ಬೋಟ್ ದುರಂತದಲ್ಲಿ ಮೃತಪಟ್ಟವರಿಗೆ ತಲಾ ಐದು ಲಕ್ಷ ರೂ. ಪರಿಹಾರ ಧನ

ಹಾವೇರಿ

         ಕಾರವಾರ ಬಳಿ ಅರಬ್ಬಿ ಸಮುದ್ರದಲ್ಲಿ ಹೊಸೂರು ಯತ್ನಳ್ಳಿ ಗ್ರಾಮದ ಒಂದೇ ಕುಟುಂಬದ 9 ಜನರು ಸಾವಿಗೀಡಾಗಿದ್ದು, ಅವರ ಪ್ರಾಣಕ್ಕೆ ಬೆಲೆ ಕಟ್ಟಲಾಗದು. ಆದರೂ ಸರ್ಕಾರದಿಂದ ಮೃತ ವ್ಯಕ್ತಿಗಳಿಗೆ ತಲಾ ಐದು ಲಕ್ಷ ರೂ.ದಂತೆ ಪರಿಹಾರ ಧನ ನೀಡಲಾಗುವುದು.

        ಸರ್ಕಾರದಿಂದ ಈ ಕುಟುಂಬಕ್ಕೆ ಶಿಕ್ಷಣ ನೆರವು ಸೇರಿದಂತೆ ಎಲ್ಲ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಗ್ರಾಹಕರ ವ್ಯವಹಾರಗಳು, ಅಲ್ಪಸಂಖ್ಯಾತರ ಕಲ್ಯಾಣ ಮತ್ತು ವಕ್ಫ್ ಹಾಗೂ ಹಜ್ ಸಚಿವರು ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಜೆಡ್.ಜಮೀರ್ ಅಹ್ಮದ್ ಖಾನ್ ಅವರು ಹೇಳಿದರು.

         ಗುರುವಾರ ಶಿಗ್ಗಾಂವ ತಾಲೂಕು ಹೊಸೂರು ಯತ್ನಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಮೃತ ಕುಟುಂಬಕ್ಕೆ ಸಾಂತ್ವಾನ ಹೇಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈವರೆಗೆ ಏಳು ಜನರ ಶವ ಪತ್ತೆಯಾಗಿದ್ದು ಇನ್ನೂ ಇಬ್ಬರ ಶವಗಳು ಪತ್ತೆಯಾಗಬೇಕಿದೆ ಸಂಜೆಯೊಳಗೆ ಪತ್ತೆ ಹಚ್ಚಲಾಗುವುದು. ಈ ದುರಂತದಲ್ಲಿ ಕುಟುಂಬದ ಒಂದೇ ಮಗು ಉಳಿದಿದ್ದು ಅದರ ಶಿಕ್ಷಣ ಹಾಗೂ ಭವಿಷ್ಯದ ಜವಾಬ್ದಾರಿಯನ್ನು ಶಾಸಕರಾದ ಬಸವರಾಜ ಬೊಮ್ಮಾಯಿ ಅವರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಹೇಳಿದರು.

          ಇದೇ ಸಂದರ್ಭದಲ್ಲಿ ಮೃತರ ಕುಟುಂಬದ ಹಿರಿಯರಾದ ಸೋಮಕ್ಕ, ರೇಣುಕವ್ವ ಅವರೊಂದಿಗೆ ಮಾತನಾಡಿ ಸಾಂತ್ವಾನ ಹೇಳಿದರು. ಘಟನೆಯಲ್ಲಿ ಬದುಕಿಳದ ಬಾಲಕ ಗಣೇಶನನ್ನು ಸಾಂತ್ವಾನಿಸಿ ಧೈರ್ಯ ತುಂಬಿದಿದರು.

         ಈ ಸಂದರ್ಭದಲ್ಲಿ ಶಾಸಕರಾದ ಬಸವರಾಜ ಬೊಮ್ಮಾಯಿ, ಜಿ.ಪಂ.ಅಧ್ಯಕ್ಷ ಎಸ್.ಕೆ.ಕರಿಯಣ್ಣನವರ, ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ, ಉಪವಿಭಾಗಾಧಿಕಾರಿ ಹರ್ಷಲ್ ನಾರಾಯಣ ಇತರರು ಉಪಸ್ಥಿತರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link