ಬಿಎಸ್ಪಿ ಪಕ್ಷದ ಲೋಕಸಭಾ ಚುನಾವಣೆಯ ಪ್ರಚಾರ ಸಭೆ

ಹಾವೇರಿ :

       ವಕೀಲರ ವೃತ್ತಿಯಲ್ಲಿ ನಮ್ಮವರಾಗಿ ಕೆಲಸ ಕಾರ್ಯನಿರ್ವಹಿಸಿ ಈಗ ಬಿಎಸ್ಪಿ ಪಕ್ಷದ ಹಾವೇರಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳಾದ ಎ.ಎ ಪಾಠಣ ಅವರ ಸಾಮಾಜಿಕ ಸೇವೆ ಅಪಾರವಿದೆ ಎಂದು ಹಾವೇರಿ ವಕೀಲರ ಸಂಘದ ಅಧ್ಯಕ್ಷರಾದ ಕೆಸಿ ಪಾವಲಿ ಹೇಳಿದರು.

       ನಗರದ ನ್ಯಾಯವಾದಿಗಳ ಸಂಘದಲ್ಲಿ ನಡೆದ ಬಿಎಸ್ಪಿ ಪಕ್ಷದ ಲೋಕಸಭಾ ಚುನಾವಣೆಯ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ನಾವು ಅವರ ಎಲ್ಲ ಗುಣಗಳನ್ನು ನೋಡಿದ್ದೇವೆ.ಅವರು ಬಡವರ ಹಿಂದುಳಿದವರ ಹಾಗೂ ಎಲ್ಲ ವರ್ಗದ ಜನರ ಸೇವೆಯನ್ನು ಮಾಡುತ್ತಾ ಗದಗ-ಹಾವೇರಿ ನ್ಯಾಯಾಲಯಗಳಲ್ಲಿ ಎಲ್ಲ ವಕೀಲರ ವೃತ್ತಿ ಭಾಂದವರೊಂದಿಗೆ ಉತ್ತಮ ಭಾಂದವ್ಯ ಹೊಂದಿದ್ದಾರೆ.

          ಎ.ಎ ಪಾಠಣ ಅವರು ರಾಷ್ಟೀಯ ಪಕ್ಷವಾದ ಬಿಎಸ್ಪಿ ಪಕ್ಷದಹಾವೇರಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಿರುವುದು ತುಂಬಾ ಸಂತೋಷಕರ.ಇವರು ವಕೀಲರ ಸಂಘದ ಸದಸ್ಯರಾಗಿದ್ದು ಇವರಿಗೆ ನಾವೆಲ್ಲರೂ ಸೇರಿ ಬೆಂಬಲ ನೀಡಿ ಇವರ ಗೆಲುವಿಗೆ ಎಲ್ಲ ಹಿರಿಯ ಹಾಗೂ ಕಿರಿಯ ವಕೀಲರು ಶ್ರಮಸೋಣ ಎಂದು ಕರೆ ನೀಡಿದರು.

         ವಕೀಲರ ಸಂಘದ ಜಿಲ್ಲಾ ಕಾರ್ಯದರ್ಶಿಗಳು ಹಾಗೂ ನ್ಯಾಯವಾದಿಗಳಾದ ಪಿ.ಎಂ ಬೆನ್ನೂರ ಮಾತನಾಡಿ ಎ.ಎ ಪಠಾಣ ಅವರು ನಮ್ಮೊಂದಿಗೆ ಸಹಕಾರಯುತವಾಗಿ ಬೆಳೆದವರು. ಈ ಬಾರಿ ಹಾವೇರಿ ಲೋಕಸಭಾ ಕ್ಷೇತ್ರದ ಬಿಎಸ್ಪಿ ಪಕ್ಷದ ಅಭ್ಯರ್ಥಿವಾಗಿದ್ದು ಅವರನ್ನು ಬೆಂಬಲಿಸಿ ನ್ಯಾಯವಾದಿಗಳೊಬ್ಬರು ಜಿಲ್ಲೆಯಿಂದ ಸಂಸದರಾಗುವಂತೆ ನಾವೆಲರೂ ಶ್ರಮಿಸೋಣ ಎಂದರು. ಬಿಎಸ್ಪಿ ಪಕ್ಷದ ಅಭ್ಯರ್ಥಿಗಳಾದ ಎ.ಎ ಪಠಾಣ ಮಾತನಾಡಿ ಈವರಿಗೆ ಜಿಲ್ಲೆಯ ನ್ಯಾಯವಾದಿಗಳು ಲೋಕಸಭೆಗೆ ಸ್ಪರ್ಧೆ ಮಾಡಿದ್ದು ವಿರಳ.

         ಹಾವೇರಿ-ಗದಗ ಜಿಲ್ಲೆಯ ಎಲ್ಲ ವಕೀಲರ ಪ್ರತಿನಿಧಿಗಳಾಗಿ ನಾನು ಸ್ಪರ್ಧೆ ಮಾಡುತ್ತಿದ್ದು, ಎಲ್ಲರೂ ನನಗೆ ಬೆಂಬಲ ನೀಡುವಂತೆ ವಿನಂತಿಸಿಕೊಂಡರು. ಬಿಎಸ್ಪಿ ಜಿಲ್ಲಾಧ್ಯಕ್ಷರಾದ ಅಶೋಕ ಮರೆಣ್ಣನವರ ಉತ್ತಮ ಅಭ್ಯರ್ಥಿಯಾದ ನಮ್ಮೆಲ್ಲರ ಸೇವಕರಾಗಿ ಕೆಲಸ ಮಾಡಲು ಎ.ಎ ಪಠಾಣ ಅವರನ್ನು ಗೆಲ್ಲಿಸಲು ಸಹಕರಿಸಿ ಎಂದು ಮತಯಾಚಿಸಿದರು. ಜಿಲ್ಲಾ ನ್ಯಾಯವಾದಿ ಸಂಘದ ಪದಾಧಿಕಾರಿಗಳು,ನೂರಾರು ಹಿರಿಯ- ಕಿರಿಯ ವಕೀಲರು ಸಭೆಯಲ್ಲಿ ಪಾಲ್ಗೊಂಡು ಬೆಂಬಲ ಸೂಚಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link