ಬೆಂಗಳೂರು
ಜೈಲಿನಿಂದ ಜಾಮೀನಿನ ಮೇಲೆ ಹೊರಬಂದಿದ್ದ ಪುಡಿ ರೌಡಿ ದೇವರಾಜ್‍ನನ್ನು ಕೊಚ್ಚಿ ಕೊಲೆ ಮಾಡಿ ಅಪರಾಧ ಜಗತ್ತಿನಲ್ಲಿ ಹೆಸರು ಮಾಡಲು ಗ್ಯಾಂಗ್ ಕಟ್ಟಿಕೊಂಡು ಐವರು ಆರೋಪಿಗಳು ಅತ್ತಿಬೆಲೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.ಅನೇಕಲ್‍ನ ಬೆಸ್ತಮಾನಹಳ್ಳಿಯ ವಿನಿತ್(21) ಮುನೇಂದ್ರ(20) ವಜ್ರಮುನಿ (25) ಮನು (21) ಹಾಗೂ ಕಾರ್ತಿಕ್ (21) ಬಂಧಿತ ಆರೋಪಿಗಳಾಗಿದ್ದಾರೆ.ಕೃತ್ಯದಲ್ಲಿ ಭಾಗಿಯಾಗಿ ತಲೆ ಮರೆಸಿಕೊಂಡಿರುವ ಮತ್ತೊರ್ವ ಆರೋಪಿ ಹೊಸೂರಿನ ಪ್ರವೀಣ್ ಬಂಧನಕ್ಕೆ ಶೋಧ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ
ಆರೋಪಿಗಳು ಇದೇ ತಿಂಗಳ 14 ರಂದು ಎಂ ಮೇಡಹಳ್ಳಿ ಬಡಾವಣೆಯೊಂದರ ಬಳಿ ಯವಕ ದೇವರಾಜ್ (23) ಬರ್ಬರವಾಗಿ ಕೊಲೆ ಮಾಡಿದ್ದರು.ಪ್ರಕರಣವನ್ನು ಬೆನ್ನತ್ತಿದ್ದ ಪೊಲೀಸರು ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ಕೈಗೊಂಡು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ದೇವರಾಜ್ ಕೊಲೆಯ ಸೂತ್ರಧಾರಿಗಳು ಸುನಿಲ್ ಹಾಗೂ ನವೀನ್ ಎನ್ನಲಾಗಿದ್ದು, ಇಬ್ಬರು ಈ ಹಿಂದೆ ಜಯಂತ್ ಎಂಬ ಯುವಕನ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಉಳಿದಂತೆ ಆನೇಕಲ್ ಮನು ಹಾಗೂ ಸುನಿಲ್ ಗ್ಯಾಂಗ್ ರೌಡಿಸಂನಲ್ಲಿ ಹೆಸರುಗಳಿಸಲು ಯತ್ನಿಸುತ್ತಿದ್ದು, ಜೈಲಿನಲ್ಲಿದ್ದುಕೊಂಡೆ ಸುನಿಲ್ ಹಾಗೂ ಮನುವಿನ ಸ್ನೇಹಿತ ದೇವರಾಜನನ್ನು ಬಳಿಸಿಕೊಂಡು ಕೊಲೆ ಮಾಡಿಸಿದ್ದಾನೆ.
ಸುನಿಲ್‍ನೊಂದಿಗೆ ಕಿರಿಕ್
ಕೊಲೆಯಾದ ದೇವರಾಜು ಕೂಡ ಕೆಲ ದಿನಗಳ ಹಿಂದೆ ಗಲಾಟೆಯೊಂದರಲ್ಲಿ ಜೈಲು ಸೇರಿದ್ದ. ಕೇವಲ ಒಂದೂವರೆ ತಿಂಗಳ ಹಿಂದಷ್ಟೇ ಜೈಲಿನಿಂದ ಹೊರಬಂದಿದ್ದ ಆತ ಅಪರಾಧ ಲೋಕದಲ್ಲಿ ಹೆಸರು ಮಾಡಲು ಮುಂದಾಗಿದ್ದ. ಈ ಹಂತದಲ್ಲಿ ಸುನಿಲ್ ನೊಂದಿಗೆ ಕಿರಿಕ್ ಮಾಡಿಕೊಂಡಿದ್ದ, ಇದರಿಂದ ರೊಚ್ಚಿಗೆದ್ದ ಸುನಿಲ್ ಜೈಲಿನಿಂದಲೇ ತನ್ನ ಹುಡುಗರಿಗೆ ತಿಳಿಸಿ ಸಂಚು ರೂಪಿಸಿ ಕೊಲೆ ಮಾಡಿಸಿದ್ದಾನೆ. ಕೊಲೆಯಾದ ದಿನ ದೇವರಾಜು ಮೊಬೈಲ್ ಬಂದಿದ್ದ ಕರೆ ಆಧರಿಸಿ ಆರೋಪಗಳನ್ನು ಬಂಧಿಸಲು ಪೆಲೀಸರು ಯಶಸ್ವಿಯಾಗಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
