ನೋಟು ಅಮಾನ್ಯೀಕರಣ ಸಂಧರ್ಭದ : 3 ಲಕ್ಷ ಕೋಟಿ ರೂಪಾಯಿ ವಿನಿಮಯ: ಹೆಚ್ ಕೆ ಪಾಟೀಲ

ಬೆಂಗಳೂರು

        ನೋಟು ಅಮಾನ್ಯೀಕರಣ ಸಂಧರ್ಭದಲ್ಲಿ ವಿದೇಶದಲ್ಲಿ 1 ಲಕ್ಷ ಕೋಟಿ ರೂಪಾಯಿಗಳ ಮೂರು ಸರಣಿ ನೋಟುಗಳ ಮುದ್ರಣ ಮಾಡಿ, ಶ್ರೀಮಂತರು ತಮ್ಮ ಬಳಿಯಿದ್ದ ಅಕ್ರಮ ಹಣವನ್ನು ಕಾನೂನು ಬದ್ದವಾಗಿ ಸಕ್ರಮ ಮಾಡಿಕೊಳ್ಳಲು ನೀಡಿದ ದುರ್ವವ್ಯವಹಾರ ನಡೆದಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಹೆಚ್ ಕೆ ಪಾಟೀಲ್ ಆರೋಪಿಸಿದ್ದಾರೆ.

         ನಗರದ ಖಾಸಗಿ ಹೋಟೇಲನಲ್ಲಿಂದು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಅಮಿತ್ ಶಾ ಕೇಂದ್ರ ಸರಕಾರದ ಅಧಿಕಾರಿಗಳನ್ನು ಬಳಸಿಕೊಂಡು ನಡೆಸಿದ್ದಾರೆ ಎನ್ನಲಾದ ಹಗರಣದ ಬಗ್ಗೆ ದಾಖಲಾತಿಗಳನ್ನು ಬಿಡುಗಡೆಗೊಳಿಸಿದರು.

        10 ವರ್ಷಗಳ ಕಾಲ ದೇಶದ ಪ್ರಧಾನಿಯಾಗಿ ಆಡಳಿತ ನಡೆಸಿದ ಖ್ಯಾತ ಆರ್ಥಿಕ ತಜ್ಞರಾದ ಮನಮೋಹನ ಸಿಂಗ್ ಅವರು ದೇಶದ ಆರ್ಥಿಕ ವ್ಯವಸ್ಥೆಯನ್ನು ಬಲಗೊಳಿಸುವ ಎಲ್ಲಾ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು. ಅಮೇರಿಕಾ ಆರ್ಥಿಕ ವ್ಯವಸ್ಥೆ ಬುಡಮೇಲು ಆಗುವ ಸಂಧರ್ಭದಲ್ಲಿ ಅದನ್ನು ಉಳಿಸಲು ಸಲಹೆ ನೀಡಿದ್ದು ಮನಮೋಹನ ಸಿಂಗ್ ಎಂದು ಅಮೇರಿಕಾ ಅಧ್ಯಕ್ಷ ಬರಾಕ್ ಒಬಾಮಾ ಶ್ಲಾಘಿಸಿದ್ದರು. ಆದರೆ ಕಳೆದ 5 ವರ್ಷಗಳಲ್ಲಿ ನಮ್ಮ ದೇಶದ ಅರ್ಥಿಕ ವ್ಯವಸ್ಥೆ ಅರಾಜಕತೆಯತ್ತ ಸಾಗುವಂತೆ ಮಾಡಿರುವುದು ಪ್ರಧಾನಿ ಮೋದಿ ಅವರ ಮಹತ್ ಸಾಧನೆ ಎಂದು ಹೆಚ್ ಕೆ ಪಾಟೀಲ್ ವಿಷಾಧ ವ್ಯಕ್ತಪಡಿಸಿದರು.

