ಹಾವೇರಿ
ನಗರದ ಹರಸೂರು ಬಣ್ಣದ ಮಠದ ಮಲ್ಲಿಕಾರ್ಜುನ ಸ್ವಾಮೀಜಿಗಳ 34ನೇ ಪುಣ್ಯ ದಿನಾಚರಣೆ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಎ.30 ರಿಂದ ಮೂರು ದಿನಗಳ ಕಾಲ ಆಯೋಜನೆ ಮಾಡಲಾಗಿದೆ. ಒಂದು ದಿನ ರಂಭಾಪುರಿ ಜಗದ್ಗುರುಗಳು ಹಾಗೂ ಒಂದು ದಿನ ಉಜ್ಜಯಿನಿ ಜಗದ್ಗುರುಗಳು ಸಾನಿಧ್ಯವಹಿಸಲಿದ್ದಾರೆ ಎಂದು ಹರಸೂರು ಬಣ್ಣದಮಠದ ಅಭಿನವರುದ್ರ ಚನ್ನಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.
ನಗರದ ಹಸರೂರು ಬಣ್ಣದಮಠದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಮೂರು ದಿನಗಳ ಕಾರ್ಯಕ್ರಮಗಳಲ್ಲಿ ಅಭಿವರುದ್ರ ಚನ್ನಮಲ್ಲಿಕಾರ್ಜುನ ಶ್ರೀಗಳ ಪಟ್ಟಾಧಿಕಾರದ 9 ನೇ ವರ್ಧಂತಿ ಕಾರ್ಯಕ್ರಮ, ಮಹೇಶ್ವರ ವಟುಗಳಿಗೆ ಲೀಂಗ ಧೀಕ್ಷೆ(ಅಯ್ಯಾಚಾರ), ಸರ್ಪಶಾಂತಿ ಹೋಮ, ಪ್ರತಿಭಾ ಪುರಸ್ಕಾರ, ಜಿಲ್ಲೆಯ ಯುವ ಸಾಧಕರಿಗೆ ಸನ್ಮಾನ, ಭಾರತೀಯ ಯೋಧರಿಗೊಂದು ವೀರ ನಮನ, ಸಾವಯವ ಕೃಷಿ ಕುರಿತಾದ ಉಪನ್ಯಾಸ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮದ ಅದ್ಯಕ್ಷ ಜಗದೀಶ ಕನವಳ್ಳಿ, ಗೌರವಾಧ್ಯಕ್ಷ ಶಿವಬಸಪ್ಪ ಮತ್ತಿಹಳ್ಳಿ, ಉಪಾಧ್ಯಕ್ಷ ಶಿವಯೋಗಿ ಹುಲಿಕಂತಿಮಠ, ಬಸವರಾಜ ಜಾಬೀನ, ಶಂಭಣ್ಣ ನಂದಿ, ಮಡಿವಾಳಪ್ಪ ಸಾತೇನಹಳ್ಳಿ, ಮಹಲಿಂಗಸ್ವಾಮಿ ಹಿರೇಮಠ, ಶಿವರಾಜ ಮತ್ತಿಹಳ್ಳಿ, ವಾಯ್.ಐ.ಮಡಿವಾಳರ, ನಾಗಣ್ಣ ವಿಭೂತಿ, ರುದ್ರಣ್ಣ ಅಂಗಡಿ, ವಿರುಪಾಕ್ಷಯ್ಯ ಗೌಡಗೇರಿಮಠ ಹಾಗೂ ಇತರರಿದ್ದರು. ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ವಾಲ್ ಪೋಸ್ಟರನ್ನು ಬಿಡುಗಡೆ ಮಾಡಲಾಯಿತು.
ವಿದ್ಯಾರ್ಥಿಗಳಿಗೆ ಸನ್ಮಾನ : ಪಿ.ಯು.ಸಿ ಹಾಗೂ ಎಸ್ಎಸ್ಎಲ್ಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ನಾಲ್ಕು ವಿದ್ಯಾರ್ಥಿಗಳಿಗೆ ಸನ್ಮಾನವನ್ನು ಮಾಡಲಾಗುವುದು. ಸರ್ಪ ಶಾಂತಿ ಹೋಮವನ್ನು ಮಾಡಲಾಗುತ್ತದೆ. 108 ಜನ ಮುತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ, ಸಾಂಸ್ಕತಿಕ ಕಾರ್ಯಕ್ರಮಗಳೊಂದಿಗೆ ಧಮ್ರ್ಮೋತ್ತೇಜಕ ಸಮಾರಂಭವನ್ನು ಆಯೋಜನೆ ಮಾಡಲಾಗಿದೆ ಎಂದು ತಿಳಿಸಿದರು.
ಎ.30 ಕಾರ್ಯಕ್ರಮ :
ನಗರದ ಗುರುಪಾದದೇವರಮಠದ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿಗಳ ಸಾನಿಧ್ಯದಲ್ಲಿ ಎ,30 ರಂದು ಸಂಜೆ 6ಕ್ಕೆ ಅಕ್ಕಿ ಆಲೂರ ವಿರಕ್ತಮಠದ ಶಿವಬಸವ ಸ್ವಾಮೀಜಿ ಕಾರ್ಯಕ್ರಮವನ್ನು ಉದ್ಘಾಟಿಸುವರು. ಸಮ್ಮುಖವನ್ನು ನಗರದ ಹುಕ್ಕೇರಿಮಠದ ಸದಾಶಿವ ಸ್ವಾಮಿಜಿ ಹಾಗೂ ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ, ಅಧ್ಯಕ್ಷತೆಯನ್ನು ಹರಸೂರು ಬಣ್ಣದಮಠದ ಅಭಿನವರುದ್ರ ಚನ್ನಮಲ್ಲಿಕಾರ್ಜುನ ಸ್ವಾಮೀಜಿ ವಹಿಸಲಿದ್ದಾರೆ.
