ತುಮಕೂರು
ಆರ್.ಎಸ್.ಅಯ್ಯರ್
ತುಮಕೂರು ಜಿಲ್ಲೆಯಲ್ಲಿ 2018 ರ ಜನವರಿ 1 ರಿಂದ ಡಿಸೆಂಬರ್ ಅಂತ್ಯದವರೆಗೆ ಸಂಭವಿಸಿರುವ ರಸ್ತೆ ಅಪಘಾತ ಪ್ರಕರಣಗಳ ಸಂಖ್ಯೆ ಹಾಗೂ ಅದರಿಂದುಂಟಾಗಿರುವ ಸಾವು-ನೋವಿನ ವಿವರ ಕಳವಳ ಉಂಟು ಮಾಡುವಂತಿದೆ. ಆ ಒಂದು ವರ್ಷದಲ್ಲಿ ಒಟ್ಟು 2265 ರಸ್ತೆ ಅಪಘಾತ ಪ್ರಕರಣಗಳು ಪೊಲೀಸ್ ಇಲಾಖೆಯಲ್ಲಿ ದಾಖಲಾಗಿದ್ದು, ಒಟ್ಟು 766 ಜನರು ತಮ್ಮ ಅಮೂಲ್ಯವಾದ ಜೀವವನ್ನು ಕಳೆದುಕೊಂಡಿದ್ದಾರೆ. 939 ಜನರಿಗೆ ತೀವ್ರ ಸ್ವರೂಪದ ಗಾಯಗಳಾಗಿವೆ. 1466 ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಸದರಿ 2265 ರಸ್ತೆ ಅಪಘಾತ ಪ್ರಕರಣಗಳ ಪೈಕಿ 687 ಪ್ರಕರಣಗಳಲ್ಲಿ ಸಾವು ಸಂಭವಿಸಿದ್ದು, ಒಟ್ಟು 766 ಜನರು ಅಮೂಲ್ಯವಾದ ಜೀವವನ್ನು ಕಳೆದುಕೊಂಡಿದ್ದಾರೆ. 901 ಪ್ರಕರಣಗಳಲ್ಲಿ 939 ಜನರು ತೀವ್ರ ಸ್ವರೂಪದ ಗಾಯಗಳಿಗೀಡಾಗಿದ್ದಾರೆ. 398 ಪ್ರಕರಣಗಳಲ್ಲಿ 1466 ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಇತರೆ 279 ಅಪಘಾತ ಪ್ರಕರಣಗಳು ದಾಖಲಾಗಿದ್ದು, ಅವುಗಳಲ್ಲಿ ಜನರಿಗೆ ಯಾವುದೇ ಗಾಯಗಳುಂಟಾಗಿಲ್ಲ ಎಂಬುದು ಜಿಲ್ಲಾ ಪೊಲೀಸ್ ಇಲಾಖೆಯ ಅಂಕಿ ಅಂಶಗಳಲ್ಲಿ ವ್ಯಕ್ತವಾಗಿರುವ ಮಾಹಿತಿ.
ಅಪಘಾತ ಪ್ರಕರಣಗಳು
ತುಮಕೂರು, ಕೊರಟಗೆರೆ, ಮಧುಗಿರಿ, ಪಾವಗಡ, ಶಿರಾ, ಚಿಕ್ಕನಾಯಕನಹಳ್ಳಿ, ತಿಪಟೂರು, ತುರುವೇಕೆರೆ, ಗುಬ್ಬಿ, ಕುಣಿಗಲ್-ಹೀಗೆ ಒಟ್ಟು 10 ತಾಲ್ಲೂಕುಗಳನ್ನು ಒಳಗೊಂಡಿರುವ ತುಮಕೂರು ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಗಳು, ರಾಜ್ಯ ಹೆದ್ದಾರಿಗಳು, ಜಿಲ್ಲಾ ಹೆದ್ದಾರಿಗಳು, ಗ್ರಾಮೀಣ ರಸ್ತೆಗಳಿವೆ. ಇವೆಲ್ಲವನ್ನೂ ಒಳಗೊಂಡಂತೆ ಜಿಲ್ಲೆಯ ವಿವಿಧ ರಸ್ತೆಗಳಲ್ಲಿ 2018 ರ ಜನವರಿ-214, ಫೆಬ್ರುವರಿ-186, ಮಾರ್ಚ್-194, ಏಪ್ರಿಲ್-176, ಮೇ-182, ಜೂನ್-182, ಜುಲೈ-165, ಆಗಸ್ಟ್-177, ಸೆಪ್ಟೆಂಬರ್-197, ಅಕ್ಟೋಬರ್- 172, ನವೆಂಬರ್-215, ಡಿಸೆಂಬರ್-205 ಈ ರೀತಿ ಒಟ್ಟು 2265 ಅಪಘಾತ ಪ್ರಕರಣಗಳು ದಾಖಲುಗೊಂಡಿವೆ.
