ತಾಲ್ಲೂಕಿನ ಎರಡು ಸಾವಿರ ಜನರಿಗೆ ಸೂರು : ಜಮೀರ್ ಅಹ್ಮದ್ ಖಾನ್

ಹರಿಹರ:

     ತಾಲ್ಲೂಕಿನ ಸೂರಿಲ್ಲದ ಸುಮಾರು ಎರಡು ಸಾವಿರ ಜನರನ್ನು ಗುರುತಿಸಿ ವಕ್ಫ್ ಬೋರ್ಡಿನಿಂದ ಮನೆಗಳನ್ನು ಕೊಡಲು ಯೋಜಿಸಲಾಗಿದೆ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದರು.

      ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನ ಕಾರ್ಯಕ್ರಮಕ್ಕೆ ಹೋಗುವ ಮಾರ್ಗದ ಮಧ್ಯೆ ಶಾಸಕ ಎಸ್.ರಾಮಪ್ಪವರ ನಿವಾಸಕ್ಕೆ ಔಪಚಾರಿಕ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಈ ವಿಷಯ ತಿಳಿಸಿದ ಅವರು ಈ ಕ್ಷೇತ್ರದಲ್ಲಿ ಸುಮಾರು 35 ಸಾವಿರದಷ್ಟು ಜನ ಮುಸ್ಲಿಮರಿದ್ದು ಅವರಲ್ಲಿ ಮನೆ ಇಲ್ಲದ ಸುಮಾರು 2 ಸಾವಿರ ಜನರನ್ನು ಗುರುತಿಸಿ ಅವರಿಗೆ ವಕ್ಫ್ ಬೋರ್ಡಿನಿಂದ ಮನೆಗಳನ್ನು ಕೊಡಿಸುವ ಇಚ್ಛೆ ಇದ್ದು , ಈ ಸಂಬಂಧವಾಗಿ ಬಜೆಟ್ ನಲ್ಲಿ ಹೆಚ್ಚಿಗೆ 1000 ಕೋಟಿ ಅನುದಾನ ಕೇಳಲಾಗಿದ್ದೆ, ಸದ್ಯದಲ್ಲಿಯೇ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಈ ಬಗ್ಗೆ ಘೋಷಣೆ ಮಾಡಲಿದ್ದಾರೆ ಎಂದರು.

       ವಕ್ ಬೋರ್ಡಿನ ಸುಮಾರು ಆಸ್ತಿಗಳಿಗೆ ಖಾತೆಗಳ ದಾಖಲಾತಿಗಳು ಆಗಿರುವುದಿಲ್ಲ ಅವುಗಳ ಖಾತೆಗಳ ಬಗ್ಗೆ ಗಮನ ಹರಿಸಿದ್ದು ಬೆಂಗಳೂರಿನಲ್ಲಿ ನೂರಾರು ಕೋಟಿಗಟ್ಟಲೆ ಬೆಲೆಬಾಳುವ ಸುಮಾರು 47 ಖಾತೆಗಳಿದ್ದು ಅವುಗಳಲ್ಲಿ ಈಗಾಗಲೇ 37 ಖಾತೆಗಳ ದಾಖಲೆ ಬಂದಿರುತ್ತವೆ ಅದೇ ರೀತಿ ರಾಜ್ಯದ ಇತರೆ ಭಾಗಗಳಲ್ಲಿಯೂ ಸಹ ಖಾತೆಗಳ ದಾಖಲೆಗಳನ್ನು ತೆಗೆಸುವ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು.

