ತಿಪಟೂರು :

ನಗರದ ನಗರಸಭೆಯಲ್ಲಿ ಪೌರಾಯುಕ್ತರಿಲ್ಲದೇ ಯಾವುದೇ ಕೆಲಸಗಳು ಆಗುತ್ತಿಲ್ಲವೆಂದು ಹೇಳುತ್ತಿರುವ ನಾಗರೀಕರು ಬುಧವಾರ ಎಂ.ಎಸ್.ಟಿ ರಸ್ತೆಯಲ್ಲಿ ನಡೆಯುತ್ತಿರುವ ಚರಂಡಿ ಕಾಮಗಾರಿಯನ್ನು ವೀಕ್ಷಿಸಲು ಹೋಗಿದ್ದ ನಗರಸಭೆ ಎ.ಇ.ಇ. ನಾಗೇಶ್‍ರನ್ನು ಸಾರ್ವಜನಿಕರು ತರಾಟೆಗೆ ತೆಗೆದುಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸ್ಥಳೀಯರು ಹೇಳುವ ಪ್ರಕಾರ ಚರಂಡಿ ಚೆನ್ನಾಗಿಯೇ ಇದ್ದು ನೀರು ನಿಲ್ಲದೇ ಸರಾಗವಾಗಿ ಹೋಗುತ್ತಿತ್ತು ಆದರೆ ಕಳೆದ 15 ದಿನಗಳ ಸಿಮೆಂಟ್ ಚರಂಡಿ ಮಾಡುವ ಉದ್ದೇಶದಿಂದ ಹಿಂದೆ ಇದ್ದ ಚರಂಡಿಯನ್ನು ಕಿತ್ತುಹಾಕಿ ಮಹಿಳೆಯರು ಮತ್ತು ಮಕ್ಕಳು ಓಡಾಡದ ವಾತವಾರಣ ನಿರ್ಮಾಣವಾಗುವುದರ ಜೊತೆಗೆ ನೀರು ನಿಂತು ಗಬ್ಬುನಾಥ ಬೀರುತ್ತಿದೆ ಮತ್ತು ನೀಂತ ನೀರಿನಲ್ಲಿ ವಿಪರೀತವಾಗಿ ಸೊಳ್ಳೆಗಳು ಇದ್ದು ಸ್ಥಳೀಯರಿಗೆ ಸಾಂಕ್ರಾಮಿಕ ರೋಗವನ್ನು ಉಂಟುಮಾಡುವ ಸ್ಥಿತಿಗೆ ನಗರಸಭೆ ತಂದು ನಿಲ್ಲಿಸಿದೆ ಎಂದು ಆಕ್ರೋಶವ್ಯಕ್ತಪಡಿಸಿದರು.
ನಾನು ಯಾರು ನೋಡಲಿ ಎಂದು ಕೆಲಸ ಮಾಡುವುದಿಲ್ಲ : ನಗರಸಭೆ ಎ.ಇ.ಇ. ನಾಗೇಶ್ ಮಾತನಾಡುವ ವಿಡಿಯೋದಲ್ಲಿ ನಾನು ಇಲ್ಲಗೆ ನಾಲೈದು ಬಾರಿ ಬಂದು ಸ್ಥಳ ವೀಕ್ಷಣೇ ಮಾಡಿದ್ದೇನೆ ಎನ್ನುತ್ತಾರೆ ಇದರಿಂದ ಸಿಟ್ಟಿಗೆದ್ದ ಸ್ಥಳೀಯರು ನೀವು ಬಂದಿರುವುದನ್ನು ನಾವ್ಯಾರೂ ನೋಡೆಇಲ್ಲಿ ನೀವು ಇಲ್ಲದ ಸುಳ್ಳನ್ನೇಳುತ್ತೀರಿ ಎಂದಾಗ, ನಗರಸಭೆ ಎ.ಇ.ಇ. ನಾಗೇಶ್ ನಾನು ಯಾರಾದು ನೋಡಲಿ ಎಂದು ಕೆಲಸಮಾಡುವವನಲ್ಲ ನನ್ನ ಕೆಲಸವನ್ನು ಮಾಡುತ್ತೇನೆ ನಾನು ಎಂದು ಸಾರ್ವಜನಿಕರಿಗೆ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