ಸಾವು-ನೋವಿನ ವಿವರ
ಇದೇ ಒಂದು ವರ್ಷದ ಅವಧಿಯಲ್ಲಿ ಸಂಭವಿಸಿರುವ ಅಪಘಾತಗಳಿಂದ ಉಂಟಾದ ಸಾವಿನ ಸಂಖ್ಯೆಯ ವಿವರ ಮಾಹೆಯಾನ ಈ ರೀತಿ ಇದೆ. (ತೀವ್ರವಾಗಿ ಗಾಯಗೊಂಡವರ ಹಾಗೂ ಸಾಧಾರಣ ಗಾಯಗೊಂಡವರ ಸಂಖ್ಯೆಯನ್ನು ಆವರಣದಲ್ಲಿ ನೀಡಲಾಗಿದೆ.)
ಜನವರಿ-80 ಸಾವು (ತೀವ್ರ ಗಾಯ-90, ಸಾಧಾರಣ ಗಾಯ-144), ಫೆಬ್ರುವರಿ- 56 ಸಾವು (ತೀವ್ರ ಗಾಯ-80, ಸಾಧಾರಣ ಗಾಯ-82), ಮಾರ್ಚ್-63 ಸಾವು (ತೀವ್ರ ಗಾಯ- 93, ಸಾಧಾರಣ ಗಾಯ- 114), ಏಪ್ರಿಲ್-65 ಸಾವು (ತೀವ್ರ ಗಾಯ-79, ಸಾಧಾರಣ ಗಾಯ-106), ಮೇ-59 ಸಾವು (ತೀವ್ರ ಗಾಯ-85, ಸಾಧಾರಣ ಗಾಯ- 103), ಜೂನ್- 51 ಸಾವು (ತೀವ್ರ ಗಾಯ- 83, ಸಾಧಾರಣ ಗಾಯ- 132), ಜುಲೈ- 74 ಸಾವು (ತೀವ್ರ ಗಾಯ- 64, ಸಾಧಾರಣ ಗಾಯ- 118), ಆಗಸ್ಟ್- 52 ಸಾವು (ತೀವ್ರ ಗಾಯ- 63, ಸಾಧಾರಣ ಗಾಯ- 137), ಸೆಪ್ಟೆಂಬರ್-70 ಸಾವು (ತೀವ್ರ ಗಾಯ- 69, ಸಾಧಾರಣ ಗಾಯ-174), ಅಕ್ಟೋಬರ್- 55 ಸಾವು (ತೀವ್ರ ಗಾಯ-58, ಸಾಧಾರಣ ಗಾಯ-153), ನವೆಂಬರ್-68 ಸಾವು (ತೀವ್ರ ಗಾಯ- 68, ಸಾಧಾರಣ ಗಾಯ- 163), ಡಿಸೆಂಬರ್-73 ಸಾವು (ತೀವ್ರ ಗಾಯ- 107, ಸಾಧಾರಣ ಗಾಯ- 40).
ವರ್ಷದಲ್ಲಿ 1.62 ಲಕ್ಷ ಕೇಸು, 2.94 ಕೋಟಿ ದಂಡ ಸಂಗ್ರಹ
2018 ರ ಜನವರಿಯಿಂದ ಡಿಸೆಂಬರ್ ಅಂತ್ಯದವರೆಗೆ ಒಂದು ವರ್ಷದ ಅವಧಿಯಲ್ಲಿ ತುಮಕೂರು ಜಿಲ್ಲೆಯಲ್ಲಿ ಮೋಟಾರು ವಾಹನ ಕಾಯ್ದೆ (ಐಎಂವಿ) ಉಲ್ಲಂಘನೆಗಾಗಿ ಪೊಲೀಸರು ಒಟ್ಟು 1,62,164 ಮೊಕದ್ದಮೆಗಳನ್ನು ದಾಖಲಿಸಿದ್ದು, ಒಟ್ಟು 2 ಕೋಟಿ 94 ಲಕ್ಷ 34 ಸಾವಿರ ರೂ. ದಂಡವನ್ನು ಸಂಗ್ರಹಿಸಿದ್ದಾರೆ.
ಪಾನಮತ್ತರಾಗಿ ವಾಹನ ಚಾಲನೆ, ಅತಿವೇಗದ ಚಾಲನೆ, ಯದ್ವಾತದ್ವಾ ವಾಹನ ನಿಲುಗಡೆ, ಮೊಬೈಲ್‍ನಲ್ಲಿ ಮಾತನಾಡುತ್ತ ವಾಹನ ಚಾಲನೆ, ಹೆಲ್ಮೆಟ್ ಇಲ್ಲದೆ ವಾಹನ ಸವಾರಿ ಮೊದಲಾದ 22 ರೀತಿಯ ಕಾನೂನು ಉಲ್ಲಂಘನೆಗಾಗಿ ಪೊಲೀಸರು ಮೊಕದ್ದಮೆ ದಾಖಲಿಸಿ ದಂಡವನ್ನು ಸಂಗ್ರಹಿಸಿದ್ದಾರೆ.
2018 ರ ಜನವರಿಯಲ್ಲಿ 11,366 ಮೊಕದ್ದಮೆಗಳು, 20,87,200 ರೂ. ದಂಡ ಸಂಗ್ರಹ; ಫೆಬ್ರವರಿಯಲ್ಲಿ 12,076 ಮೊಕದ್ದಮೆಗಳು, 19,74,400 ರೂ. ದಂಡ ಸಂಗ್ರಹ; ಮಾರ್ಚಿ ತಿಂಗಳಿನಲ್ಲಿ 12,134 ಮೊಕದ್ದಮೆಗಳು, 21,29,900 ರೂ. ದಂಡ ಸಂಗ್ರಹ; ಏಪ್ರಿಲ್‍ನಲ್ಲಿ 12,399 ಮೊಕದ್ದಮೆಗಳು, 24,31,200 ರೂ. ದಂಡ ಸಂಗ್ರಹ; ಮೇ ತಿಂಗಳಿನಲ್ಲಿ 10,631 ಮೊಕದ್ದಮೆಗಳು, 18,00,300 ರೂ. ದಂಡ ಸಂಗ್ರಹ; ಜೂನ್‍ನಲ್ಲಿ 14,752 ಮೊಕದ್ದಮೆಗಳು, 23,50,650 ರೂ. ದಂಡ ಸಂಗ್ರಹ; ಜುಲೈನಲ್ಲಿ 18,116 ಮೊಕದ್ದಮೆಗಳು, 35,76,400 ರೂ. ದಂಡ ಸಂಗ್ರಹ; ಆಗಸ್ಟ್‍ನಲ್ಲಿ 16,632 ಮೊಕದ್ದಮೆಗಳು, 30,41,550 ರೂ. ದಂಡ ಸಂಗ್ರಹ; ಸೆಪ್ಟೆಂಬರ್‍ನಲ್ಲಿ 12,742 ಮೊಕದ್ದಮೆಗಳು, 23,01,300 ರೂ. ದಂಡ ಸಂಗ್ರಹ; ಅಕ್ಟೋಬರ್‍ನಲ್ಲಿ 15,409 ಮೊಕದ್ದಮೆಗಳು, 31,28,600 ರೂ. ದಂಡ ಸಂಗ್ರಹ; ನವೆಂಬರ್‍ನಲ್ಲಿ 13,935 ಮೊಕದ್ದಮೆಗಳು, 24,48,400 ರೂ. ದಂಡ ಸಂಗ್ರಹ; ಡಿಸೆಂಬರ್‍ನಲ್ಲಿ 11,972 ಮೊಕದ್ದಮೆಗಳು, 21,64,100 ರೂ. ದಂಡ ಸಂಗ್ರಹ ಮಾಡಲಾಗಿದೆ.
ಹೆಲ್ಮೆಟ್ ಇಲ್ಲದ ಚಾಲನೆಗಾಗಿ 63 ಲಕ್ಷ ದಂಡ ತೆತ್ತಿರುವ ಜನ
2018 ರ ಒಂದು ವರ್ಷದ ಅವಧಿಯಲ್ಲಿ ಹೆಲ್ಮೆಟ್ ಇಲ್ಲದೆ ವಾಹನ ಸವಾರಿಗಾಗಿ 62,060 ಪ್ರಕರಣಗಳು ದಾಖಲಾಗಿದ್ದು, ಒಟ್ಟು 63,37,100 ರೂ. ದಂಡವನ್ನು ಸಾರ್ವಜನಿಕರು ತೆತ್ತಿದ್ದಾರೆಂಬುದು ಹಾಗೂ ವಾಹನ ಚಾಲನೆ ಪರವಾನಗಿ (ಡಿ.ಎಲ್.) ಇಲ್ಲದೆ ವಾಹನ ಚಾಲನೆ/ಸವಾರಿಗಾಗಿ 20,504 ಪ್ರಕರಣಗಳು ದಾಖಲಾಗಿದ್ದು, ಒಟ್ಟು 67,72,500 ರೂ. ದಂಡ ಸಂಗ್ರಹಗೊಂಡಿದೆಯೆಂಬುದು ಗಮನ ಸೆಳೆಯುತ್ತದೆ.
ವಾಹನ ಚಾಲನೆ ಮಾಡುವಾಗ ಮೊಬೈಲ್ ಫೋನ್ ಬಳಸಿದ ಕಾರಣಕ್ಕೆ 1,762 ಪ್ರಕರಣಗಳು ದಾಖಲುಗೊಂಡಿದ್ದು, 2,13,200 ರೂ. ದಂಡ ಸಂಗ್ರಹವಾಗಿದೆ. ವಾಹನ ಚಾಲನೆ ಸಂದರ್ಭ ಚಾಲಕನು ಸೀಟ್ ಬೆಲ್ಟ್ ಧರಿಸದಿರುವ 5,508 ಪ್ರಕರಣಗಳು ದಾಖಲಾಗಿದ್ದು, 5,71,300 ರೂ. ದಂಡ ಸಂಗ್ರಹಗೊಂಡಿದೆ. ಪಾನಮತ್ತರಾಗಿ ವಾಹನ ಚಾಲನೆ/ಸವಾರಿ ಮಾಡಿರುವ 1,866 ಮೊಕದ್ದಮೆಗಳು ದಾಖಲಾಗಿದ್ದು, 26,46,700 ರೂ. ದಂಡ ಸಂಗ್ರಹವಾಗಿದೆ. ಅತಿವೇಗದ ಚಾಲನೆಯ (ಓವರ್ ಸ್ಪೀಡ್) 4116 ಮೊಕದ್ದಮೆಗಳು ದಾಖಲುಗೊಂಡಿದ್ದು, 12,59,800 ರೂ. ದಂಡ ಸಂಗ್ರಹವಾಗಿದೆ. ನಿರ್ಲಕ್ಷೃದಿಂದ ವಾಹನ ಚಾಲನೆ ಮಾಡಿರುವ 1,111 ಪ್ರಕರಣಗಳು ದಾಖಲಾಗಿದ್ದು, 4,13,000 ರೂ. ದಂಡ ಸಂಗ್ರಹವಾಗಿದೆ.
ಮಿಕ್ಕಂತೆ ಇತರೆ ಸಂಚಾರ ನಿಯಮಗಳ ಉಲ್ಲಂಘನೆಗಾಗಿ 52,412 ಪ್ರಕರಣಗಳು ದಾಖಲಾಗಿದ್ದು, ಅವುಗಳಿಂದ ಒಟ್ಟು 95,65,400 ರೂ. ದಂಡವನ್ನು ಸಂಗ್ರಹಿಸಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