ಮನಮೋಹನ ಸಿಂಗ್ ಅವರ ಅಧಿಕಾರಾವಧಿಯಲ್ಲಿ ದೇಶದಲ್ಲಿ ಇದ್ದ ಉದ್ಯೋಗದ ಸಂಖ್ಯೆ 40.79 ಕೋಟಿ. ಕಳೆದ 5 ವರ್ಷಗಳಲ್ಲಿ ಇದರ ಪ್ರಮಾಣ 39.9 ಕ್ಕೆ ಇಳಿದಿದೆ. ಈ ಅಂಕಿ ಸಂಖ್ಯೆಗಳನ್ನು ಗಮನಿಸಿದಲ್ಲಿ ದೇಶದಲ್ಲಿ ಉದ್ಯೋಗ ಪ್ರಮಾಣ1.90 ಕೋಟಿಗಳಷ್ಟು ಇಳಿಮುಖ ವಾಗಿರುವುದನ್ನು ಕಾಣಬಹುದಾಗಿದೆ. ಪ್ರತಿವರ್ಷ 2 ಕೋಟಿ ಉದ್ಯೋಗ ನಿರ್ಮಾಣ ಮಾಡುವುದಾಗಿ ಭರವಸೆ ನೀಡಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಪ್ರಧಾನಿ ಮೋದಿ ಅವರ ಭರವಸೆ ಈಡೇರಿಸುವುದು ಇದೆಯೇ ಎಂದು ಪ್ರಶ್ನಿಸಿದರು.

ಈ ಮೇಲಿನ ಅಂಕಿ ಸಂಖ್ಯೆಗಳು ಯಾವುದೋ ಖಾಸಗಿ ಸಂಸ್ಥೆಗಳ ನೀಡಿರುವುದಲ್ಲ. ಕೇಂದ್ರ ಸರಕಾರದ ಅಧೀನದಲ್ಲಿರುವ ಇಲಾಖೆಗಳೇ ಇವುಗಳನ್ನು ಬಹಿರಂಗಪಡಿಸಿವೆ. ಇವುಗಳ ಬಗ್ಗೆ ಚಕಾರವನ್ನು ಎತ್ತದೇ ಇರುವ ಮೋದಿ, ಇಲಾಖೆಗಳು ಸಂಶೋದನೆ ನಡೆಸುವ ಪ್ಯಾರಾ ಮೀಟರ್‍ಗಳನ್ನೇ ಬದಲಾಯಿಸುವ ಮಟ್ಟಕ್ಕೂ ಇಳಿದಿರುವುದು ದುರಾದೃಷ್ಟಕರ ಎಂದರು.

ನೋಟು ಅಮಾನ್ಯೀಕರಣದಿಂದ ದೇಶಧ ಆರ್ಥಿಕ ವ್ಯವಸ್ಥೆಯ ಮೇಲೆ ಆಗುತ್ತಿರುವ ನಕಾರಾತ್ಮಕ ಪರಿಣಾಮಗಳ ಬಗ್ಗೆ ಇತ್ತೀಚಿನ ದಿನಗಳಲ್ಲಿ ನಾವು ವರದಿಗಳನ್ನು ನೋಡುತ್ತಿದ್ದೇವೆ. ಗರಿಷ್ಠ ಮುಖಬೆಲೆಯ ನೋಟು ಅಮಾನ್ಯೀಕರಣ ಸ್ವತಂತ್ರ ಭಾರತದ ಅತಿದೊಡ್ಡ ಹಗರಣವಾಗಿದೆ. 500 ಮತ್ತು 1000 ರೂಪಾಯಿ ಮುಖಬೆಲೆಯ ನೋಟು ನಿಷೇಧದ ಹೆಸರಿನಲ್ಲಿ ದೇಶಧ ಅರ್ಥವ್ಯವಸ್ಥೆಯನ್ನು ಬುಡಮೇಲುಗೊಳಿಸುವ ಜೊತೆಗೆ ಆರ್ಥಿಕ ಅಪರಾಧೀಕರಣದ ಮೂಲಕ ಬಡವರ ಮೇಲೆ ದಾಳಿ ನಡೆಸಲಾಗಿದೆ. ನೋಟು ನಿಷೇಧವು ಶ್ರೀಮಂತರು ತಮ್ಮ ಬಳಿಯಿದ್ದ ಅಕ್ರಮ ಹಣವನ್ನು ಕಾನೂನುಬದ್ದವಾಗಿ ಸಕ್ರಮ ಮಾಡಿಕೊಳ್ಳಲು ನೀಡಿದ ಅವಕಾಶವಾಯಿತು ಎಂಬಂತೆ ದುವ್ರ್ಯವಹಾರ ನಡೆದಿದೆ ಎಂದರು.