       ಹಜ್ ಯಾತ್ರಿಕರ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು ನಮ್ಮ ಕೋಟಾದಲ್ಲಿ 6700 ಜನರಿಗೆ ಅವಕಾಶವಿದ್ದು, ಹೆಚ್ಚುವರಿ ಮಾಡಲು ಕೋರಿಕೆ ಸಲ್ಲಿಸಲಾಗಿದೆ ಕಳೆದ ಬಾರಿ ಯಾವುದೇ ಬದಲಾವಣೆ ಮಾಡಿರುವುದಿಲ್ಲ ಈ ಸಾರಿ ಸದ್ಯದ ಮಾಹಿತಿಯ ಪ್ರಕಾರ ಇನ್ನೂ 2000 ಹೆಚ್ಚು ಮಾಡುವುದಾಗಿ ತಿಳಿದು ಬಂದಿದೆ ಎಂದು ಹೇಳಿದರು.

       ಮುಂದೆ ಬರಲಿರುವ ಲೋಕಸಭಾ ಚುನಾವಣೆಯಲ್ಲಿ ನಮ್ಮ ಹಾಗೂ ಜೆಡಿಎಸ್ ಪಕ್ಷದ ಹೊಂದಾಣಿಕೆಯಿಂದ ಕಡಿಮೆ ಎಂದರೂ 22 ಸೀಟುಗಳನ್ನು ಗೆಲ್ಲುತ್ತೇವೆ, ಮಂಡ್ಯ ಹಾಗೂ ಹಾಸನ ಕ್ಷೇತ್ರದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿ ಆ ಕ್ಷೇತ್ರಗಳಲ್ಲಿ ಈಗ ಜೆಡಿಎಸ್ ಪಕ್ಷದ ಸಂಸದರು ಇರುವುದರಿಂದ ಅವರಿಗೆ ಬಿಟ್ಟು ಕೊಡಲಾಗುವುದು.

        ಈ ಹಿಂದೆ ಇದೇ ಮಾ. 9 ರ ಶನಿವಾರದಂದು ನಮ್ಮ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿಯವರು ರಾಜ್ಯಕ್ಕೆ ಆಗಮಿಸುತ್ತಿದ್ದು, ಧಾರವಾಡ ಹಾಗೂ ಹಾವೇರಿ ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಬಂಕಾಪುರದಲ್ಲಿ ಕಾರ್ಯಕ್ರಮ ನಡೆಸಲು ತೀರ್ಮಾನಿಸಲಾಗಿತ್ತು.
ಆದರೆ ಪಕ್ಷದ ಮುಖಂಡರೆಲ್ಲರೂ ಸೇರಿ ಹಾವೇರಿ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿ ಹಾವೇರಿಯಲ್ಲಿ ರಾಹುಲ್ ಗಾಂಧಿಯವರ ಕಾರ್ಯಕ್ರಮ ಮಾಡಲು ತೀರ್ಮಾನವನ್ನು ತೆಗೆದುಕೊಂಡುರಿತ್ತಾರೆ.ಈ ಕಾರ್ಯಕ್ರಮಕ್ಕೆ ಲಕ್ಷಾಂತರ ಜನ ಸೇರುವ ನಿರೀಕ್ಷೆಯಿದೆ ಎಂಬ ಮಾಹಿತಿ ನೀಡಿದರು.

        ಈ ಸಂದರ್ಭದಲ್ಲಿ ಶಾಸಕ ಎಸ್.ರಾಮಪ್ಪ, ನಗರಸಭಾ ಸದಸ್ಯರುಗಳಾದ ಎಂ.ಎಸ್.ವಸಂತ್,ಸೈಯದ್ ಏಜಾಜ್ ಅಹ್ಮದ್, ಬಿ.ಕೆ.ಸಯ್ಯದ್ ರೆಹಮಾನ್,ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಲ್.ಬಿ.ಹನುಮಂತಪ್ಪ,ಮಲೆಬೆನ್ನೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬಿದಾಲಿ,ಉಪಾಧ್ಯಕ್ಷ ,ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷ ಆಸಿಫ್ ಜುಲೈದಿ,ಸಯ್ಯದ್ ಜಾಕಿರ್ ಅಹಮದ್,ಮುಖಂಡರಾದ ಕೆ.ಸನಾಉಲ್ಲಾ, ಮುಂತಾದವರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap