಾಲ್ಲೂಕಿನ 8, ಗುಬ್ಬಿ ತಾಲ್ಲೂಕಿನಲ್ಲಿ 9, ಶಿರಾ ತಾಲ್ಲೂಕಿನ 7, ತಿಪಟೂರು ತಾಲ್ಲೂಕಿನ 7, ಕೊರಟಗೆರೆ ತಾಲ್ಲೂಕಿನಲ್ಲಿ 5, ಮಧುಗಿರಿ ತಾಲ್ಲೂಕಿನಲ್ಲಿ 4, ತುರುವೇಕೆರೆ ತಾಲ್ಲೂಕು 5, ಚಿಕ್ಕನಾಯಕನಹಳ್ಳಿ ತಾಲ್ಲೂಕಿನ 4 ಮಂದಿ ಕೋವಿಡ್‍ಗೆ ಬಲಿಯಾಗಿದ್ದಾರೆ.ಸೋಂಕಿತರಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗುತ್ತಿರುವವರ ಸಂಖ್ಯೆಯೂ ಹೆಚ್ಚುತ್ತಿದೆ. ಜಿಲ್ಲೆಯಲ್ಲಿ ಇದೂವರೆಗೆ 5956 ಮಂದಿಗೆ ಸೋಂಕು ತಗುಲಿದೆ, ಇವರಲ್ಲಿ 4201 ಮಂದಿ ಗುಣಮುಖರಾಗಿದ್ದಾರೆ..

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link