ಬೆಂಗಳೂರು
ಕಳೆದ ಎರಡು ವರ್ಷಗಳಿಂದ ರಾಜಧಾನಿ ಬೆಂಗಳೂರಿನಲ್ಲಿ 3.5 ಲಕ್ಷ ಮಂದಿ ಗುರುತಿಸಲಾರದ ಜ್ವರದಿಂದ ಬಳಲುತ್ತಿರುವುದು ಬಿಬಿಎಂಪಿ ನಡೆಸಿರುವ ಸಮೀಕ್ಷೆಯಿಂದ ಬಹಿರಂಗಗೊಂಡಿದ್ದು ಆತಂಕಕ್ಕೆ ಕಾರಣವಾಗಿದೆ
ಜ್ವರದಿಂದ ಬಳಲುತ್ತಿರುವ ರೋಗಿಗಳ ದೇಹದ ತಾಪಮಾನ 101 ಡಿಗ್ರಿಯಷ್ಟಿದ್ದು, ಮೂರು ವಾರಗಳವರೆಗೂ ಈ ಜ್ವರ ರೋಗಿಗಳನ್ನು ಎಡಬಿಡದೆ ಕಾಡಲಿದೆ. ಆದರೆ, ಈ ರೋಗಕ್ಕೆ ಕಾರಣವಾಗುವ ಅಂಶಗಳೇನು ಎನ್ನುವುದನ್ನು ಇದುವರೆಗೂ ದೃಢಪಡಿಸಲು ಸಾಧ್ಯವಾಗಿಲ್ಲದಿರುವುದರಿಂದ ನಾಗರೀಕರ ಆತಂಕ ಹೆಚ್ಚುವಂತೆ ಮಾಡಿದೆ.
2017ರಲ್ಲಿ ಬೆಂಗಳೂರಿನಲ್ಲಿ 1,57,881 ಜನ ಈ ಜ್ವರ ಕಾಣಿಸಿಕೊಂಡಿದೆ. 2018ರಲ್ಲಿ 1,42,860, 2019ರಲ್ಲಿ 50,062 ಜನ ಸೇರಿದಂತೆ ಒಟ್ಟು 3 ವರ್ಷಗಳಲ್ಲಿ 3.5 ಲಕ್ಷಕ್ಕೂ ಅಧಿಕ ಜನ ಈ ಜ್ವರದಿಂದ ಬಳಲುತ್ತಿದ್ದಾರೆ.ಈ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಆಸ್ಪತ್ರೆಗಳಲ್ಲಿ ಬಿಬಿಎಂಪಿ ಸಮೀಕ್ಷೆ ನಡೆಸಿ, 450 ಆಸ್ಪತ್ರೆಗಳಿಂದ ಮಾಹಿತಿ ಸಂಗ್ರಹಿಸಿದೆ. 85 ಪ್ರಾಥಮಿಕ ಚಿಕಿತ್ಸಾ ಕೇಂದ್ರ ಹಾಗೂ 30 ಹೆರಿಗೆ ಆಸ್ಪತ್ರೆಗಳನ್ನು ಸಮೀಕ್ಷೆ ನಡೆಸಲಾಗಿದೆ.
ಟೈಫಾಯಿಡ್, ಕಾಲರಾ, ಡೆಂಗೆ ಹಾಗೂ ಇತರ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈ ಜ್ವರ ವೈದ್ಯಕೀಯ ಲೋಕಕ್ಕೆ ಸವಾಲಾಗಿದ್ದು, ಈ ಜ್ವರ ನಿಧಾನವಾಗಿ ಕ್ಷಯರೋಗವೂ ಬರಬಹುದೆಂದು ತಿಳಿದು ಬಂದಿದೆ. ವಾರಗಳ ಕಾಲ ರೋಗಿಯನ್ನು ಆಸ್ಪತ್ರೆಯಲ್ಲೇ ನಿಗಾದಲ್ಲಿರಿಸಿ ಪರೀಕ್ಷೆಗಳನ್ನು ನಡೆಸಿದರೆ ಈ ಜ್ವರದ ಮೂಲ ಪತ್ತೆ ಹಚ್ಚಬಹುದೆಂದು ವೈದ್ಯರು ತಿಳಿಸಿದ್ದಾರೆ.