ನೋಟು ನಿಷೇಧ ಪ್ರಕ್ರಿಯೆ ಉದ್ಯಮಪತಿಗಳ ಬಳಿಯಿದ್ದ ಅಕ್ರಮ ಸಂಪತ್ತನ್ನು ಸಕ್ರಮಗೊಳಿಸುವ ವ್ಯವಸ್ಥಿತ ಪ್ರಕರಣ ಒಂದು ಬೆಳಕಿಗೆ ಬಂದಿದೆ. ಈ ಕುಕೃತ್ಯ ಬಿಜೆಪಿ ಕೇಂದ್ರ ಕಚೇರಿಯಲ್ಲೇ ಸಿದ್ದಗೊಂಡಿತು ಎನ್ನುವ ಆಘಾತಕಾರಿಯಾದ ಅಂಶ ಈಗ ಬೆಳಕಿಗೆ ಬಂದಿದೆ. ದೇಶದ ಕೆಲವು ಹೆಸರಾಂತ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಉತ್ಸಾಹಿ, ಕ್ರೀಯಾಶೀಲ ತನಿಖಾ ವರದಿಗಾರರು ನಡೆಸಿದ ಕುಟುಕು ಕಾರ್ಯಾಚರಣೆಯಲ್ಲಿ ಇಡೀ ಕರ್ಮಕಾಂಡ ಅನಾವರಣಗೊಂಡಿದೆ. ಈ ಕರ್ಮಕಾಂಡದ 18 ವಿಡಿಯೋಗಳು ತಿತಿತಿ.ಣಟಿಟಿ.ತಿoಡಿಟಜ ನಲ್ಲಿ ಲಭ್ಯವಿವೆ.

ಮೊದಲ ವಿಡಿಯೋದಲ್ಲಿ ವಿವರಿಸಿರುವಂತೆ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಉಸ್ತುವಾರಿಯಲ್ಲೇ, ಜಯ್ ಶಾ ಪಾಲ್ಗೊಳ್ಳುವಿಕೆಯ ಮೂಲಕ ವಹಿವಾಟು ನಡೆದಿರುವುದು ಸ್ಪಷ್ಟವಾಗಿದೆ. ಇದಕ್ಕಾಗಿ ಕೇಂದ್ರ ಗುಪ್ತಚರ ಸಂಸ್ಥೆ (ಖಂW) ಮೊದಲಾದ ಸಂಸ್ಥೆಗಳನ್ನು ವ್ಯವಸ್ಥಿತವಾಗಿ ದುರ್ಬಳಕೆ ಮಾಡಲಾಯಿತು. ರಾ ಅಧಿಕಾರಿ ರಾಹುಲ್ ರಥೇರ್ಕರ್ ಜೊತೆ ಟಿ ಎನ್ ಎನ್ ವಲ್ರ್ಡ್ ನಡೆಸಿದ ಕುಟುಕು ಕಾರ್ಯಾಚರಣೆಯಲ್ಲಿ ಮೂರು ಲಕ್ಷ ಕೋಟಿ ರೂಪಾಯಿ ನೋಟು ವಿನಿಮಯದ ಕರಾಳ ಚಿತ್ರಣ ಹೊರಬಿದ್ದಿದೆ. ಈ ಸಂಗತಿ ವಿಡಿಯೋದಲ್ಲಿ ದಾಖಲಾಗಿದೆ.

