ಶಿರಾ
ಇಂದಿನಿಂದ ಎಸ್.ಎಸ್.ಎಲ್.ಸಿ. ಪರೀಕ್ಷೆ ಆರಂಭಗೊಳ್ಳಲಿದ್ದು, ಪರೀಕ್ಷೆಯನ್ನು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ ಕೈಗೊಳ್ಳಲು ಎಲ್ಲಾ ರೀತಿಯ ವ್ಯವಸ್ಥೆ ಮಾಡಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ನಟರಾಜ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾಲ್ಲೂಕಿನಲ್ಲಿ ಒಟ್ಟು 4294 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. 17 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಕೋವಿಡ್-19 ಹಿನ್ನೆಲೆಯಲ್ಲಿ ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಈಗಾಗಲೆ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲೂ ಸ್ಯಾನಿಟರೈಸ್ ಮಾಡಲಾಗಿದೆ. ಕುಡಿಯುವ ನೀರು, ಶೌಚಾಲಯ ಸೇರಿದಂತೆ ಎಲ್ಲಾ ರೀತಿಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ತಿಳಿಸಿದ್ದಾರೆ.
ಪ್ರತಿಯೊಂದು ಕೇಂದ್ರದಲ್ಲೂ ಸಿ.ಸಿ. ಟಿ.ವಿ ಅಳವಡಿಸಲಾಗಿದ್ದು, ಪ್ರತಿಯೊಬ್ಬ ವಿದ್ಯಾರ್ಥಿಗೂ ನಾಲ್ಕು ಉಚಿತ ಮಾಸ್ಕ್‍ಗಳು, ಸ್ಯಾನಿಟೈಸರ್ ವಿತರಿಸಲಾಗುವುದು. ಎಲ್ಲಾ ವಿದ್ಯಾರ್ಥಿಗಳಿಗೂ ಥರ್ಮಲ್ ಸ್ಕ್ಯಾನಿಂಗ್ ಮಾqಲಾಗುವುದು. ಸ್ಥಳದಲ್ಲಿಯೇ ಆರೋಗ್ಯ ಸಿಬ್ಬಂದಿ ಹಾಜರಿದ್ದು, ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.ಪ್ರತೀ ಪರೀಕ್ಷಾ ಕೇಂದ್ರಕ್ಕೆ ಇಬ್ಬರು ದೈಹಿಕ ಶಿಕ್ಷಣ ಶಿಕ್ಷಕರನ್ನು ಹಾಗೂ ಸ್ಕೌಟ್ಸ್ ಮತ್ತು ಗೈಡ್ಸ್ ಸಿಬ್ಬಂಧಿಯಿಂದ ಸ್ವಯಂ ಸೇವಕರನ್ನು ನೇಮಿಸಿ ಸಾಮಾಜಿಕ ಅಂತರ ಕಾಪಾಡಲಾಗುವುದು.
ಹುಂಜಿನಾಳು, ಎತ್ತಪ್ಪನಹಟ್ಟಿ, ತರೂರು ಪರೀಕ್ಷಾ ಕೇಂದ್ರಕ್ಕೆ-2 ಬಸ್‍ಗಳು. ಮೇಕೇರಹಳ್ಳಿ, ಹೊನ್ನೇನಹಳ್ಳಿ, ಬುಕ್ಕಾಪಟ್ಟಣ ಪರೀಕ್ಷಾ ಕೇಂದ್ರಕ್ಕೆ-1 ಬಸ್, ಸಕ್ಕರ, ದ್ವಾರನಕುಂಟೆ, ಚಂಗಾವರ ಪರೀಕ್ಷಾ ಕೇಂದ್ರಕ್ಕೆ-2 ಬಸ್‍ಗಳು, ಸಾಕ್ಷಿಹಳ್ಳಿ, ಬುಕ್ಕಾಪಟ್ಟಣ ಪರೀಕ್ಷಾ ಕೇಂದ್ರಕ್ಕೆ-1, ಬೂತಕಾಟನಹಳ್ಳಿ, ಬಂದಕುಂಟೆ ಮಾರ್ಗದಿಂದ ಪ.ನಾ.ಹಳ್ಳಿ ಪರೀಕ್ಷಾ ಕೇಂದ್ರಕ್ಕೆ -2 ಬಸ್, ಚಿರತಹಳ್ಳಿ, ಲಕ್ಕನಹಳ್ಳಿ, ಹುಲಿಕುಂಟೆ ಗೇಟ್ ಮಾರ್ಗದಿಂದ ಶಿರಾ ಪರೀಕ್ಷಾ ಕೇಂದ್ರಕ್ಕೆ 1 ಬಸ್, ಬರಗೂರು, ಹುಳಿಗೆರೆ, ಮದಲೂರು ಮಾರ್ಗದಿಂದ ಶಿರಾ ಪರೀಕ್ಷಾ ಕೇಂದ್ರಕ್ಕೆ 1 ಬಸ್ ವ್ಯವಸ್ಥೆ ಮಾಡಲಾಗಿದೆ.
ಉಜ್ಜನಕುಂಟೆ, ತಾವರೇಕೆರೆ, ಮಾನಂಗಿ ಮಾರ್ಗದಿಂದ ಶಿರಾ ಪರೀಕ್ಷಾ ಕೇಂದ್ರಕ್ಕೆ, ಬೇವಿನಹಳ್ಳಿ, ಹೊನ್ನೇನಹಳ್ಳಿ ಮಾರ್ಗದಿಂದ ಸಿರಾ ಪರೀಕ್ಷಾ ಕೇಂದ್ರಕ್ಕೆ, ಬುಕ್ಕಾಪಟ್ಟಣ, ಹುಯಿಲ್‍ದೊರೆ, ರಂಗನಾಥಪುರ ಮಾರ್ಗದಿಂದ ಶಿರಾ ಪರೀಕ್ಷಾ ಕೇಂದ್ರಕ್ಕೆ ತಲಾ ಒಂದೊಂದು ಬಸ್‍ಗಳ ವ್ಯವಸ್ಥೆ ಮಾಡಲಾಗಿದೆ.
ಗೌಡಗೆರೆ, ಮದ್ದಕ್ಕನಹಳ್ಳಿ ಮಾರ್ಗದಿಂದ ತಾವರೇಕೆರೆ ಪರೀಕ್ಷಾ ಕೇಂದ್ರ ಹಾಗೂ ಕೊಟ್ಟಿ-ಹುಲಿಕುಂಟೆ ಮಾರ್ಗದಿಂದ ಲಕ್ಕನಹಳ್ಳಿ ಪರೀಕ್ಷಾ ಕೇಂದ್ರಕ್ಕೆ ತಲಾ ಎರಡೆರಡು ಬಸ್‍ಗಳ ವ್ಯವಸ್ಥೆ ಮಾಡಲಾಗಿದ್ದು, ಸಕಾಲಕ್ಕೆ ವಿದ್ಯಾರ್ಥಿಗಳು ಈ ಬಸ್‍ಗಳ ಸೌಲಭ್ಯ ಪಡೆಯಬಹುದಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
