ಹುಳಿಯಾರು
ಮಹಾರಾಷ್ಟ್ರ ರಾಜ್ಯದಿಂದ ಉದ್ಯೋಗಕ್ಕಾಗಿ ಚಿಕ್ಕನಾಯಕನಹಳ್ಳಿ ತಾಲ್ಲೂಕಿಗೆ ಬಂದಿದ್ದ 197 ಕೂಲಿಕಾರ್ಮಿಕರು ಲಾಕ್‍ಡೌನ್‍ನಿಂದಾಗಿ ಅತ್ತ ಸ್ವಗ್ರಾಮಕ್ಕೆ ತೆರಳಲಾಗದೆ, ಇತ್ತ ಕೂಲಿ ಕೆಲಸವೂ ಸಿಗದೆ ಸಂಕಷ್ಟಕ್ಕೆ ಸಿಲುಕಿದ್ದರು.
ಇವರ ಸಂಕಷ್ಟವನ್ನು ಅರಿತ ತಾಲ್ಲೂಕು ಆಡಳಿತ ಹುಳಿಯಾರು ಡೆಪ್ಯುಟಿ ತಹಸೀಲ್ದಾರ್ ಹಾಗೂ ನೋಡಲ್ ಅಧಿಕಾರಿ ಎಸ್. ಸೋಮೇಶ್ ರವರ ನೇತೃತ್ವದಲ್ಲಿ 7 ಕೆಎಸ್‍ಆರ್‍ಟಿಸಿ ಬಸ್‍ಗಳ ಮೂಲಕ ಮಹಾರಾಷ್ಟ್ರಕ್ಕೆ ಸುರಕ್ಷಿತವಾಗಿ ಕಳುಹಿಸಿಕೊಡಲಾಯಿತು. ಸುಮಾರು ವರ್ಷಗಳಿಂದ ತಾಲ್ಲೂಕಿನಲ್ಲಿ ಬೀಡುಬಿಟ್ಟಿದ್ದ ಇವರನ್ನು ಕಾತ್ರಿಕೆಹಾಲ್‍ನಿಂದ 2 ಬಸ್, ಹುಳಿಯಾರಿನಿಂದ 3 ಬಸ್, ಬೆಳ್ಳಾರದಿಂದ 2 ಬಸ್ ಮೂಲಕ ಮಹಾರಾಷ್ಟ್ರ ಗಡಿಭಾಗವಾದ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಚೆಕ್ ಪೋಸ್ಟ್‍ಗೆ ಕರೆ ತಂದು, ಭಾನುವಾರ ಬೆಳಗ್ಗೆ ಮಹಾರಾಷ್ಟ್ರ ರಾಜ್ಯದ ಅಧಿಕಾರಿಗಳಿಗೆ ಹಸ್ತಾಂತರಿಸಲಾಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