1 ಲಕ್ಷ ಕೋಟಿ ರೂಪಾಯಿಗಳ ಮೂರು ಸರಣೀ ನೋಟುಗಳನ್ನು ವಿದೇಶದಲ್ಲಿ ಮುದ್ರಣ ಮಾಡಲಾಯಿತು. ವಿದೇಶದಲ್ಲಿ ಮುದ್ರಣಗೊಂಡ ಮೂರು ಲಕ್ಷ ಕೋಟಿ ರೂಪಾಯಿಗಳನ್ನು ಮೂರು ಕಂತುಗಳಲ್ಲಿ ವಾಯುಪಡೆಗೆ ಸೇರಿದ ಸರಕು ಸಾಗಣೆ ವಿಮಾನಗಳ ಮೂಲಕ ದೆಹಲಿಯ ಹಿಂಡನ್ ವಾಯುನೆಲೆಗೆ ತರಲಾಯಿತು ಎಂಬ ಸಂಗತಿ ವಿಡಿಯೋದಲ್ಲಿ ಸ್ಪಷ್ಟವಾಗಿದೆ.

ನೋಟುಗಳ ಸಾಗಾಣಿಕೆ ಮತ್ತು ವಿನಿಮಯ ಪ್ರಕ್ರಿಯೆ ಅಮಿತ್ ಶಾ ಉಸ್ತುವಾರಿಯಲ್ಲೇ ನಡೆಯುತ್ತದೆ. ಇದಕ್ಕಾಗಿ ವಿನಿಮಯ ವ್ಯವಹಾರದ ಕಮಿಷನ್ ಶೇ 15 ರಿಂದ 40 ಕ್ಕೆ ಹೆಚ್ಚಳವಾಯಿತು ಎಂದು ವಿಡಿಯೋದಲ್ಲಿನ ವ್ಯಕ್ತಿ ವಿವರಿಸುತ್ತಾರೆ.

ವಿದೇಶದಲ್ಲಿ ಮುದ್ರಿಸಲ್ಪಟ್ಟ ಹಣವನ್ನು ವಾಯುಪಡೆ ವಿಮಾನಗಳ ಮೂಲಕ ಹಿಂಡೇನ್ ವಾಯುನೆಲೆಗೆ ತರಲಾಗುತ್ತದೆ. ಅಲ್ಲಿಂದ ವಿವಿಧ ಇಲಾಖೆಗಳ ಅಧಿಕಾರಿಗಳ ಮೂಲಕ ಮಹರಾಷ್ಟ್ರದ ಗೋದಾಮಿಗೆ ಸಾಗಿಸಲಾಗುತ್ತದೆ ಅಲ್ಲಿಂದ ವಿವಿಧ ಬ್ಯಾಂಕುಗಳಿಗೆ ಹಣ ವರ್ಗಾವಣೆಯಾಗುತ್ತದೆ ಎಂಬ ಸಂಗತಿ ವಿಡಿಯೋದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ.

ಸ್ವತಂತ್ರ ಭಾರತದ ಇತಿಹಾಸದಲ್ಲೇ ಇದು ಅತ್ಯಂತ ದೊಡ್ಡ ಹಗರಣವೆಂದು ಕರೆಯಬೇಕಾಗುತ್ತದೆ. ಆಡಳಿತ ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಕೃಪಾಶೀರ್ವಾದದಿಂದಲೇ ಈ ದುರ್ವವ್ಯಹಾರ ನಡೆದಿರುವುದು ವಿಡಿಯೋದ ಮಾಹಿತಿಯಲ್ಲಿ ಸ್ಪಷ್ಟವಾಗಿದೆ. ಇಂತಹ ದುಷ್ಕøತ್ಯದಮೂಲಕ ದೇಶದ ಆರ್ಥವ್ಯವಸ್ಥೆಯ ಮೇಲೆ ಗಧಾಪ್ರಹಾರ ಮಾಡಲಾಗಿದೆ.

