ಹೊಸಪೇಟೆ: 

ಜೂನ್ 5 ವಿಶ್ವಪರಿಸರ ದಿನಾಚರಣೆ ನಿಮಿತ್ತ ರೋಟರಿ ಕ್ಲಬ್ ಆವರಣದಿಂದ ರೋಟರಿ ವೃತ್ತದವರೆಗೆ ಜನಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ರೋಟರಿ ಕ್ಲಬ್ ಅಧ್ಯಕ್ಷ ಡಾ.ವಾಸುದೇವ ರೆಡ್ಡಿ ತಿಳಿಸಿದರು.
ನಗರದ ರೋಟರಿ ಕ್ಲಬ್ ಆವರಣದಲ್ಲಿ ಇಂದು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಪರಿಸರ ಸಂರಕ್ಷಣೆಗೆ ಪ್ರತಿಯೊಬ್ಬರು ಮುಂದಾಗುವ ಅಗತ್ಯವಿದೆ. ನಗರದ ಪ್ರಮುಖರಸ್ತೆಗಳ ವಿಸ್ತರಣೆ ಸಂದರ್ಭದಲ್ಲಿ ಹಕವು ಮರಗಳು ಧರೆಗುರುಳಿದಿದೆ. ಇದರಿಂದ ಹೊಸಪೇಟೆಯಲ್ಲಿ ತಾಪಾಮಾನ ಹೆಚ್ಚಾಗಿ ಕಾಲ ಕಾಲಕ್ಕೆ ಮಳೆ ಇಲ್ಲದಂತಾಗಿದೆ. ಈ ಹಿನ್ನೆಲೆಯಲ್ಲಿ ಯುವಕರ ತಂಡದೊಂದಿಗೆ ನಗರದ ನಾನಾ ಭಾಗಗಳಲ್ಲಿ 2000 ಸಾವಿರ ಸಸಿಗಳನ್ನು ನೆಡಲಾಗುವುದು.
ಜೊತೆಗೆ ಅವುಗಳ ಪೋಷಣೆಯನ್ನು ಮಾಡಲಾಗುವುದು. ಇದಕ್ಕೆ ನಗರದ ಎಲ್ಲಾ ವರ್ಗದ ಜನರು ಭಾಗವಹಿಸಿ ಅಗತ್ಯ ಸಹಕಾರ ನೀಡಬೇಕು ಎಂದು ಮನವಿಮಾಡಿದರು.
ಗ್ರೀನ್ ಹೊಸಪೇಟೆ ಸಂಸ್ಥೆಯ ಅಧ್ಯಕ್ಷ ಸುನೀಲ್ ಗೌಡ ಮಾತನಾಡಿ, ಜೂನ್ 5 ಕ್ಕೆ ನಡೆಯುವ ಪರಿಸರ ದಿನಾಚರಣೆ ಜಾಗೃತಿ ಜಾಥಾದಲ್ಲಿ ಎಲ್ಲರೂ ಭಾಗವಹಿಸುವ ಮೂಲಕ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು. ಜೂನ್ 5 ರಂದು ನಗರದ ಮುಖ್ಯ ಸ್ಥಳಗಳಲ್ಲಿ 70 ಸಸಿಗಳನ್ನು ನೆಡಲಾಗುವುದು ಎಂದರು.
