ಬೆಂಗಳೂರು
ಬೊಮ್ಮನಹಳ್ಳಿ ಹೊಂಗಸಂದ್ರದಲ್ಲಿ ಕೊರೊನಾ ಅಟ್ಟಹಾಸ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ವಿದ್ಯಾ ಜ್ಯೋತಿ ಕಾಲೊನಿಯಲ್ಲಿ ಬಿಬಿಎಂಪಿ ಆಪರೇಷನ್ ಕ್ವಾರಂಟೈನ್ ನಡೆಸಿದ್ದು ಕಳಕೆ ರಾತ್ರಿ ನೂರಕ್ಕೂ ಹೆಚ್ಚು ಜನರನ್ನ ಕ್ವಾರಂಟೈನ್ ಗೆ, ಕರೆದೊಯ್ಯಲಾಗಿದೆ.
ಕ್ವಾರಂಟೈನ್ ನಲ್ಲಿ ಇದ್ದವರ ಪರೀಕ್ಷಾ ವರದಿಯಲ್ಲಿ 9 ಮಂದಿಗೆ ಪಾಸಿಟಿವ್ ಬಂದ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ 15 ರಿಂದ 20 ಟಿಟಿಗಳನ್ನ ಬಳಸಿ ಕಾಲೋನಿ ನಿವಾಸಿಗಳನ್ನು ಕ್ವಾರಂಟೈನ್ ಗೆ ಶಿಫ್ಟ್ ಮಾಡಲಾಯಿತು. ಎಲ್ಲರೂ ಕೂಡ ಕೂಲಿ ಕಾರ್ಮಿಕರಾಗಿದ್ದು, ರಾತ್ರಿ 11 ಗಂಟೆ ಯಿಂದ ಬೆಳಗಿನ ಜಾವ 2:25 ರವರೆಗೂ ಬಿಬಿಎಂಪಿ ಕಾರ್ಯಾಚರಣೆ ನಡೆಸಿ ನಿವಾಸಿಗಳನ್ನು ಕ್ವಾರಂಟೈನ್ ಗೆ ಸ್ಥಳಾಂತರ ಮಾಡಲಾಯಿತು.
ಪ್ರಾಥಮಿಕ ಸಂಪರ್ಕ 24, ಸೆಕೆಂಡರಿ ಕಾಂಟ್ಯಾಕ್ಟ್ 164, ಒಟ್ಟು 188 ಮಂದಿಯನ್ನ ಕ್ವಾರಂಟೈನ್ ನಲ್ಲಿ ಇಡಲಾಗಿದೆ ಇಡೀ ವಿದ್ಯಾಜ್ಯೋತಿ ನಗರವನ್ನೇ ಖಾಲಿ ಮಾಡಿಸಲಾಗಿದೆ.ಇಂದು ಸಂಜೆಯ ಹೊತ್ತಿಗೆ ಮತ್ತಷ್ಟು ಕೊರೊನಾ ಪಾಸಿಟಿವ್ ಆಗುವ ಸಾಧ್ಯತೆ ಇದ್ದು,ಪ್ರಾಥಮಿಕ ಹಾಗೂ ದ್ವಿತೀಯ ಹಂತದ ಸಂಪರ್ಕಿತರ ಸಂಖ್ಯೆ ಆತಂಕ ಹುಟ್ಟಿಸಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್, 188 ಜನರನ್ನು ಕ್ವಾರಂಟೈನ್ ಮಾಡಿದ್ದು ಎಲ್ಲರಿಗೂ ಸರ್ಕಾರದಿಂದಲೇ ವ್ಯವಸ್ಥೆ ಮಾಡಲಾಗುತ್ತದೆ,ಎರಡು ದಿನದಲ್ಲಿ ಅವರೆಲ್ಲರ ಕೊರೊನಾ ತಪಾಸಣೆ ನಡೆಸಲಾಗುತ್ತದೆ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