ಹರಪನಹಳ್ಳಿ:
ಪಟ್ಟಣ ಹೊರವಲಯದ ಮೈಲಾರಲಿಂಗೇಶ್ವರ ದೇವಸ್ಥಾನದ ಬಳಿ ಶುಕ್ರವಾರ ವಿಷಪೂರಿತ ಆಹಾರ ಸೇವಿಸಿದ್ದ 20 ಕುರಿಗಳು ಮೃತಪಟ್ಟಿದ್ದು, 30ಕ್ಕೂ ಹೆಚ್ಚು ಕುರಿಗಳ ಸ್ಥಿತಿ ಗಂಭೀರವಾಗಿದೆ.
ಉಪ್ಪಾರಗೇರಿಯ ದಾನೇರ ಚಂದ್ರಪ್ಪ, ಗಾಟಿನ ಸಣ್ಣಪ್ಪ, ಕಾವಿ ಗೋಣೆಪ್ಪ, ಮಜ್ಜಿಗೇರಿ ನಾಗರಾಜ, ಹರವಿ ಬಸಪ್ಪ, ಕಂಚಿಕೇರಿ ನೀಲಪ್ಪ ಎಂಬುವವರಿಗೆ ಸೇರಿದ ಕುರಿಗಳು ಮೃತಪಟ್ಟಿವೆ. ದೇವಸ್ಥಾನ ಹಿಂಭಾಗದಲ್ಲಿರುವ ಜಮೀನಿನಲ್ಲಿ ಸವತಿ ಬಳ್ಳಿಗೆ ಈಚೆಗೆ ಔಷದಿ ಸಿಂಪಡಿಸಲಾಗಿತ್ತು.
ಈ ಕುರಿತು ಪ್ರತಿಕ್ರಿಯೆ ನೀಡಿದ ಪಶು ಇಲಾಖೆಯ ಸಹಾಯಕ ನಿರ್ದೇಶಕ ಶಿವಕುಮಾರ ಅವರು, ವಿಷಪೂರಿತ ಆಹಾರ ಸೇವಿಸಿ ಕುರಿಗಳು ಸಾವನ್ನಪ್ಪಿವೆ. ಕುರಿಗಳ ಮಾಲೀಕರಿಗೆ ಕಾನೂನಿನ ಪ್ರಕಾರ ಸೂಕ್ತ ಪರಿಹಾರ ನೀಡಲಾಗುವುದು ಎಂದು ತಿಳಿಸಿದರು. ಘಟನಾ ಸ್ಥಳಕ್ಕೆ ಪುರಸಭಾ ಸದಸ್ಯರಾದ ಬೂದಿ ನವೀನ, ನಾಗರಾಜ ಇತರರು ಭೇಟಿ ನೀಡಿ ಪರಿಶೀಲಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