ಮಧುಗಿರಿ:
ಅಪ್ರಾಪ್ತರು ವಾಹನಗಳನ್ನು ಚಲಾಯಿಸುವಂತಿಲ್ಲ ಅಂತಹ ಪೋಷಕರ ವಿರುದ್ಧ ಕಾನೂನು ರೀತಿಯಲ್ಲಿಯೇ ಕ್ರಮ ಕೈಗೊಳ್ಳಲಾಗುವುದೆಂದು ಮೋಟರ್ ವಾಹನ ನೀರೀಕ್ಷ ಎಂ ಹೆಚ್ ರಘು ತಿಳಿಸಿದರು.
ಪಟ್ಟಣದ ತುಮಕೂರು ರಸ್ತೆಯ ಸಮೀಪವಿರುವ ಕಾರ್ಡಿಯಲ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಗುರುವಾರ ಆಯೋಜಿಸಿದ್ದ 30ನೇ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಅಪ್ರಾಪ್ತರು ವಾಹನಗಳನ್ನು ಚಲಾಯಿಸುವುದು ತಪ್ಪಾಗಿದ್ದು ವಾಹನಗಳ ಚಲಾವಣೆಗೆ ಪ್ರೋತ್ಸಾಹ ನೀಡುವಂತಹ ಪೋಷಕರಿಗೆ ಮತ್ತು ವಾಹನದ ವಾರಸುದಾರರಿಗೆ ಕಾನೂನು ರೀತಿಯಲ್ಲಿ ಕ್ರಮಕೈಗೊಳ್ಳಲಾಗುವುದು. ವಿದ್ಯಾರ್ಥಿಗಳು ರಸ್ತೆ ಬದಿಯಲ್ಲಿ ಆಳವಡಿಸಿರುವ ಚಿಹ್ನೆಗಳ ಬಗ್ಗೆ ಮೊದಲು ತಿಳಿದು ಕೊಳ್ಳಬೇಕು ಹಾಗೂ ಶಿಸ್ತು ಬದ್ಧ ರಸ್ತೆ ನಿಯಮಗಳ ಎಲ್ಲಾರೂ ಪಾಲಿಸ ಬೇಕು ಎಂದರು.
ಇಲಾಖೆಯ ಗಂಗಾಧರ್ ಮಾತನಾಡಿ ಶಾಲೆಯ ಮಕ್ಕಳಿಗೆ ರಸ್ತೆ ನಿಯಮಗಳ ಹಾಗೂ ಚಿಹ್ನೆಗಳ ಬಗ್ಗೆ ಮಾಹಿತಿ ಒದಗಿಸಿಕೊಟ್ಟರು.
ಖಾಸಗಿ ಬಸ್ ಮಾಲೀಕರ ಸಂಘಧ ಕಾರ್ಯದರ್ಶಿ ಎಂ.ಜಿ. ಮಂಜುನಾಥ್, ಶಾಲೆಯ ಪ್ರಾಂಶುಪಾಲ ಪಿ.ಎಸ್. ವಿನೋದ್ ಕುಮಾರ್ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎನ್.ಶಿವದಾಸ್ ಹಾಗೂ ಭೋಧಕ ಭೋಧಕೇತರ ಸಿಬ್ಬಂದಿವರ್ಗದವರು ಹಾಗೂ ವಿದ್ಯಾರ್ಥಿಗಳು ಇದ್ದರು.