ಹಾವೇರಿ :
ದೀನದಯಾಳ್ ಅಂತ್ಯೋದಯ ಯೋಜನೆ-ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ ಯೋಜನೆಯ ನಗರ ಬೀದಿ ಬದಿ ವ್ಯಾಪಾರಿಗಳಿಗೆ ಬೆಂಬಲ ಉಪ ಘಟಕದಡಿ ನಗರ ಸಭೆ ವ್ಯಾಪ್ತಿಯಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ಪ್ರಮಾಣ ಪತ್ರ ಹಾಗೂ ಗುರುತಿನ ಚೀಟಿಯನ್ನು ವಿತರಿಸುವಂತೆ ಒತ್ತಾಯಿಸಿ ಕ.ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟದಿಂದ ನಗರಸಭೆ ಮ್ಯಾನೇಜರ ಜಿ.ಕೆ ಜ್ಯೋಶಿ ಅವರಿಗೆ ಮನವಿ ಸಲ್ಲಿಸಿಲಾಯಿತು.
ಸಮೀಕ್ಷೆ ಮಾಡಿ ಬಂದ ಬೀದಿ ಬದಿ ವ್ಯಾಪಾರಿಗಳ ಪಟ್ಟಿ ತಯಾರಿಸಿ,ಬೀದಿ ಬದಿ ವ್ಯಾಪಾರಿಗಳ ಗುರುತಿನ ಚೀಟಿ ಮತ್ತು ಪ್ರಮಾಣ ಪತ್ರ, ಮಹಿಳೆಯರಿಗೆ ಬೀದಿ ಬದಿ ವ್ಯಾಪಾರಿಗಳಿಗೆ ಸರ್ಕಾರದಿಂದ ಹತ್ತು ಸಾವಿರ. ರಾಷ್ಟ್ರೀಯ ಸ್ವಾಸ್ಥ್ಯ ವಿಮಾ ಯೋಜನೆ (ಆರ್.ಎಸ್.ವಿ.ವೈ.) ಜೀವ ವಿಮಾ ಯೋಜನೆ ಇ,ಎಸ್,ಐ.ಪಿಂಷನಿಗಳು,ವಸತಿಆಶ್ರಯಗಳು,ಕುಡಿಯುವ ನೀರು, ಗೋದಾಮು , ಶೌಚಾಲಯ,ವಿದ್ಯುತ್,ಟಾರಪಲ್,ಗಾಡಿಗಳು ಮತ್ತು ಇತರ ಸೌಲಭ್ಯಗಳನ್ನು ನೀಡುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ. ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷೆ ನಾಗರತ್ನಾ ಧಾರವಾಡಕರ.ಉಪಾಧ್ಯಕ್ಷ ಸಂಜೀವಕುಮಾರ ಎಳಕೊಳ್ಳದ.ಕಾರ್ಯದರ್ಶಿ ಪ್ರದೀಪಕುಮಾರ ಡಿ.ಮಹೇಶ ಹಂಜಗಿ.ಸಾಧೀಕ ಯಾದವಾಡ.ರಾಜೇಶ್ವರಿ ತಳವಾರ ಇದ್ದರು.