ತುಮಕೂರು : ಜಿಲ್ಲೆಯಲ್ಲಿ 31 ಪಾಸಿಟಿವ್ ಪ್ರಕರಣ ಪತ್ತೆ..!

ತುಮಕೂರು

      ಜಿಲ್ಲೆಯಲ್ಲಿ ಕೊರೊನಾ ಸೋಂಕಿ ಆರ್ಭಟ ಮುಂದುವರೆದಿದೆ. ಭಾನುವಾರ ಮತ್ತೆ 31 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಕೊರೊನಾ ಪಾಸಿಟೀವ್ ದೃಢಪಟ್ಟವರ ಸಂಖ್ಯೆ 252ಕ್ಕೆ ಏರಿದೆ.ತುಮಕೂರು ತಾಲ್ಲೂಕಿನಲ್ಲಿ 12, ಪಾವಗಡ ತಾಲ್ಲೂಕಿನಲ್ಲಿ 5, ಕುಣಿಗಲ್ ತಾಲ್ಲೂಕಿನಲ್ಲಿ 5, ಗುಬ್ಬಿ ತಾಲ್ಲೂಕಿನಲ್ಲಿ 4, ಮಧುಗಿರಿ ತಾಲ್ಲೂಕಿನಲ್ಲಿ 3, ಹಾಗೂ ಚಿಕ್ಕನಾಯಕನಹಳ್ಳಿ ಮತ್ತು ತುರುವೇಕೆರೆ ತಾಲ್ಲೂಕಿನಲ್ಲಿ ತಲಾ ಒಂದು ಪಾಸಿಟೀವ್ ಪ್ರಕರಣ ವರದಿಯಾಗಿವ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗೇಂದ್ರಪ್ಪ ತಿಳಿಸಿದ್ದಾರೆ.

     183 ಜನರಲ್ಲಿ ಸೋಂಕು ಸಕ್ರಿಯವಾಗಿದೆ, ಚಿಕಿತ್ಸೆ ಪಡೆಯುತ್ತಿದ್ದ 60 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದ ಇದೂವರೆಗೆ 8 ಜನ ಮೃತಪಟ್ಟಿದ್ದಾರೆ. ಎಂದು ಹೇಳಿದ್ದಾರೆ.ಈವರೆಗೆ ಜಿಲ್ಲೆಯಲ್ಲಿ ಒಟ್ಟು 252 ಸೋಂಕು ಪ್ರಕರಣ ವರದಿಯಾಗಿದ್ದು, ತುಮಕೂರು ತಾಲ್ಲೂಕಿನಲ್ಲಿ ಅತಿಹೆಚ್ಚು ಪ್ರಕರಣಗಳಿವೆ, ಇದೂವರೆಗೆ ತುಮಕೂರು ತಾ. 66, ಪಾವಗಡ ತಾ. 31, ಮಧುಗಿರಿ ತಾ. 30, ಶಿರಾ ತಾ. 27, ಗುಬ್ಬಿ ತಾ. 24. ಕೊರಟಗೆರೆ ತಾ.24, ಕುಣಿಗಲ್ ತಾ. 22, ತಿಪಟೂರು ತಾ. 11, ಚಿಕ್ಕನಾಯಕನಹಳ್ಳಿ ತಾ. 10, ತುರುವೇಕೆರೆ ತಾ. 7 ಪ್ರಕರಣ ವರದಿಯಾಗಿವೆ.

ತುಮಕೂರು

ತುಮಕೂರು ನಗರದ ಸದಾಶಿವನಗರ ರಿಂಗ್ ರಸ್ತೆಯ 38 ವರ್ಷದ ಪುರುಷ, ಮರಳೂರು ದಿಣ್ಣೆಯ 50 ವರ್ಷದ ಹೆಂಗಸು, ಸರಸ್ವತಿ ಪುರಂನ 7 ವರ್ಷದ ಬಾಲಕಿ, ಬಟವಾಡಿಯ ಮಂಜುನಾಥನಗರದ 49 ವರ್ಷದ ಪುರುಷ, ಸರಸ್ವತಿಪುರಂನ 50 ವರ್ಷದ ಮಹಿಳೆ, ಮಾರುತಿ ನಗರದ 47 ವರ್ಷದ ಗಂಡಸಿಗೆ ಸೋಂಕು ಖಚಿತವಾಗಿದೆ.

ಪಾವಗಡ

ಪಾವಗಡ ತಾಲ್ಲೂಕಿನ ನ್ಯಾಯದಕುಂಟೆಯ 49 ವರ್ಷದ ಗಂಡಸು, ಪಾವಗಡದ ರೈನ್‍ಗೇಜ್ ಪ್ರದೇಶದ 23 ವರ್ಷದ ಗಂಡಸು, ವಿನಾಯಕ ನಗರದ 32 ವರ್ಷದ ಗಂಡಸಿಗೆ ಕೊರೊನಾ ದೃಢಪಟ್ಟಿದೆ.

ಕುಣಿಗಲ್

ಕುಣಿಗಲ್‍ನ ಮಹಾವೀರನಗರದ 24 ವರ್ಷದ ಯುವತಿ, ಸಿದ್ಧಾರ್ಥನಗರದ 48 ವರ್ಷದ ಮಹಿಳೆಗೆ ಪಾಸಿಟೀವ್ ವರದಿ ಬಂದಿದೆ.

ಮಧುಗಿರಿ

ಮಧುಗಿರಿ ಪಟ್ಟಣದ ವಿದ್ಯಾನಗರದ 35 ವರ್ಷದ ಗಂಡಸು, ತಾಲ್ಲೂಕಿನ ಸಿದ್ದಾಪುರದ 39 ವರ್ಷದ ಪುರುಷರಿಗೆ ಕೊರೊನಾ ಸೋಂಕು ಕಾಣಿಸಿದೆ.ಮಧುಮೇಹ, ಅಧಿಕ ರಕ್ತದ ಒತ್ತಡ, ಜ್ವರ, ಕೆಮ್ಮು, ಶೀತಾ ಇತರೆ ರೋಗ ಲಕ್ಷಣಗಳಿದ್ದರೆ ತಕ್ಷಣ ಸಮೀಪದ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಿ ಎಂದು ಡಿಹೆಚ್‍ಓ ಡಾ.ನಾಗೇಂದ್ರಪ್ಪ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.
ವೈಯಕ್ತಿಕ ಸ್ವಚ್ಚತೆಗಾಗಿ ಸ್ವಚ್ಚಗೊಳಿಸುವ ದ್ರಾವಣ, ನೀರು ಮತ್ತು ಸೋಪು ಬಳಸಿ ಆಗಾಗ ಕೈಗಳನ್ನು ತೊಳೆದುಕೊಳ್ಳಬೇಕು. ಸಾಮಾಜಿಕ ಅಂತರ ಕಾಪಾಡುವುದು, ಮಾಸ್ಕ್ ಧರಿಸುವುದು ಕಡ್ಡಾಯ. ಸಾರ್ವಜನಿಕವಾಗಿ ಗುಂಪುಗೂಡದಂತೆ ಎಚ್ಚರವಹಿಸಬೇಕು ಎಂದು ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap