ಕೊಟ್ಟೂರು
ಸ್ವಾತಂತ್ರ್ಯ ಪೂರ್ವದಲ್ಲಿ ಹೆಣ್ಣನ್ನು ಆಸ್ತಿಗೆ ಸೀಮಿತಗೊಳಿಸಿದವರ ವಿರುದ್ದ ಅಕ್ಷರ ಕ್ರಾಂತಿಯ ಮೂಲಕ ಮಹಿಳೆಯರಿಗೆ ಶಿಕ್ಷಣ ನೀಡಿ ಮುಖ್ಯವಾಹಿನಿಗೆ ತಂದ ಕೀರ್ತಿ ಸಾವಿತ್ರಿಬಾಯಿಪುಲೆ ಸೇರುತ್ತದೆ ಎಂದು ಉಪನ್ಯಾಸಕಿ ಕುಸುಮ ಸಜ್ಜನ್ ಹೇಳಿದರು.
ಪಟ್ಟಣದ ಕೊಟ್ಟೂರೇಶ್ವರ ಕಾಲೇಜ್‍ನಲ್ಲಿ ಸೋಮವಾರ ಎಐಎಸ್‍ಎಫ್ ಹಮ್ಮಿಕೊಂಡಿದ್ದ ಸಾವಿತ್ರಬಾಯಿಪುಲೆ ಅವರ 188ನೇ ಜನ್ಮದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮೌಢ್ಯತೆಗಳು ವಿಜೃಂಭಿಸುತ್ತಿದ್ದ ಸಂದರ್ಭದಲ್ಲಿ ಹೆಣ್ಣಿಗೆ ಆತ್ಮವಿಶ್ವಾಸ ತುಂಬಿ ಶಿಕ್ಷಣ ಕೊಡಿಸಿ ಸಮಾನತೆಯ ಹೆಜ್ಜೆಯೊಂದಿಗೆ ಶಿಕ್ಷಣ ಸಂಸ್ಥೆ ಆರಂಭಿಸುವಲ್ಲಿ ಪ್ರೋತ್ಸಾಹಿಸಿದವರಲ್ಲಿ ಪುಲೆ ಪ್ರಮುಖರು ಎಂದರು.
ವೇದಗಳ ಕಾಲದಲ್ಲಿ ಸಂಪತ್ತಿಗೆ ಬೆಲೆ ಕಟ್ಟುವ ವರ್ಗವೇ ಹೆಚ್ಚಾಗಿತ್ತು. ದಲಿತರಿಗೆ ಮತ್ತು ಮಹಿಳೆಯರಿಗೆ ವೈಚಾರಿಕತೆಯಲ್ಲಿ ಸದೃಢಭಾವನೆಗಳನ್ನು ತುಂಬುವ ಮೂಲಕ ಸಾಮಾಜಿಕ ಕ್ರಾಂತಿಗೆ ಪುಲೆ ದಂಪತಿಗಳು ಕಾರಣರಾಗಿದ್ದರು ಎಂದರು.
ಎಐಎಸ್‍ಎಫ್ ರಾಜ್ಯ ಉಪಾಧ್ಯಕ್ಷೆ ವೀಣಾ ಮಾತನಾಡಿ, ಶಬರಿಮಲೆ ಪ್ರವೇಶಕ್ಕೆ ಸುಪ್ರೀಂ ಕೋರ್ಟ ಮಹಿಳೆಯರಿಗೆ ಪ್ರವೇಶಕ್ಕೆ ಅವಕಾಶ ಕಲ್ಪಿಸಿದ್ದರೂ, ಮನುವಾದಿಗಳು ಇದಕ್ಕೆ ಅವಕಾಶ ನೀಡದೆ. ಸಂವಿಧಾನ ವಿರೋಧಿ ಚಟುವಟಿಕೆ ಕೈಗೊಂಡು ಸಮಾಜದಲ್ಲಿ ಅಶಾಂತಿ ಉಂಟುಮಾಡುತ್ತಿದ್ದಾರೆ ಎಂದರು.
ಕಾಲೇಜ್ ಪ್ರಾಚಾರ್ಯರಾದ ಬಾಷಾ ಸಾಹೇಬ್, ಉಪನ್ಯಾಸಕರಾದ ವಸಂತಕುಮಾರ್, ಗುರುಲಿಂಗನಗೌಡ, ಕರಿಬಸಮ್ಮ, ಎಐಎಸ್‍ಎಫ್ ರಾಜ್ಯ ಸಹಕಾರ್ಯದರ್ಶಿ ಮಾದಿಹಳ್ಳಿ ಮಂಜುನಾಥ್, ಸಂಚಾಲಕ ಕೊಟ್ರೇಶ ಮುಂಡ್ರಿಗಿಮಠ, ಸಂಘಟನಾ ಕಾರ್ಯದರ್ಶಿ ಕೆ. ತಿಪ್ಪೇಸ್ವಾಮಿ ಶಿರಬಿ, ಪದಾಧಿಕಾರಿಗಳಾದ ಸಿದ್ದೇಶ, ಶೃತಿ, ಅನಿತಾ ಮುಂತಾದವರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