ಅತಿಥಿಗಳಾಗಿ ನಗರಸಭಾ ಸದಸ್ಯರು ಮತ್ತು ವಿಶೇಷ ಆಹ್ವಾನಿತರಾಗಿ ಶಾಸಕರು, ಮಾಜಿ ಸಚಿವರು ಸೇರಿದಂತೆ ಅನೇಕ ಜನಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ.
ಮೇ-01 ಕಾರ್ಯಕ್ರಮ :
ಉಜ್ಜೈನಿ ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಫಾದರ ಸಾನಿಧ್ಯದಲ್ಲಿ ಮೇ.1 ರಂದು ಧಮರ್ಮೋತ್ತೇಜಕ ಸಮಾರಭ ಜರುಗಲಿದೆ. ಸಮ್ಮುಖವನ್ನು ಹರಸೂರು ಬಣ್ಣದಮಠದ ಅಭಿನವರುದ್ರ ಚನ್ನಮಲ್ಲಿಕಾರ್ಜುನ ಸ್ವಾಮೀಜಿ, ಅಧ್ಯಕ್ಷತೆಯನ್ನು ರೇವಣಶಿದ್ಧ ಶಿವಾಚಾರ್ಯ ಸ್ವಾಮೀಜಿ, ಉಪದೇಶವನ್ನು ಮದ್ದಕಿ, ರಾಣೇಬೆನ್ನೂರ ಹಿರೇಮಠದ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ, ಹೇರೂರ ಗುಬ್ಬಿಮಠದ ನಂಜುಂಡ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಕೂಡಲ ಗುರುನಂಜೇಶ್ವರ ಕ್ಷೇತ್ರದ ಗುರುಮಹೇಶ್ವರ ಸ್ವಾಮೀಜಿ ನೀಡುವರು.
ಅತಿಥಿಗಳಾಗಿ ಡಾ. ದೀಪಾ ವಾಗೀಶ ಛತ್ರದಮಠ, ಡಾ. ವಿನಾಯಕ ಬ್ಯಾಟಪ್ಪನವರ, ಲತಾ.ಕೆ.ಮಂಜಪ್ಪ, ಪ್ರಕಾಶ ಶೆಟ್ಟಿ, ಕೃಷ್ಣಮೂರ್ತಿ ಕಳಂಜ, ಮಲ್ಲಿಕಾರ್ಜುನ ಮಠದ, ವೀರಯ್ಯ ಹಿರೇಮಠ ಪಾಲ್ಗೊಳ್ಳಲಿದ್ದಾರೆ.
ಮೇ-02 ಕಾರ್ಯಕ್ರಮ :
ಮೂರನೆ ಹಾಗು ಕೊನೆ ದಿನದ ಧರ್ಮ ಸಭೆಯ ಸಾನಿಧ್ಯವನ್ನು ರಂಭಾಪುರಿ ಜಗದ್ಗುರು ಡಾ. ಪ್ರಸನ್ನ ರೇಣುಕ ವೀರ ಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ವಹಿಸಲಿದ್ದು. ಅಧ್ಯಕ್ಷತೆಯನ್ನು ರಟ್ಟಿಹಳ್ಳಿ ಕಬ್ಬಿಣಕಂತಿಮಠದ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ, ಸಮ್ಮುಖವನ್ನು ಹರಸೂರು ಬಣ್ಣದಮಠದ ಅಭಿನವರುದ್ರ ಚನ್ನಮಲ್ಲಿಕಾರ್ಜುನ ಸ್ವಾಮೀಜಿ ವಹಿಸುವರು.
ಉಪದೇಶವನ್ನು ಬಿಳಕಿಯ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ, ಮಾದಿಹಳ್ಳಿಯ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ಅಕ್ಕಿಆಲೂರಿನ ಮುತ್ತಿನಕಂತಿಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಬಿಳಗಿಯ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ನೀಡುವರು.
ಯೋಧರಿಗೊಂದು ನುಡಿ ನಮನ ಕಾರ್ಯಕ್ರಮವನ್ನು ದೇವಿಹೊಸೂರಿನ ಶಶಿಧರ ಹೊಸಳ್ಳಿ ನಡೆಸಿಕೊಡುವರು. ಜಿಲ್ಲೆಯ ಯುವ ಸಾಧಕರಾದ ಗಾಯಕ ಹನುಮಂತಪ್ಪ ಲಮಾಣಿ, ಕಬಡ್ಡಿ ಸ್ಪರ್ದಾಳು ಸುಧಾ ಹಿರೇಮಠ, ಕಂಪ್ಯೂಟರ ಶಿಕ್ಷಕ ಸುನೀಲ ಹಿರೇಮಠ, ಆಂಗ್ಲ ಮಾಧ್ಯಮದಲ್ಲಿ ಓದಿದರೂ ಕನ್ನಡದಲ್ಲಿ 99 ಅಂಕ ಪಡೆದಿರುವ ಚಂದನಾ ಅಕ್ಕಿ ಅವರನ್ನು ಸನ್ಮಾನಿಸಲಾಗುತ್ತಿದೆ. ಅತಿಥಿಗಳಾಗಿ ಅನೇಕ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಹರಸೂರು ಬಣ್ಣದಮಠದ ಅಭಿನವರುದ್ರ ಚನ್ನಮಲ್ಲಿಕಾರ್ಜುನ ಸ್ವಾಮೀಜಿ ತಿಳಿದರು.