2019 ರ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮ

ಗುಬ್ಬಿ

       ತಾನು ಸಂಪಾದಿಸಿದ ಸ್ವಲ್ಪ ಭಾಗವನ್ನು ಸಮಾಜ ಸೇವೆಗಾಗಿ ವಿನಿಯೋಗಿಸಿದಾಗ ಮಾತ್ರ ಸಮಾಜದಲ್ಲಿ ಆದರ್ಶ ವ್ಯಕ್ತಿಯಾಗಲು ಸಾಧ್ಯವಾಗುತ್ತದೆ ಎಂದು ಬೆಟ್ಟದಹಳ್ಳಿ ಗವಿಮಠದ ಶ್ರೀಚಂದ್ರಶೇಖರಸ್ವಾಮೀಜಿ ತಿಳಿಸಿದರು.

      ತಾಲೂಕಿನ ಬಾಗೂರು ಗೇಟಿನ ಅನುಭವ ಮಂಟಪದಲ್ಲಿ ಕರ್ನಾಟಕ ರಾಜ್ಯ ವೀರಶೈವ ಲಿಂಗಾಯಿತ ನೌಕರರ ಕ್ಷೇಮಾಭಿವೃದ್ದಿ ಸಂಘ ಹಾಗೂ ಶಿವಬಸವ ನೌಕರರ ಪತ್ತಿನ ಸಹಕಾರ ಸೌಹಾರ್ದ ನಿಯಮಿತದಿಂದ 2019 ರ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಮಾತನಾಡಿದ ಅವರು ಆದುನೀಕತೆ ಬೆಳೆದಂತೆ ಸೇವಾ ಮನೋಭಾವ ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ ನೌಕರರು ಸಂಘಟನೆಯ ಮೂಲಕ ಉತ್ತಮ ಸಮಾಜ ಮುಖಿ ಸೇವಾ ಕಾರ್ಯಗಳನ್ನು ಮಾಡುತ್ತಿರುವುದು ಶ್ಲಾಘನೀಯವಾದುದೆಂದು ತಿಳಿಸಿದರು.

         ಪ್ರತಿಯೂಬ್ಬ ವ್ಯಕ್ತಿಯು ಸಹ ತಮ್ಮ ಜೀವಿತದ ಅವಧಿಯಲ್ಲಿ ದುಡಿದಂತಹ ಒಂದು ಭಾಗವನ್ನಾದರು ಸಾಮಾಜ ಸೇವೆಗೆ ಮುಡುಪಾಗಿಡಬೇಕು ಆಗ ಮಾತ್ರ ಮನವೀಯತೆಯ ಬದುಕು ಸಾಗಿಸಬಹುದು ಸ್ವಾರ್ಥದ ಜೀವನಕ್ಕಿಂತ ನಿಸ್ವಾರ್ಥದ ಜೀವನ ಹೆಚ್ಚು ಸಂತೋಷ ನೀಡುತ್ತದೆ ಅದನ್ನು ಪ್ರತಿಯೊಬ್ಬರು ಅರಿತು ಬಾಳಬೇಕು ಎಂದು ತಿಳಿಸಿದರು.

          ಕರ್ನಾಟಕ ರಾಜ್ಯ ವೀರಶೈವ ಲಿಂಗಾಯಿತ ನೌಕರರ ಕ್ಷೇಮಾಭಿವೃದ್ದಿ ಸಂಘದ ತಾಲೂಕು ಅಧ್ಯಕ್ಷ ದಯಾನಂದ್ ಮಾತನಾಡಿ ವ್ಯಕ್ತಿಗೆ ವ್ಯಕ್ತಿತ್ವವೇ ಬಹಳ ಮುಖ್ಯವಾಗಿದ್ದು ಅದರಂತೆ ಜೀವನ ಮಾಡಬೇಕು ನಮ್ಮ ಸಂಘ ಪ್ರತಿ ವರ್ಷ ಹತು ಹಲವು ಸಂಅಜ ಸೇವಾ ಕರ್ಯಗಳನ್ನು ಮಾಡುತ್ತಾ ಬಂದಿದ್ದು ಮುಂದಿನ ದಿನಗಳಲ್ಲಿ ಮತ್ತಷ್ಟು ಸೇವಾ ಕಾರ್ಯಗಳನ್ನು ಮಾಡಲಾಗುವುದೆಂದು ತಿಳಿಸಿದ ಅವರು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರತಿಭಾ ಪುರಸ್ಕಾರ ಸೇರಿದಂತೆ ಶೈಕ್ಷಣಿಕವಾಗಿ ಕಷ್ಟದಲ್ಲಿರುವಂತಹ ವಿದ್ಯಾರ್ಥಿಗಳಿಗೆ ಸಹಾಯ ಮಾಡುವುದು ಇಂತಹ ಹಲವು ಸೇವಾ ಕಾರ್ಯಗಳನ್ನು ನಿರಂತರವಾಗಿ ಮಾಡುತ್ತಿರುವುದಾಗಿ ತಿಳಿಸಿದರು.

          ಕಾರ್ಯಕ್ರಮದಲ್ಲಿ ಮುಖಂಡ ಎಸ್.ಡಿ.ದಿಲೀಪ್‍ಕುಮಾರ್, ಹಾರನಹಳ್ಳಿ ಶಿವಣ್ಣ, ಪ್ರೌಢಶಾಲಾ ಸಹಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಉಮೆಶ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ದಯಾನಂದಸರಸ್ವತಿ, ಉಪಾಧ್ಯಾಯರ ಸಹಕಾರ ಸಂಘದ ಅಧ್ಯಕ್ಷ ಟಿ.ಎಸ್.ಶಿವಣ್ಣ, ಕಾರ್ಯದರ್ಶಿ ಕೆ.ಎಂ.ರವೀಶ್, ಖಜಾಂಚಿ ಅಡವೀಶ್, ಪದಾಧಿಕಾರಿಗಳಾದ ಡಿ.ಎಸ್.ಗಂಗಾಧರ್, ಕಾಂತರಾಜು, ಶಾಂತರಾಜು, ಜಗದೀಶ್, ಯತೀಶ್, ಶಿವಕುಮಾರ್, ಮೋಹನ್‍ಕುಮಾರ್, ಹಾರನಹಳ್ಳಿ ಶಿವಣ್ಣ, ಸಿದ್ದಲಿಂಗಮೂರ್ತಿ, ನಂಜಪ್ಪ, ಸಿದ್ದರಾಮಣ್ಣ ಸೇರಿದಂತೆ ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link