ಕುಟುಕು ಕಾರ್ಯಾಚರಣೆಯ ದೃಶ್ಯಗಳು, ಹಣಕಾಸಿನ ದುವ್ರ್ಯವಹಾರದ ವಿವರಗಳನ್ನು ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿಗಳ ಅವಗಾಹನೆಗೆ ಕಳುಹಿಸಿದ್ದೇವೆ. ಜೊತೆಗೆ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿಗಳ ಸಹೋದ್ಯೋಗಿ ನ್ಯಾಯಮೂರ್ತಿಗಳಿಗೂ ಕಳುಹಿಸಿದ್ದೇವೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಪೂರ್ಣ ಪ್ರಮಾಣದ, ಅತ್ಯಂತ ಉನ್ನತಮಟ್ಟದ ತನಿಖೆ ನಡೆಸಿ, ಸತ್ಯವನ್ನು ಕಂಡುಹಿಡಿದು, ಸೂಕ್ತ ಕ್ರಮ ಜರುಗಿಸಬೇಕೆಂದು ಕೋರಿದ್ದೇವೆ. ಸುಪ್ರೀಂ ಕೋರ್ಟಿನ ಮುಖ್ಯನ್ಯಾಯಮೂರ್ತಿಗಳು ಈ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ಸೂಕ್ತವೆನಿಸುವ ಕ್ರಮಕ್ಕೆ ಆದೇಶಿಸಬೇಕು. ಈ ಹಗರಣವನ್ನು ರಾಷ್ಟ್ರದ ಹಿತಾಸಕ್ತಿಯ ವಿಶೇಷ ಪ್ರಕರಣವೆಂದು ಪರಿಗಣಿಸಿ ಅಗತ್ಯವೆನ್ನಿಸುವ ಕ್ರಮಕೈಗೊಳ್ಳಬೇಕೆಂದು ಮನವಿ ಮಾಡಿದ್ದೇವೆ ಎಂದು ಹೆಚ್ ಕೆ ಪಾಟೀಲ್ ತಿಳಿಸಿದರು.

ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಹಲವು ಆತಂಕಗಳು ನಮ್ಮನ್ನು ಕಾಡುತ್ತಿವೆ. ನ್ಯಾಯಮೂರ್ತಿ ಲೋಯಾ ಪ್ರಕರಣದಲ್ಲಿ ಸಂಭವಿಸಿದ ಸಾವು ಮತ್ತು ಮಧ್ಯಪ್ರದೇಶದ ವ್ಯಾಪಂ ಹಗರಣದ ಸಾಕ್ಷಿಗಳಿಗೆ ಬಂದೊದಗಿದ ಗತಿಯೇ ಈ ಕುಟುಕು ಕಾರ್ಯಾಚರಣೆಯಲ್ಲಿರುವ ವ್ಯಕ್ತಿಗಳಿಗೆ ಬರಬಹುದೆಂಬ ಭಯ ಉಂಟಾಗಿದೆ.

ಆದ್ದರಿಂದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಹಗರಣದ ಯಾವುದೇ ದಾಖಲೆ ನಾಶವಾಗದಂತೆ ನ್ಯಾಯಾಲಯದ ನಿಗಾದಲ್ಲಿ ಅತ್ಯನ್ನತ ಮಟ್ಟದ ತನಿಖೆಗಾಗಿ ಆದೇಶಿಸುವಂತೆ ಪ್ರಾರ್ಥಿಸಿದ್ದೇನೆ. ಕಾರ್ಯಾಚರಣೆಯಲ್ಲಿ ಕಾಣಿಸಿಕೊಂಡಿರುವ ವ್ಯಕ್ತಿಗಳೀಗೆ ಯಾವುದೇ ಹಾನಿಯಾಗದಂತೆ ಅತ್ಯನ್ನತ ಭದ್ರತೆ ಒದಗಿಸಲು ಆದೇಶ ನೀಡಬೇಕು. ಈ ಹಗರಣದ ಬಗ್ಗೆ ಸರ್ವೋಚ್ಚ ನ್ಯಾಯಾಲದ ಮೇಲುಸ್ತುವಾರಿಯಲ್ಲಿ ಕಾನೂನು ಪ್ರಕ್ರಿಯೆಯ ಮೂಲಕ ತ್ವರಿತ ಹಾಗೂ ಉನ್ನತ ಮಟ್ಟದ ಪಾರದರ್ಶಕ ತನಿಖೆಗೆ ಆದೇಶಿಸಬೇಕು ಎಂದು ಪ್ರಾರ್ಥಿಸಿದ್ದೇನೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ವಿ ಆರ್ ಸುದರ್ಶನ್, ಜೆ ನಂಜಯ್ಯಮಠ್ ಭಾಗವಹಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap