ಪಾವಗಡ
ಪಾವಗಡ ತಾಲ್ಲೂಕಿನ ಗಡಿಭಾಗವಾದ ಕಂಬದೂರು ಗ್ರಾಮದಲ್ಲಿ ಇದೇ 20 ರ ಶನಿವಾರ ಶ್ರೀಕೃಷ್ಣದೇವರಾಯನ ಕಂಚಿನ ಪ್ರತಿಮೆ ಲೊಕಾರ್ಪಣೆಗೊಳ್ಳಲಿದೆ. ಪಾವಗಡ ತಾಲ್ಲೂಕಿನ ಬಲಿಜ ಜನಾಂಗದ ಕುಲಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಪಾವಗಡ ತಾಲ್ಲೂಕು ಬಲಿಜ ಸಂಘದ ಅಧ್ಯಕ್ಷ ಗೊಂಚಿಕಾರ್‍ಗುರ್ರಪ್ಪ ಕರೆ ನೀಡಿದ್ದಾರೆ.
ಅಂದು ಬೆಳಗ್ಗೆ ಕಂಬದೂರು ಗ್ರಾಮದ ಅಂಚೆಕಚೇರಿ ಸರ್ಕಲ್ ಬಳಿ 12 ಅಡಿ ಎತ್ತರದ ಶ್ರೀಕೃಷ್ಣದೇವರಾಯನ ವಿಗ್ರಹವು ಲೋಕಾರ್ಪಣೆಯಾಗಲಿದ್ದು, ಬೃಹತ್ ಮೆರವಣಿಗೆ, ಕಳಸಪೂಜೆ, ವೇದಿಕೆ ಕಾರ್ಯಕ್ರಮ, ಸಾಂಸ್ಕತಿಕ ಕಾರ್ಯಕ್ರಮಗಳು ನಡೆಯಲಿವೆ. ಕುಲಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಗೊಂಚಿಕಾರ್‍ಗುರ್ರಪ್ಪ ತಿಳಿಸಿದ್ದಾರೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
