ಲಂಚಕ್ಕೆ ಕೈಚಾಚದ ನೌಕರರು ಆರ್‍ಟಿಐ ಮಾಹಿತಿದಾರರು:-ಎ.ಎಂ.ಪಿ.ವಾಗೀಶ್

ಹಗರಿಬೊಮ್ಮನಹಳ್ಳಿ

          ಯಾವ ಇಲಾಖೆಗಳಲ್ಲಿ ಯಾರು ಲಂಚಪಡೆಯದೆ ತಮ್ಮ ಕರ್ತವ್ಯ ನಿರ್ವಹಿಸುತ್ತಾರೋ ಅಂತಹ ನೌಕರರೇ ಆರ್.ಟಿ.ಐಗೆ ಮಾಹಿತಿದಾರರಾಗಿರುತ್ತಾರೆ ಎಂದು ಆರ್.ಟಿ.ಐ ಕಾರ್ಯಕರ್ತ ಹಾಗೂ ಸಂಪನ್ಮೂಲ ವ್ಯಕ್ತಿ ಎ.ಎಂ.ಪಿ.ವಾಗೀಶ್ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದರು.

          ಪಟ್ಟಣದ ಗುರುಭವನದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ಕ್ಷೇತ್ರ ಸಮನ್ವಯಾಧಿಕಾರಿಗಳ ಸಂಯುಕ್ತಾಶ್ರಯದಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರಿಗೆ ಶುಕ್ರವಾರ ಹಮ್ಮಿಕೊಂಡಿದ್ದ ಮಾಹಿತಿ ಹಕ್ಕು ಅಧಿನಿಯಾಮ 2005ರ ಕುರಿತಾದ ಕಾರ್ಯಗಾರದಲ್ಲಿ ಅವರು ಉಪನ್ಯಾಸ ನೀಡಿದರು. ಆರ್.ಟಿ.ಐನವರು ಕೇಳಿದ ಮಾಹಿತಿ ನೀಡದ ಇಲಾಖೆಗಳು ದೂರುವುದು ಸರಿಯಲ್ಲ, ಶಿಕ್ಷಣ ಇಲಾಖೆಯಲ್ಲಿ ಅವ್ಯವಹಾರ ಕಡಿಮೆ ಇರಬಹುದು, ಆದರೂ ಎಲ್ಲಾ ಶಿಕ್ಷಕ ಶಿಕ್ಷಕಿಯರು ಆರ್.ಟಿ.ಐ ಬಗ್ಗೆ ಮಾಃಇತಿ ತಿಳಿದುಕೋಮಡಿರಬೇಕು ಆರ್.ಟಿ.ಐ ಗೆ ಸಂಬಂಧಿಸಿದ ಕೆಲ ಸೆಕ್ಷನ್‍ಗಳು ಮಾಹಿತಿ ಹಕ್ಕಿನಡಿ ಬರುತ್ತವೆ ಎಂದು ಎಲ್ಲಾ ಕಚೇರಿಗಳ ಮುಂದೆ ನಮೋದಿಸಬೇಕು ಎಂದು ಸಲಹೆ ನೀಡಿದರು. ಇದರ ಸದುಪಯೋಗ ಪಡೆದುಕೊಳ್ಳಿ ಎಂದರು.

         ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಶೇಖರಪ್ಪ ಎಂ.ಹೊರಪೇಟೆ, ಶಿಕ್ಷಣ ಸಮನ್ವಯ ಅಧಿಕಾರಿ ಡಿ.ಬೋರಯ್ಯ, ಅಕ್ಷರ ದಾಸೋಹ ಸಹಾಯಕ ನಿರ್ದೆಶಕ ರವಿನಾಯ್ಕ, ಎ.ಎಂ.ಪಂಚಪ್ಪ, ಎಸ್.ವಿ.ಪಾಟೀಲ್, ಶಂಭುಲಿಂಗಯ್ಯ ಹಾಗೂ ತಾಲೂಕಿನ ಶಾಲಾ ಮುಖ್ಯ ಶಿಕ್ಷಕ-ಶಿಕ್ಷಕಿಯರು ಉಪಸ್ಥಿತರಿದ್ದರು.ಸಿ.ವೈ.ಮೋರ್ನಾಳ್ ಸ್ವಾಗತಿಸಿದರು, ಜೆ.ಹನುಮರೆಡ್ಡಿ ವಂದಿಸಿದದರು, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಭೀಮಸೇನಪ್ಪ ನಿರ್ವಹಿಸಿದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link