ವಿಯೆನ್ನಾ:
ಆಸ್ಟ್ರಿಯಾದಲ್ಲಿ ಮಂಗಳವಾರ ಮೊದಲ ಬಾರಿಗೆ ಎರಡು ಕೊರೊನಾ ಸೋಂಕು ಪ್ರಕರಣಗಳು ಪತ್ತೆಯಾಗಿವೆ ಎಂದು ಅಲ್ಲಿನ ಆರೋಗ್ಯ ಸಚಿವಾಲಯ ತಿಳಿಸಿದೆ.
ಟ್ಯೋರೊಲ್ ನಲ್ಲಿ ಸುಮಾರು 24 ವರ್ಷದ ಇಬ್ಬರಲ್ಲಿ ಕೊರೊನಾ ಸೋಂಕಿರುವುದು ಖಚಿತವಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಈ ಇಬ್ಬರು ಸ್ವಯಂಪ್ರೇರಿತರಾಗಿ ವೈದ್ಯಕೀಯ ಕೇಂದ್ರವನ್ನು ಸಂಪರ್ಕಿಸಿ ತಮ್ಮಲ್ಲಿ ಕಂಡುಬರುತ್ತಿರುವ ಲಕ್ಷಣಗಳ ಬಗ್ಗೆ ವಿವರಿಸಿದ್ದರು. ಅವರು ಜ್ವರದಿಂದ ಬಳಲುತ್ತಿದ್ದು ಅವರ ಸ್ಥಿತಿ ಗಂಭೀರವಾಗಿಲ್ಲ ಎಂದೂ ಹೇಳಲಾಗಿದೆ. ಅವರಿಬ್ಬರನ್ನೂ ಚಿಕಿತ್ಸಾಲಯದಲ್ಲಿ ಪ್ರತ್ಯೇಕವಾಗಿರಿಸಲಾಗಿದ್ದು ಈ ಪ್ರದೇಶದಲ್ಲಿ ಕೊರೊನಾ ಸೋಂಕಿತರ ಪತ್ತೆಗೆ ಪ್ರತ್ಯೇಕ ಕ್ಲಿನಿಕ್ ತೆರೆಯಲಾಗುವುದು.
