ಅತಿವೇಗದ ಚಾಲನೆಗೆ 3300ರೂ ದಂಡ

ಕೊರಟಗೆರೆ:-

      ಖಾಸಗಿ ಬಸ್ಸಿನ ಒಳಗಡೆ ಮತ್ತು ಬಸ್ಸೀನ ಮೇಲ್ಚಾವಣಿಯ ಮೇಲೆ ಪರವಾನಗಿ ಉಲ್ಲಂಘನೆ ಮಾಡಿ ಅತಿಹೆಚ್ಚಿನ ಪ್ರಯಾಣಿಕರನ್ನು ತುಂಬಿದ್ದ ಹಿನ್ನಲೆಯಲ್ಲಿ ಕೊರಟಗೆರೆ ಪಿಎಸೈ ಮಂಜುನಾಥ ಪೊಲೀಸರ ತಂಡ ಖಾಸಗಿ ಬಸ್ಸು ಮತ್ತು ಚಾಲಕನನ್ನು ವಶಕ್ಕೆ ಪಡೆದಿರುವ ಘಟನೆ ಇತ್ತೀಚಿಗೆ ನಡೆದಿದೆ.

      ತುಮಕೂರು ನಗರದಿಂದ ಮಧುಗಿರಿ ಪಟ್ಟಣಕ್ಕೆ ಪ್ರತಿನಿತ್ಯ ಪ್ರಯಾಣಿಕರನ್ನು ಸಾಗಿಸುವ ಬಾಲಾಜಿ ಟ್ರಾನ್ಸ್‍ಪೋರ್ಟ್ ಎಂಬ ಖಾಸಗಿ ಬಸ್ಸು ಅತಿವೇಗವಾಗಿ ಚಲಿಸುತ್ತೀದ್ದ ಬಗ್ಗೆ ಸಾರ್ವಜನಿಕರಿಂದ ದೂರು ಪಡೆದ ತುಮಕೂರು ಪೊಲೀಸರ ಅಧಿಕ್ಷಕ ಡಾ.ವಂಶಿಕೃಷ್ಣ ಬಸ್ಸಿನ ಮೇಲೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.

      ತುಮಕೂರು ಪೊಲೀಸ್ ಅಧಿಕ್ಷಕರ ಸೂಚನೆಯಂತೆ ಕೊರಟಗೆರೆ ಪಟ್ಟಣದಲ್ಲಿ ಬುಧವಾರ ಸಂಜೆ 6ಗಂಟೆ ವೇಳೆಯಲ್ಲಿ ಖಾಸಗಿ ಬಸ್ಸುನ್ನು ತಡೆದಾಗ ಬಸ್ಸಿನ ಮೇಲೆ ಸುಮಾರು 30ಜನ ಪ್ರಯಾಣಿಕರು ಮತ್ತು ಬಸ್ಸಿನ ಒಳಗೆ ಸುಮಾರು 70ಜನ ಪ್ರಯಾಣಿಕರು ಇರುವುದು ದೃಡಪಟ್ಟಿದೆ.

       ಪರವಾನಗಿ ಉಲ್ಲಂಘಿಸಿ ಅತಿವೇಗದ ವಾಹನ ಚಾಲನೆ ಮತ್ತು ಹೆಚ್ಚಿನ ಪ್ರಯಾಣಿಕರನ್ನು ತುಂಬಿದ್ದ ಹಿನ್ನಲೆಯಲ್ಲಿ ವಾಹನ ಸವಾರ ಲಿಂಗರಾಜು ಮೇಲೆ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನ್ಯಾಯಾಲಯದಲ್ಲಿ ತನ್ನ ತಪ್ಪನ್ನು ಒಪ್ಪಿಕೊಂಡ ಬಸ್ಸಿನ ಚಾಲಕ ಮಾಡಿದ ತಪ್ಪಿಗಾಗಿ 3300ರೂ ದಂಡವನ್ನು ಕಟ್ಟಿರುವ ಘಟನೆ ನಡೆದಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap